ಸದ್ಯ ಕಾವೇರಿ ನೀರು ಬಿಡಲು ಸಾಧ್ಯವಿಲ್ಲ: ತಮಿಳುನಾಡಿಗೆ ಕರ್ನಾಟಕ ಸರ್ಕಾರ ಸ್ಪಷ್ಟನೆ
ಸದ್ಯ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಶನಿವಾರ ಕರ್ನಾಟಕ ಸರ್ಕಾರ ತಮಿಳುನಾಡಿನ ಅಧಿಕಾರಿಗಳಿಗೆ...

Published On :
ಬೆಂಗಳೂರು: ಸದ್ಯ ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು ಕಾವೇರಿ ನೀರು ಹರಿಸಲು ಸಾಧ್ಯವಿಲ್ಲ ಎಂದು ಶನಿವಾರ ಕರ್ನಾಟಕ ಸರ್ಕಾರ ತಮಿಳುನಾಡಿನ ಅಧಿಕಾರಿಗಳಿಗೆ ಸ್ಪಷ್ಟವಾಗಿ ಹೇಳಿದೆ.
ಮಾನವೀಯತೆ ದೃಷ್ಟಿಯಿಂದ ರಾಜ್ಯಕ್ಕೆ ಕಾವೇರಿ ನೀರು ಹರಿಸಿ ಎಂದು ತಮಿಳುನಾಡು ಸರ್ಕಾರದ ಅಧಿಕಾರಿಗಳ ತಂಡ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿ ಅವರನ್ನು ಭೇಟಿ ಮಾಡಿ ಮನವಿ ಮಾಡಿತು. ಆದರೆ ರಾಜ್ಯದಲ್ಲಿ ತೀವ್ರ ಬರ ಸ್ಥಿತಿ ಇದ್ದು, ನಮಗೆ ಕುಡಿಯಲು ಸಹ ನೀರು ಇಲ್ಲ. ಹೀಗಾಗಿ ಮಳೆ ಬಂದರೆ ನೀರು ಬಿಡುತ್ತೇವೆ ಎಂದು ವಸ್ತು ಸ್ಥಿತಿಯನ್ನು ತಮಿಳುನಾಡು ತಂಡಕ್ಕೆ ವಿವರಿಸಿದರು.
ತಮಿಳುನಾಡು ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಶಿವದಾಸ್ ಮೀನ, ಸಾರ್ವಜನಿಕ ಕಾರ್ಯಗಳ ಪ್ರಧಾನ ಕಾರ್ಯದರ್ಶಿ ಎಸ್.ಕೆ. ಪ್ರಭಾಕರ್, ನಗರಾಡಳಿತ ಮತ್ತು ನೀರು ಸರಬರಾಜು ಇಲಾಖೆ ಪ್ರಧಾನ ಕಾರ್ಯದರ್ಶಿ ಕೆ. ಫಣೀಂದ್ರ ರೆಡ್ಡಿ, ಕಾವೇರಿ ತಾಂತ್ರಿಕ ಘಟಕದ ಅಧ್ಯಕ್ಷ ಆರ್. ಸುಬ್ರಮಣಿಯನ್ ಅವರನ್ನೊಳಗೊಂಡ ನಾಲ್ವರ ತಂಡ ಇಂದು ವಿಧಾನಸೌಧದಲ್ಲಿ ಕಾವೇರಿ ನೀರು ಹರಿಸುವ ಸಂಬಂಧ ರಾಜ್ಯ ಸರ್ಕಾರದ ಅಧಿಕಾರಿಗಳೊಂದಿಗೆಸಭೆ ನಡೆಸಿತು.
ತಮಿಳುನಾಡಿನಲ್ಲಿ ಕುಡಿಯವ ನೀರಿಗೆ ತೀವ್ರ ತೊಂದರೆ ಎದುರಾಗಿದೆ. ಆದ್ದರಿಂದ, ಕಾವೇರಿ ಕೊಳ್ಳದಿಂದ ಸ್ವಲ್ಪವಾದರೂ ನೀರು ಹರಿಸಿ ಎಂದು ತಂಡ ಸಭೆಯಲ್ಲಿ ಮನವಿ ಮಾಡಿತು.
ಸಭೆಯ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸುಭಾಷ್ ಚಂದ್ರ ಕುಂಟಿ ಅವರು, ತಮಿಳುನಾಡಿನಿಂದ ಬಂದಿರುವ ಅಧಿಕಾರಿಗಳ ತಂಡ ಕುಡಿಯಲು ನೀರು ಹರಿಸುವಂತೆ ಮನವಿ ಮಾಡಿತು. ರಾಜ್ಯದಲ್ಲೂ ಬರ ಇದ್ದು, ಇಲ್ಲೂ ನೀರಿನ ಸಮಸ್ಯೆ ಇರುವ ಬಗ್ಗೆ ತಂಡಕ್ಕೆ ವಿವರಿಸಿದ್ದೇವೆ ಎಂದರು.
ತಮಿಳುನಾಡಿನ ತಂಡ 3 ಟಿಎಂಸಿ ನೀರು ಹರಿಸುವಂತೆ ಮನವಿ ಮಾಡಿತು. ಕಾವೇರಿ ಕೊಳ್ಳದ ನಾಲ್ಕು ಜಲಾಶಗಳಲ್ಲಿ ನೀರಿಲ್ಲ. ಒಟ್ಟು 8.8 ಟಿಎಂಸಿಯಷ್ಟೇ ನೀರಿದೆ. ಅದು ಕಾವೇರಿ ಕೊಳ್ಳದ ಜನ, ಜಾನುವಾರುಗಳಿಗೇ ಕುಡಿಯಲು ಸಾಲುವುದಿಲ್ಲ ಎಂಬ ವಾಸ್ತವವನ್ನು ಅವರ ಮುಂದೆ ತೆರೆದಿಟ್ಟಿದ್ದೇವೆ ಎಂದು ಕುಂಟಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


