ಕಾಳಧನಿಕರಿಗೆ ಮಾರ್ಚ್ 31ರ ಅಂತಿಮ ಗಡುವಿನ ಎಚ್ಚರಿಕೆ ನೀಡಿದ ತೆರಿಗೆ ಇಲಾಖೆ!
ಕಪ್ಪುಹಣ ಘೋಷಣೆಗಾಗಿ ಕೇಂದ್ರ ಸರ್ಕಾರ ವಿಧಿಸಿದ್ದ ಮಾರ್ಚ್ 31ರ ಅಂತಿಮ ಗಡುವಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಳಧನಿಕರನ್ನು ಎಚ್ಚರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ.

ನವದೆಹಲಿ: ಕಪ್ಪುಹಣ ಘೋಷಣೆಗಾಗಿ ಕೇಂದ್ರ ಸರ್ಕಾರ ವಿಧಿಸಿದ್ದ ಮಾರ್ಚ್ 31ರ ಅಂತಿಮ ಗಡುವಿಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಳಧನಿಕರನ್ನು ಎಚ್ಚರಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿದೆ.
ದೇಶದ ಪ್ರಮುಖ ದಿನ ಪತ್ರಿಕೆ ಹಾಗೂ ಮಾಧ್ಯಮಗಳಲ್ಲಿ ಈ ಬಗ್ಗೆ ಜಾಹಿರಾತ ಪ್ರಕಟಣೆ ಮಾಡುವ ಮೂಲಕ ಕಾಳಧನಿಕರನ್ನು ಎಚ್ಚರಿಸುವ ಕೆಲಸ ಮಾಡಿದ್ದು, ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಗಡುವು ಮುಕ್ತಾಯವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಜಾಹಿರಾತು ಪ್ರಕಟಣೆಯಲ್ಲಿ ತಿಳಿಸಿದೆ. ಈಗಲೇ ನಿಮ್ಮ ಸಂಪೂರ್ಣ ಆದಾಯ ಘೋಷಣೆ ಮಾಡಿ ಇಲ್ಲವೇ ಮಾರ್ಚ್ 31 ಬಳಿಕ ಪಶ್ಚಾತಾಪ ಪಡಬೇಕಾಗುತ್ತದೆ ಎಂದು ಕಾಳಧನಿಕರಿಗೆ ಎಚ್ಚರಿಕೆ ನೀಡಿದೆ.
ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅನ್ವಯ ಮಾರ್ಚ್ 31ರೊಳಗೆ ಕಪ್ಪುಹಣ ಘೋಷಣೆ ಮಾಡುವ ಕಾಳಧನಿಕರ ಆಸ್ತಿಗೆ ಶೇ.49.9ರಷ್ಟು ಮಾತ್ರ ತೆರಿಗೆ ವಿಧಿಸಿ ಅವರ ಹೆಸರನ್ನು ಗೌಪ್ಯವಾಗಿಡಲಾಗುತ್ತದೆ. ಅಂತೆಯೇ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಲ್ಲಿ ಕಪ್ಪುಹಣ ಘೋಷಣೆ ಮಾಡ ವ್ಯಕ್ತಿಗೆ 77.5ರಷ್ಟು ದಂಡ ಸಹಿತ ಆದಾಯ ತೆರಿಗೆ ವಿಧಿಸಲಾಗುತ್ತದೆ. ಇಂತಹ ವ್ಯಕ್ತಿಗಳ ಹೆಸರನ್ನು ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಷ್ಟೇ ಅಲ್ಲದೇ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ತನ್ನ ಜಾಹಿರಾತಿನಲ್ಲಿ ತಿಳಿಸಿದೆ. ಒಂದು ವೇಳೆ ತೆರಿಗೆ ಇಲಾಖೆ ಅಧಿಕಾರಿಗಳಿಂದ ಸಿಕ್ಕಿಬಿದ್ದ ಕಾಳಧನಿಕರಿದೆ ಭಾರಿ ಪ್ರಮಾಣದ ದಂಡ ವಿಧಿಸಲಾಗುತ್ತದೆ ಎಂದು ಜಾಹಿರಾತಿನಲ್ಲಿ ಎಚ್ಚರಿಸಲಾಗಿದ್ದು, ತೆರಿಗೆ ಮತ್ತು ದಂಡದ ಪ್ರಮಾಣ 107.25 ರಿಂದ 137.25ವರೆಗೂ ಹೆಚ್ಚಿಸಲಾಗುತ್ತದೆ ಎಂದೂ ಹೇಳಿದೆ.
ಅಂತೆಯೇ ಕಾಳಧನಿಕರಗೆ ನೆರವಾಗುವವರಿಗೆ ಎಚ್ಚರಿಕೆ ನೀಡಲಾಗಿದ್ದು, ಬೇನಾಮಿ ಕಾಯ್ದೆಯಲ್ಲಿ ಸಿಕ್ಕಿ ಬೀಳುವವರಿಗೆ 7 ವರ್ಷಗಳ ಕಾಲ ಕಠಿಣ ಶಿಕ್ಷೆ ನೀಡುವ ಅವಕಾಶವಿದ್ದು, ಆದಾಯ ತೆರಿಗೆ ಕಾಯ್ದೆಯಡಿಯಲ್ಲೂ ಈ ಬಗ್ಗೆ ಕ್ರಮಕೈಗೊಳ್ಳುವ ಸಾಧ್ಯತೆ ಇದೆ. ಬೆನಾಮಿ ಆಸ್ತಿಯ ಮೌಲ್ಯದ ಶೇ.25ರಷ್ಟು ವಿಧಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


