ಬೆಂಗಳೂರು ಜಗತ್ತಿನ 3ನೇ ಅತಿ ಕಡಿಮೆ ಖರ್ಚಿನ ನಗರ, ಸಿಂಗಾಪುರ ಅತಿ ದುಬಾರಿ ನಗರ
ಜಗತ್ತಿನ ಅತ್ಯಂತ ಕಡಿಮೆ ಖರ್ಚಿನ 10 ನಗರಗಳ ಪೈಕಿ ಬೆಂಗಳೂರು ಸೇರಿದಂತೆ ಭಾರತದ ನಾಲ್ಕು ನಗರಗಳು ಸ್ಥಾನ ಪಡೆದಿದ್ದು, ಸಿಲಿಕಾನ್ ಸಿಟಿ....

Published On :
ನವದೆಹಲಿ: ಜಗತ್ತಿನ ಅತ್ಯಂತ ಕಡಿಮೆ ಖರ್ಚಿನ 10 ನಗರಗಳ ಪೈಕಿ ಬೆಂಗಳೂರು ಸೇರಿದಂತೆ ಭಾರತದ ನಾಲ್ಕು ನಗರಗಳು ಸ್ಥಾನ ಪಡೆದಿದ್ದು, ಸಿಲಿಕಾನ್ ಸಿಟಿ ಮೂರನೇ ಸ್ಥಾನದಲ್ಲಿದೆ. ಇನ್ನು ಅತ್ಯಂತ ದುಬಾರಿ ನಗರಗಳ ಪೈಕಿ ಸಿಂಗಾಪುರ ಸತತ ನಾಲ್ಕನೆ ಬಾರಿ ಮೊದಲ ಸ್ಥಾನದಲ್ಲಿದ್ದು, ಹಾಂಗ್ ಕಾಂಗ್ ಹಾಗೂ ಜೂರಿಕ್ ನಂತರದ ಸ್ಥಾನದಲ್ಲಿವೆ.
ಎಕನಾಮಿಸ್ಟ್ ಇಂಟೆಲಿಜೆನ್ಸ್ ಯುನಿಟ್(ಇಐಯು) ವರದಿ ಪ್ರಕಾರ, ಜಗತ್ತಿನ ಹತ್ತು ಕಡಿಮೆ ಖರ್ಚಿನ ನಗರಗಳ ಪೈಕಿ ಬೆಂಗಳೂರು(3ನೇ ಸ್ಥಾನ), ಚೆನ್ನೈ(6ನೇ ಸ್ಥಾನ), ಮುಂಬೈ(7ನೇ ಸ್ಥಾನ) ಹಾಗೂ ನವದೆಹಲಿ(10ನೇ ) ಸ್ಥಾನ ಪಡೆದಿವೆ.
ಅತ್ಯಂತ ಕಡಿಮೆ ಖರ್ಚಿನ ನಗರಗಳ ಪೈಕಿ ಕಜಕಸ್ತಾನದ ‘ಆಲ್ಮಟಿ’ ಮೊದಲ ಸ್ಥಾನ ಪಡೆದರೆ, ನೈಜೀರಿಯಾದ ‘ಲಾಗೋಸ್’ ನಂತರದ ಸ್ಥಾನದಲ್ಲಿದೆ.
ಜಾಗತಿಕ ಜೀವನ ನಿರ್ವಹಣಾ ವೆಚ್ಚ 2017ರ ವರದಿಯ ಪ್ರಕಾರ, ವಿಶ್ವದ ದುಬಾರಿ ನಗರಗಳು ಹಾಗೂ ಕಡಿಮೆ ಖರ್ಚಿನ ನಗರಗಳಲ್ಲಿ ಏಷ್ಯಾ ಭಾಗದ ನಗರಳು ಪ್ರಮುಖ ಪಾತ್ರ ವಹಿಸಿದ್ದು, ಆಹಾರ, ನೀರು, ಉಡುಗೆ, ಸಂಚಾರ ಮನೆ ಬಾಡಿಗೆ ಸೇರಿದಂತೆ 160 ಉತ್ಪನ್ನ ಹಾಗೂ ಸೇವೆಗಳ ದರ ಗಮನಿಸಿ ಜೀವನ ನಿರ್ವಹಣಾ ವೆಚ್ಚದ ಸಮೀಕ್ಷೆ ನಡೆಸಲಾಗಿದೆ.
ಕಡಿಮೆ ಖರ್ಚಿನ ನಗರಗಳು
1. ಆಲ್ಮಟಿ
2. ಲಾಗೋಸ್
3. ಬೆಂಗಳೂರು
4. ಕರಾಚಿ
5. ಅಲ್ಜೀರ್ಸ್
6. ಚೆನ್ನೈ
7. ಮುಂಬೈ
8. ಕೀವ್
9. ಬುಚಾರೆಸ್ಟ್
10. ನವದೆಹಲಿ
ದುಬಾರಿ ನಗರಗಳು
1. ಸಿಂಗಾಪುರ
2. ಹಾಂಗ್ ಕಾಂಗ್
3. ಜುರಿಕ್
4. ಟೋಕಿಯೊ
5. ಒಸಾಕಾ
6. ಸಿಯೋಲ್
7. ಜಿನಿವಾ
8. ಪ್ಯಾರಿಸ್
9. ನ್ಯೂಯಾರ್ಕ್
10. ಕೋಪನ್‌ಹೇಗನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


