ಪ್ರಧಾನ ಸುದ್ದಿ

ಉತ್ತರಪ್ರದೇಶದಲ್ಲಿ ೪೬.೫ ಲಕ್ಷ ಮೌಲ್ಯದ ನಿಷೇಧಿತ ನೋಟುಗಳ ವಶ

ಈಗಾಗಲೇ ಹಿಂಪಡೆದಿರುವ ಹಳೆಯ ೫೦೦ ಮತ್ತು ೧೦೦೦ ನೋಟುಗಳನ್ನೊಳಗೊಂಡ ೪೬.೫ ಲಕ್ಷ ಮೌಲ್ಯದ ಹಣವನ್ನು ಶಾಮ್ಲಿ ಜಿಲ್ಲೆಯಲ್ಲಿ ಕಾರ್ ಒಂದರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ

ಉತ್ತರಪ್ರದೇಶದಲ್ಲಿ ೪೬.೫ ಲಕ್ಷ ಮೌಲ್ಯದ ನಿಷೇಧಿತ ನೋಟುಗಳ ವಶ
ಸಾಂದರ್ಭಿಕ ಚಿತ್ರ
Published On :
ಮುಜಾಫರ್ನಗರ್: ಈಗಾಗಲೇ ಹಿಂಪಡೆದಿರುವ ಹಳೆಯ ೫೦೦ ಮತ್ತು ೧೦೦೦ ನೋಟುಗಳನ್ನೊಳಗೊಂಡ ೪೬.೫ ಲಕ್ಷ ಮೌಲ್ಯದ ಹಣವನ್ನು ಶಾಮ್ಲಿ ಜಿಲ್ಲೆಯಲ್ಲಿ ಕಾರ್ ಒಂದರಿಂದ ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ನಗರ ಪ್ರದೇಶದಲ್ಲಿ ಕಾರ್ ಅನ್ನು ತಡೆ ಹಾಕಿದ ಪೊಲೀಸರು ನಿಷೇಧಿತ ನೋಟುಗಳಿದ್ದ ೪೬.೫ ಲಕ್ಷ ರೂ ಮೌಲ್ಯದ ಹಣವನ್ನು ವಶಪಡಿಸಿಕೊಂಡಿದ್ದಾರೆ ಎಂದು ಹಿರಿಯ ಸೂಪರಿಂಡೆಂಟ್ ಪೊಲೀಸ್ ರವಿಂದರ್ ಸಿಂಗ್ ಹೇಳಿದ್ದಾರೆ. 
ಕಾರಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ಹೇಳಿದ್ದು ತನಿಖೆ ಪ್ರಗತಿಯಲ್ಲಿದೆ ಎಂದಿದ್ದಾರೆ. 
ಈ ಹಣ ವಶಪಡಿಸಿಕೊಂಡಿರುವುದರ ಬಗ್ಗೆ ತೆರಿಗೆ ಇಲಾಖೆಗೆ ಕೂಡ ಸೂಚಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.