ಪುತ್ರನಿಗೆ ಸಂಸ್ಕಾರವಂತ ವಧು ಅನ್ವೇಷಣೆ ಮಾಡುತ್ತಿರುವ ರಾಬ್ಡಿ ದೇವಿ ಮತ್ತು ಲಾಲೂ ಪ್ರಸಾದ್
ಇತ್ತೀಚೆಗೆ 28 ವರ್ಷಕ್ಕೆ ಕಾಲಿಟ್ಟ ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಗೆ ವಿವಾಹ ಮಾಡಲು ನಿಶ್ಚಯಿಸಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮತ್ತು ...

Published On :
ಪಾಟ್ನಾ: ಇತ್ತೀಚೆಗೆ 28 ವರ್ಷಕ್ಕೆ ಕಾಲಿಟ್ಟ ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಗೆ ವಿವಾಹ ಮಾಡಲು ನಿಶ್ಚಯಿಸಿರುವ ಬಿಹಾರ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಮತ್ತು ರಾಬ್ಡೀ ದೇವಿ ಸಂಸ್ಕಾರವಂತ ಸೊಸೆಯ ಅನ್ವೇಷಣೆಯಲ್ಲಿದ್ದಾರಂತೆ.
ತಮ್ಮ ಪುತ್ರನಿಗೆ ವಧು ಹುಡುಕುತ್ತಿರುವುದನ್ನು ಒಪ್ಪಿಕೊಂಡಿರುವ ಲಾಲು ದಂಪತಿ ತಮ್ಮ ಮನೆಗೆ ಸರಳಸ ಸುಂದರ ಹಾಗೂ ಸುಸಂಸ್ಕೃತ ನಡತೆಯುಳ್ಳ ಸೊಸೆ ಬೇಕೆಂದು ಹೇಳಿದ್ದಾರೆ, ಹಾಗೆಯೇ ಯಾವುದೇ ರೀತಿಯ ವರದಕ್ಷಿಣೆ ಕೂಡ ಬೇಡ ಎಂದು ಹೇಳಿದ್ದಾರೆ.
ಲಾಲೂ ಪ್ರಸಾದ್ 70ನೇ ವರ್ಷದ ಹುಟ್ಟು ಹಬ್ಬ ಸಮಾರಂಭದಲ್ಲಿ ಭಾಗಿಯಾಗಿದ್ದ ರಾಬ್ಡೀ ದೇವಿ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಈ ವಿಷಯ ಹಂಚಿಕೊಂಡಿದ್ದಾರೆ, ನಮ್ಮ ತೇಜ ಪ್ರತಾಪ್ ತುಂಬಾ ಸಂಪ್ರದಾಯಬದ್ದವಾದ ವ್ಯಕ್ತಿಯಾಗಿದ್ದಾನೆ, ಆತನಿಗೆ ಮಾಲ್, ಸಿನಿಮಾ ಎಂದೆಲ್ಲಾ ಸುತ್ತಾಡುವ ಹುಡುಗಿಯರು ಬೇಡ. ಸಂಪ್ರದಾಯಸ್ಥ ಹುಡುಗಿ ಬೇಕು ಎಂದು ರಾಬ್ಡಿ ದೇವಿ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಲಾಲೂ ಪ್ರಸಾದ್ ಯಾದವ್Lalu Prasad Yadavವಿವಾಹweddingdaughter-in-lawಸೊಸೆRabri Deviರಾಬ್ಡಿ ದೇವಿTej Pratapತೇಜ ಪ್ರತಾಪ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


