ನಾವು ಮನುಷ್ಯರು, ನೆಲದ ಮೇಲೆ ಕುಳಿತುಕೊಳ್ಳುತ್ತೇವೆ: ವಿಶೇಷ ಸಿದ್ದತೆ ಮಾಡದಂತೆ ಅಧಿಕಾರಿಗಳಿಗೆ ಯೋಗಿ ಸೂಚನೆ
ನಾವು ಮನುಷ್ಯರು, ನಾವು ನೆಲದ ಮೇಲೆ ಕೂರುತ್ತೇವೆ, ನಾನು ಭೇಟಿ ನೀಡುವ ಸ್ಥಳಗಳಲ್ಲಿ ಯಾವುದೇ ವಿಶೇಷ ಸಿದ್ಧತೆ ಮಾಡುವುದು ಬೇಡ ಎಂದು ಉತ್ತರ ಪ್ರದೇಶ ..

Published On :
ಲಕ್ನೋ: ನಾವು ಮನುಷ್ಯರು, ನಾವು ನೆಲದ ಮೇಲೆ ಕೂರುತ್ತೇವೆ, ನಾನು ಭೇಟಿ ನೀಡುವ ಸ್ಥಳಗಳಲ್ಲಿ ಯಾವುದೇ ವಿಶೇಷ ಸಿದ್ಧತೆ ಮಾಡುವುದು ಬೇಡ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದ ಜನತೆಯನ್ನು ಗೌರವಿಸಿದರೇ ಮುಖ್ಯಮಂತ್ರಿಗೆ ಗೌರವ ಸೂಚಿಸಿದಂತಾಗುತ್ತದೆ, ಹೀಗಾಗಿ ಪರಿಶೀಲನೆ ಪ್ರವಾಸಕ್ಕೆ ತೆರಳುವ ವೇಳೆ ಯಾವುದೇ ವಿಶೇಷ ಆಯೋಜನೆಗಳನ್ನು ಮಾಡಬೇಡಿ ಎಂದು ನಿನ್ನೆ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಇತ್ತೀಚೆಗೆ ಮೃತಪಟ್ಟ ಬಿಎಸ್ ಎಫ್ ಯೋಧನ ಮನೆಗೆ ಯೋಗಿ ಆದಿತ್ಯನಾಥ್ ಭೇಟಿ ನೀಡಿದ್ದರು. ಈ ವೇಳೆ ಯೋಧನ ಮನೆಯಲ್ಲಿ ಸೋಫಾ, ಎ.ಸಿ ಕಾರ್ಪೆಟ್ ಗಳನ್ನು ತಂದು ಅಧಿಕಾರಿಗಳು ಹಾಕಿದ್ದರು, ನಂತರ ಸಿಎಂ ಹೊರಟ ತಕ್ಷಣೆ ಅವೆಲ್ಲವನ್ನು ಅಲ್ಲಿಂದ ತೆರವುಗೊಳಿಸಿದ್ದರು. ಮಾಧ್ಯಮಗಳಲ್ಲಿ ಈ ಸಂಬಂಧ ವರದಿಯಾಗಿತ್ತು. ಈ ಹಿನ್ನಲೆಯಲ್ಲಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.
ಇನ್ನೂ ಸಿಎಂ ಭೇಟಿ ನೀಡು ಹಿನ್ನೆಲೆಯಲ್ಲಿ ಕುಶಿನಗರ ಜಿಲ್ಲಾಡಳಿತ ಅಲ್ಲಿನ ಬುಡಕಟ್ಟು ಜನಾಂದ ಮಂದಿಗೆ ಸೋಪು ಶಾಂಪು ನೀಡಿ ಸ್ನಾನ ಮಾಡಿಕೊಂಡು ಶುಚಿಯಾಗಿ ಬರುವಂತೆ ಸೂಚಿಸಲಾಗಿತ್ತು. ಈ ಎಲ್ಲಾ ವರದಿಗಳನ್ನು ನೋಡಿದ ಯೋಗಿ ಆದಿತ್ಯನಾಥ್ ವಿಶೇಷ ಸಿದ್ಧತೆಗಳನ್ನು ಮಾಡದಂತೆ ಆದೇಶಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Uttar pradeshಉತ್ತರ ಪ್ರದೇಶofficialsಅಧಿಕಾರಿಗಳುYogi Adityanathಯೋಗಿ ಆದಿತ್ಯನಾಥ್Special arrangementವಿಶೇಷ ಸಿದ್ಧತೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


