ಟಿಕೆಟ್ ವಿವಾದ; ಉತ್ತರಪ್ರದೇಶದಲ್ಲಿ ಬಿಜೆಪಿ ಮುಖಂಡರನ್ನು ಕಟ್ಟಿ, ಕೂಡಿಹಾಕಿದ ಕುಪಿತ ಕಾರ್ಯಕರ್ತರು
ಅಯೋಧ್ಯ ವಿಧಾನಸಭಾ ಕ್ಷೇತ್ರಕ್ಕೆ 'ಹೊರಗಿನಿಂದ' ಬಂದವರಿಗೆ ಟಿಕೆಟ್ ನೀಡಿರುವ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಾಟಕೀಯ ವಾತಾವರಣಕ್ಕೆ ಎಡೆಮಾಡಿಕೊಟ್ಟಿದೆ. ಪ್ರಾದೇಶಿಕ ಬಿಜೆಪಿ ಸಂಸದ ಲಲ್ಲು

Published On :
ಫೈಜಾಬಾದ್: ಅಯೋಧ್ಯ ವಿಧಾನಸಭಾ ಕ್ಷೇತ್ರಕ್ಕೆ 'ಹೊರಗಿನಿಂದ' ಬಂದವರಿಗೆ ಟಿಕೆಟ್ ನೀಡಿರುವ ಹಿನ್ನಲೆಯಲ್ಲಿ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಾಟಕೀಯ ವಾತಾವರಣಕ್ಕೆ ಎಡೆಮಾಡಿಕೊಟ್ಟಿದೆ. ಪ್ರಾದೇಶಿಕ ಬಿಜೆಪಿ ಸಂಸದ ಲಲ್ಲು ಸಿಂಗ್ ಮತ್ತು ಪಕ್ಷದ ಘಟಕದ ಅಧ್ಯಕ್ಷ ಅವದೇಶ್ ಪಾಂಡೆ ಅವರನ್ನು ಹಗ್ಗದಿಂದ ಕಟ್ಟಿ, ಎರಡು ಘಂಟೆಗಳ ಕಾಲ ಕುಪಿತ ಕಾರ್ಯಕರ್ತರು ಕೂಡಿಹಾಕಿದ ಘಟನೆ ನಡೆದಿದೆ.
ಬಿ ಎಸ್ ಪಿ ಯಿಂದ ಪಕ್ಷಾಂತರಗೊಂಡು ಇತ್ತೀಚೆಗಷ್ಟೇ ಬಿಜೆಪಿ ಸೇರಿದ ವೇದ್ ಗುಪ್ತ ಅವರಿಗೆ ಅಯೋಧ್ಯ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡಲಾಗಿದೆ. ಪಕ್ಷದ ರಾಜ್ಯ ಮುಖಂಡರ ಮುಂದೆ ಕಾರ್ಯಕರ್ತರ ಬೇಡಿಕೆಯನ್ನು ಇಡಲಾಗುವದೂ ಎಂಬ ಭರವಸೆ ನೀಡಿದ ಮೇಲಷ್ಟೇ ಇಬ್ಬರು ಮುಖಂಡರನ್ನು ಮುಕ್ತಗೊಳಿಸಲಾಗಿದೆ.
"ಬಿಜೆಪಿ ಕಾರ್ಯಕರ್ತರು ಪಕ್ಷದ ಒಳಗಿನವರಿಗೆ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಆಗ್ರಹಿಸುತ್ತಿದ್ದರು ಮತ್ತು ಗುಪ್ತ ಅವರನ್ನು ಹೊರಗಿನವರು ಎಂದೇ ಅವರು ಪರಿಗಣಿಸುತ್ತಾರೆ. ಈ ನಿರ್ಧಾರ (ಗುಪ್ತ ಅವರನ್ನು ಕಣಕ್ಕಿಳಿಸಿದ) ಕೈಗೊಂಡ ಬಿಜೆಪಿ ನಾಯಕತ್ವದ ಮೇಲೆ ಅವರು ಕುಪಿತಗೊಂಡಿದ್ದಾರೆ. ಅವರನ್ನು ಸಮಾಧಾನಪಡಿಸಲು ನಾವು ಪಕ್ಷದ ಕಚೇರಿಗೆ ತೆರಳಿದ್ದೆವು ಆದರೆ ಅವರು ನಮ್ಮನ್ನು ಹಿಡಿದಿಟ್ಟರು" ಎಂದು ಪಾಂಡೆ ಹೇಳಿದ್ದಾರೆ. ರಾಜ್ಯ ನಾಯಕತ್ವದ ಮುಂದೆ ಅವರ ಬೇಡಿಕೆಗಳನ್ನು ಚರ್ಚಿಸಲಾಗುವುದು ಎಂದು ನಾವು ಭರವಸೆ ನೀಡಿದ್ದೇವೆ ಎಂದು ಕೂಡ ಅವರು ಹೇಳಿದ್ದಾರೆ.
"ನಮ್ಮ ಹಿರಿಯ ನಾಯಕರು ಗುಪ್ತ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ, ಆದರೂ, ಈ ನಿರ್ಧಾರವನ್ನು ಹೃದಯದಿಂದ ಒಪ್ಪಿಕೊಳ್ಳಲು ನಮ್ಮ ಕಾರ್ಯಕರ್ತರಿಗೆ ವಿವರಿಸಲು ಪ್ರಯತ್ನಿಸುತ್ತೇವೆ" ಎಂದು ಕೂಡ ಅವರು ಹೇಳಿದ್ದಾರೆ.
೮೦ ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಮೂಲಕ ತಮ್ಮ ರಾಜಕೀಯ ಜೀವನ ಆರಂಭಿಸಿ ನಂತರ ಬಿಜೆಪಿ ಸೇರಿ ೧೯೯೨ ರಲ್ಲಿ ಭಾಬ್ರಿ ಮಸೀದಿ ಧ್ವಂಸದಲ್ಲಿ ಸಕ್ರಿಯರಾಗಿದ್ದವರು ಗುಪ್ತ. ನಂತರ ೨೦೦೨ ರಲ್ಲಿ ಸಮಾಜವಾದಿ ಪಕ್ಷ ಸೇರಿ ಅಯೋಧ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ನಂತರ ೨೦೧೨ ರಲ್ಲಿ ಬಿ ಎಸ್ ಪಿ ಪಕ್ಷ ಸೇರಿ ಅದೇ ಕ್ಷೇತ್ರದಿಂದ ಸ್ಪರ್ಧಿಸಿದ್ದವರು. ಈಗ ಮತ್ತೆ ಬಿಜೆಪಿ ಪಕ್ಷ ಸೇರಿ ಅದೇ ಕ್ಷೇತ್ರದಿಂದ ಟಿಕೆಟ್ ಪಡೆಯಲು ಯಶಸ್ವಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


