ಪ್ರಧಾನ ಸುದ್ದಿ

'ಮೀಸಲಾತಿ ತೊಡೆದುಹಾಕಿ ನೋಡಿ'; ಸರ್ಕಾರಕ್ಕೆ ಸವಾಲೆಸೆದ ಪ್ರಕಾಶ ಅಂಬೇಡ್ಕರ್

ಕೇಂದ್ರ ಎನ್ ಡಿ ಎ ಸರ್ಕಾರಕ್ಕೆ ಭಾನುವಾರ ಎಚ್ಚರಿಕೆ ನೀಡಿರುವ ರಾಜಕಾರಣಿ ಪ್ರಕಾಶ್ ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಇರುವ ಮೀಸಲಾತಿಯನ್ನು ತೊಡೆದು ಹಾಕಿ ನೋಡಿ

'ಮೀಸಲಾತಿ ತೊಡೆದುಹಾಕಿ ನೋಡಿ'; ಸರ್ಕಾರಕ್ಕೆ ಸವಾಲೆಸೆದ ಪ್ರಕಾಶ ಅಂಬೇಡ್ಕರ್
ಪ್ರಕಾಶ್ ಅಂಬೇಡ್ಕರ್
Published On :
ಹೈದರಾಬಾದ್: ಕೇಂದ್ರ ಎನ್ ಡಿ ಎ ಸರ್ಕಾರಕ್ಕೆ ಭಾನುವಾರ ಎಚ್ಚರಿಕೆ ನೀಡಿರುವ ರಾಜಕಾರಣಿ ಪ್ರಕಾಶ್ ಅಂಬೇಡ್ಕರ್ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಇರುವ ಮೀಸಲಾತಿಯನ್ನು ತೊಡೆದು ಹಾಕಿ ನೋಡಿ ಎಂದು ಸವಾಲೆಸೆದಿದ್ದಾರೆ. 
ಬಿಜೆಪಿ ಮುಂದಾಳತ್ವದ ಎನ್ ಡಿ ಎ ಸರ್ಕಾರ ಸಮಾಜದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತದೆ ಎಂದು ಭಾರತ ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಕಿಡಿಕಾರಿದ್ದಾರೆ. 
ದಲಿತರ ಹಕ್ಕುಗಳ ಬಗ್ಗೆ ನಡೆದಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು, ಇತ್ತೀಚೆಗಷ್ಟೇ ಹಿರಿಯ ಆರ್ ಎಸ್ ಎಸ್ ಮುಖಂಡರೊಬ್ಬರು, ಮೀಸಲಾತಿಯನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ. 
"ಅವರು ಅಧಿಕಾರದಲ್ಲಿದ್ದಾರೆ ಮತ್ತು ಸಂಸತ್ತಿನಲ್ಲಿ ಬಹುಮತವಿದೆ. ಅವರು ಮೀಸಲಾತಿಯನ್ನು ತೊಡೆದುಹಾಕಬಹುದು. ಅವರು ಅದನ್ನು ಮಾಡುವಂತೆ ನಾನು ಸವಾಲೆಸೆಯುತ್ತೇನೆ" ಎಂದು ಭರಿಪ ಬಹುಜನ ಮಹಾಸಂಘ (ಬಿಬಿಎಂ) ಪಕ್ಷದ ಅಧ್ಯಕ್ಷ ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ. 
ಮೀಸಲಾತಿಯನ್ನು ತೊಡೆದುಹಾಕುವುದರ ಬಗ್ಗೆ ಹೇಳಿಕೆ ಕೊಡುವ ಮೂಲಕ ಅಧಿಕಾರದಲ್ಲಿರುವವರು ಸಮಾಜದಲ್ಲಿ ಒಡಕು ಮೊದಲು ಪ್ರಯತ್ನಿಸುತ್ತಿದ್ದಾರೆ ಎಂದು ಕೂಡ ಅವರು ಆರೋಪಿಸುತ್ತಿದ್ದಾರೆ. 
ಶುಕ್ರವಾರ ಮೀಸಲಾತಿ ಬಗ್ಗೆ ಪ್ರತಿಕ್ರಿಯಿಸಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ಅಧ್ಯಕ್ಷ ಮನಮೋಹನ್ ವೈದ್ಯ, ಬಿ ಆರ್ ಅಂಬೇಡ್ಕರ್ ಅವರಿಗೆ ಕೂಡ ಮೀಸಲಾತಿಯನ್ನು ಮುಂದುವರೆಸುವ ಬಗ್ಗೆ ಒಲವಿರಲಿಲ್ಲ ಆದುದರಿಂದ ಮೀಸಲಾತಿ ನೀತಿಯ ಬಗ್ಗೆ ಪರಿಶೀಲನೆ ಅಗತ್ಯವಿದೆ ಎಂದಿದ್ದರು. 
ನೋಟು ಹಿಂಪಡೆತ ನಿರ್ಧಾರದ ಬಗ್ಗೆಯೂ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಪ್ರಕಾಶ್ ಈ ನಿರ್ಧಾರ ಬಡ ಜನ, ದಲಿತರು, ಬುಡಕಟ್ಟು ಸಮುದಾಯ, ಅಲ್ಪಸಂಖ್ಯಾತರು ಮತ್ತು ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ವರ್ಗದ ವಿರುದ್ಧವಾಗಿತ್ತು, ಏಕೆಂದರೆ ಅವರಷ್ಟೇ ಮನುವಾದದ ವಿರುದ್ಧ ಹೋರಾಡುವವರು ಎಂದು ಕೂಡ ವಾಗ್ದಾಳಿ ನಡೆಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.