ಪ್ರಧಾನ ಸುದ್ದಿ

ಆರ್ ಎಸ್ಎಸ್ ನಮ್ಮ ಸಂಸ್ಕೃತಿ ವಿರೋಧಿ, ಕೋಮುದ್ವೇಷ ಸೃಷ್ಟಿಸುವುದೇ ಅದರ ಉದ್ದೇಶ: ಕೇರಳ ಸಿಎಂ

ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್ )ದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ...

ಆರ್ ಎಸ್ಎಸ್ ನಮ್ಮ ಸಂಸ್ಕೃತಿ ವಿರೋಧಿ, ಕೋಮುದ್ವೇಷ ಸೃಷ್ಟಿಸುವುದೇ ಅದರ ಉದ್ದೇಶ: ಕೇರಳ ಸಿಎಂ
ರ್ಯಾಲಿ ಉದ್ದೇಶಿಸಿ ಮಾತನಾಡುತ್ತಿರುವ ಕೇರಳ ಸಿಎಂ
Published On :
ಮಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್ )ದ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಆರ್ ಎಸ್ಎಸ್ ನಮ್ಮ ಸಂಸ್ಕೃತಿ ವಿರೋಧಿಯಾಗಿದ್ದು  ಕೋಮುದ್ವೇಷ ಸೃಷ್ಟಿಸುವುದೇ ಅದರ ಉದ್ದೇಶ ಎಂದು ಆರೋಪಿಸಿದ್ದಾರೆ.
ಇಂದು ಇಲ್ಲಿನ ನೆಹರೂ ಮೈದಾನದಲ್ಲಿ ಸೌಹಾರ್ದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಕೇರಳ ಸಿಎಂ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಬಿಜೆಪಿ ನಾಯಕರು ಆರ್ ಎಸ್ ಎಸ್ ನಡೆಯನ್ನೇ ಅನುಸರಿಸುತ್ತಾರೆ. ಆದರೆ ನಮ್ಮ ಸಂಸ್ಕೃತಿಯ ವಿರೋಧಿಯಾಗಿರುವ ಆರ್ ಎಸ್ಎಸ್ ಕ್ರೈಸ್ತರು, ಮುಸ್ಲಿಂ, ಕಮ್ಯೂನಿಸ್ಟರನ್ನು ತಮ್ಮ ಶತ್ರುಗಳು ಎಂಬ ನಿಲುವು ಹೊಂದಿದೆ ಎಂದರು.
ಆರ್ ಎಸ್ಎಸ್ ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಆರಂಭವಾಗಿದ್ದರೂ, ಅವರು ಯಾವತ್ತೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ ಮತ್ತು ದೇಶ ಬಿಟ್ಟು ಹೋಗುವಂತೆ ಬ್ರಿಟಿಷರಿಗೆ ಹೇಳಲಿಲ್ಲ. ಬ್ರಿಟಿಷರು ಭಾರತದಲ್ಲಿ ಆಳ್ವಿಕೆ ಮುಂದುವರಿಸಬೇಕೆಂಬುದೇ ಈ ಸಂಘಟನೆಯ ಆಶಯವಾಗಿತ್ತು ಎಂದು ಪಿಣರಾಯಿ ತೀವ್ರ ವಾಗ್ದಾಳಿ ನಡೆಸಿದರು.
ದೇಶದ ಜನರಲ್ಲಿ ಭೇದಭಾವವನ್ನು ಸೃಷ್ಟಿಸುವುದು, ಧರ್ಮಗಳ ಹೆಸರಲ್ಲಿ ಜನರ ಮಧ್ಯೆ ಕಂದಕ ಉಂಟು ಮಾಡುವುದೇ ಈ ಆರ್ ಎಸ್ ಎಸ್ ನ ಮುಖ್ಯ ಉದ್ದೇಶ. ಆರ್ ಎಸ್ಎಸ್ ಎಂಬುದು ದೇಶದ ಐಕ್ಯತೆಗೆ ಮಾರಕವಾಗಿದೆ. ಅವರು ಜನರ ಮಧ್ಯೆ ಕಂದಕಗಳನ್ನು ಸದಾ ಸೃಷ್ಟಿಸುತ್ತಾ ಬಂದಿದ್ದಾರೆ. ಮಹಾತ್ಮ ಗಾಂಧಿ ಕೊಲೆಯಾಗಿದ್ದು ಯಾಕೆ? ಗಾಂಧಿ ಯಾವತ್ತೂ ಆರ್ ಎಸ್ ಎಸ್ ನವರಿಗೆ ತೊಂದರೆ ಕೊಟ್ಟಿಲ್ಲ. ಗಾಂಧಿ ಹತ್ಯೆಯಾದಾಗ ಇದೇ ಆರ್ ಎಸ್ಎಸ್ ಸಿಹಿತಿಂಡಿ ಹಂಚಿತ್ತು ಎಂಬ ವಿಷಯವನ್ನು ನಾವು ಮರೆಯುವಂತಿಲ್ಲ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.