ಪ್ರಧಾನ ಸುದ್ದಿ

ಗೋವಾದಲ್ಲಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಶಿವಸೇನೆ: ರಾವುತ್

ಮುಂದಿನ ಗೋವಾ ವಿಧಾನಸಭಾ ಚುನಾವಣೆಗಳಲ್ಲಿ ಶಿವಸೇನೆ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಪಕ್ಷದ ಸಂಸದ ಹೇಳಿದ್ದಾರೆ. ಆರ್ ಎಸ್ ಎಸ್ ನಿಂದ ಬಂಡಾಯ ಎದ್ದಿರುವ ಸದಸ್ಯರು ಶೀಘ್ರದಲ್ಲೇ

ಗೋವಾದಲ್ಲಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಶಿವಸೇನೆ: ರಾವುತ್
ಸಾಂದರ್ಭಿಕ ಚಿತ್ರ
Published On :
ಪಣಜಿ: ಮುಂದಿನ ಗೋವಾ ವಿಧಾನಸಭಾ ಚುನಾವಣೆಗಳಲ್ಲಿ ಶಿವಸೇನೆ 20 ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಪಕ್ಷದ ಸಂಸದ ಹೇಳಿದ್ದಾರೆ. ಆರ್ ಎಸ್ ಎಸ್ ನಿಂದ ಬಂಡಾಯ ಎದ್ದಿರುವ ಸದಸ್ಯರು ಶೀಘ್ರದಲ್ಲೇ ಸ್ಥಾಪಿಸಲಿರುವ ಪಕ್ಷದ ಜೊತೆಗೆ ಮೈತ್ರಿ ಮಾಡಿಕೊಂಡು ಈ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸಲಿದೆ ಎಂದು ಅವರು ಶನಿವಾರ ಹೇಳಿದ್ದಾರೆ. 
ಪಣಜಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಸಂಜಯ್ ರಾವುತ್, ಬಿಜೆಪಿ ವಿರುದ್ಧ ಈ ನೂತನ ಪಕ್ಷದ ಮೈತ್ರಿಯೊಂದಿಗೆ ಇಲ್ಲಿ ಸೆಣೆಸಿದರೂ, ಮಹಾರಾಷ್ಟ್ರದ ಬಿಜೆಪಿ-ಶಿವಸೇನಾ ಮೈತ್ರಿಗೆ ಯಾವುದೇ ಧಕ್ಕೆ ಇಲ್ಲ ಎಂದಿದ್ದಾರೆ. 
"ನಾವು ಸುಮಾರು 20 ಕ್ಷೇತ್ರಗಳಲ್ಲಿ ಸೆಣಸುವ ಸಾಧ್ಯತೆ ಇದೆ ಮತ್ತು ಸುಭಾಷ್ ವೆಲಿಂಗ್ಕರ್ ಪಕ್ಷದ ಜೊತೆ ಶೀಘ್ರದಲ್ಲೇ ಮೈತ್ರಿ ಅಂತಿಮಗೊಳಿಸಲಿದ್ದೇವೆ" ಎಂದು ರಾವುತ್ ಹೇಳಿದ್ದಾರೆ. 
ಗೋವಾದಲ್ಲಿ ಆರ್ ಎಸ್ ಎಸ್ ಬಂಡಾಯಕೋರರ ದಳವನ್ನು ಮುನ್ನಡೆಸುತ್ತಿರುವ ವೆಲಿಂಗ್ಕರ್ ಸೋಮವಾರ ನೂತನ ಪಕ್ಷವೊಂದನ್ನು ಘೋಷಿಸಲಿದ್ದು, ಬಿಜೆಪಿ ವಿರುದ್ಧ ಸೆಣೆಸಲಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.