ಪ್ರಧಾನ ಸುದ್ದಿ

ಕಾವೇರಿಗಾಗಿ ಸಿಡಿದೆದ್ದ ಕನ್ನಡ ಚಿತ್ರರಂಗ, ಜಯಲಲಿತಾ ವಿರುದ್ಧ ವಾಗ್ದಾಳಿ

ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ನಡೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದ್ದ ಕನ್ನಡ ಚಿತ್ರರಂಗ ಸಹ...

ಕಾವೇರಿಗಾಗಿ ಸಿಡಿದೆದ್ದ ಕನ್ನಡ ಚಿತ್ರರಂಗ, ಜಯಲಲಿತಾ ವಿರುದ್ಧ ವಾಗ್ದಾಳಿ
ಸ್ಯಾಂಡಲ್ವುಡ್ ಮಂದಿ
Published On :
ಬೆಂಗಳೂರು: ತಮಿಳುನಾಡಿಗೆ ನೀರು ಬಿಟ್ಟ ಸರ್ಕಾರದ ನಡೆಯನ್ನು ವಿರೋಧಿಸಿ ಕನ್ನಡಪರ ಸಂಘಟನೆಗಳು ನೀಡಿದ್ದ ಕರ್ನಾಟಕ ಬಂದ್ ಗೆ ಬೆಂಬಲ ಸೂಚಿಸಿದ್ದ ಕನ್ನಡ ಚಿತ್ರರಂಗ ಸಹ ಧರಣಿ ನಡೆಸುತ್ತಿದೆ. 
ಬೆಂಗಳೂರಿನ ಕರ್ನಾಟಕ ವಾಣಿಜ್ಯ ಮಂಡಳಿ ಆವರಣದಲ್ಲಿ ಸೇರಿದ್ದ ಕಲಾವಿದರಾದ ಹಿರಿಯ ನಟಿ ಲೀಲಾವತಿ, ಭಾರತಿ ವಿಷ್ಣುವರ್ಧನ್ ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಇನ್ನು ಶಿವರಾಜ್ ಕುಮಾರ್, ಹರಿಪ್ರಿಯಾ, ಜಗ್ಗೇಶ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಅಜಯ್ ರಾವ್, ದೇವರಾಜ್, ಶರಣ್, ಮಾನ್ವಿತಾ, ಹರೀಶ್, ಮಯೂರಿ ಸೇರಿದಂತೆ ಬಹುತೇಕ ನಟ ನಟಿಯರು ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ್ದಾರೆ. 
ಉಪೇಂದ್ರ: ಕಾವೇರಿ ನೀರು ಸಮಸ್ಯೆ ನಾನು ಹುಟ್ಟಿದಾಗಿನಿಂದ್ಲು ಇದೆ. ಇಗಲು ಇದೆ. ಇನ್ನು ನಾನು ಸತ್ತ ಮೇಲೂ ಈ ಸಮಸ್ಯೆ ಇರುತ್ತದೆಯೇನೊ ಎಂದು ಹೇಳಿದರು. 
ಭಾರತಿ ವಿಷ್ಣುವರ್ಧನ್: ಕಾವೇರಿ ಹೋರಾಟ ಅನೇಕ ವರ್ಷಗಳಿಂದ ನಿರಂತರವಾಗಿ ನಡೀತಾ ಇದೆ. ಆದ್ರೆ ಇದಕ್ಕೆ ಶಾಶ್ವತ ಪರಿಹಾರ ಬೇಕು. ಅದಕ್ಕೆ ಪ್ರಯತ್ನಿಸಬೇಕು. ಜಯಲಲಿತಾ ಹೇಗೆ ಹಠಕ್ಕೆ ಬಿದ್ದು ಕಾವೇರಿ ವಿಚಾರದಲ್ಲಿ ಪ್ರತಿ ಸಲ ಗೆಲ್ತಾರೆ? ನಮಗೂ ಅದೇ ರೀತಿಯ ಛಲ ಇರಬೇಕು. ಆಗ ಖಂಡಿತಾ ನಾವು ಗೆಲ್ಲಬಹುದು ಎಂದರು. 
ಜಗ್ಗೇಶ್: ಮೈಸೂರು ಒಡೆಯರ್ ಅವರು ಮುಂದಾಲೋಚನೆ ಮಾಡಿ ಡ್ಯಾಮ್ ಕಟ್ಟಿಸಿದ್ದರು. ಆದರೆ ನಾವು ಇವತ್ತು ನೀರನ್ನು ಶೇಖರಿಸಿಟ್ಟುಕೊಂಡು ತಮಿಳುನಾಡಿಗೆ ಕೊಡಬೇಕಾದ ಪರಿಸ್ಥಿತಿ ಬಂದಿದೆ. ನಿಮಗೆ ಯೋಗ್ಯತೆ ಇದ್ದರೆ ಸಮುದ್ರದ ಪಾಲು ಆಗ್ತಿರೋ ನೀರನ್ನು ಶೇಖರಿಸಿಡಿ ಎಂದು ತಮಿಳುನಾಡಿಗೆ ಸವಾಲೆಸೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.