ಬ್ರಿಕ್ಸ್ ನಲ್ಲಿ ಜೆಇಎಂ. ಎಲ್ ಇಟಿ ಉಗ್ರ ಸಂಘಟನೆಗಳ ಹೆಸರು ಪ್ರಸ್ತಾಪಕ್ಕೆ ಅಡ್ಡಿಯಾದ ಚೀನಾ!
ಪಾಕಿಸ್ತಾನ ಪ್ರಾಯೋಜಿತ ಉಗ್ರ ಸಂಘಟನೆಗಳಾದ ಲಷ್ಕರ್ ಇ ತೊಯ್ಬಾ ಹಾಗೂ ಜೈಶ್ ಇ ಮೊಹಮದ್ ಉಗ್ರ ಸಂಘಟನೆಗಳ ಹೆಸರು ಪ್ರಸ್ತಾಪಕ್ಕೆ ಚೀನಾ ಅಡ್ಡಗಾಲು ಹಾಕಿತ್ತು ಎಂದು ಹೇಳಲಾಗುತ್ತಿದೆ.

ಪಣಜಿ: ಗಡಿಯಾಚೆಗಿನ ಭಯೋತ್ಪಾದನೆಯನ್ನು ವಿರೋಧಿಸುವ ಮತ್ತು ಅದನ್ನು ಎದುರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಿರ್ಧಾರಕ್ಕೆ ಗೋವಾದಲ್ಲಿ ನಡೆದ ಬ್ರಿಕ್ಸ್ ಸಮಾವೇಶದಲ್ಲಿ ಪಂಚ ಸದಸ್ಯ ರಾಷ್ಟ್ರಗಳು ಒಕ್ಕೊರಲಿನ ನಿರ್ಧಾರಕ್ಕೆ ಬಂದಿವೆಯಾದರೂ, ಪಾಕಿಸ್ತಾನ ಪ್ರಾಯೋಜಿತ ಉಗ್ರ ಸಂಘಟನೆಗಳಾದ ಲಷ್ಕರ್ ಇ ತೊಯ್ಬಾ ಹಾಗೂ ಜೈಶ್ ಇ ಮೊಹಮದ್ ಉಗ್ರ ಸಂಘಟನೆಗಳ ಹೆಸರು ಪ್ರಸ್ತಾಪಕ್ಕೆ ಚೀನಾ ಅಡ್ಡಗಾಲು ಹಾಕಿತ್ತು ಎಂದು ಹೇಳಲಾಗುತ್ತಿದೆ.
ಈ ಹಿಂದೆ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯು ಮುಖ್ಯಸ್ಥ ಅಜರ್ ಮಸೂದ್ ನನ್ನು ವಿಶ್ವಸಂಸ್ಥೆಯ ಉಗ್ರಗಾಮಿಗಳ ಪಟ್ಟಿಗೆ ಸೇರಿಸಬೇಕು ಎನ್ನುವ ವಾದಕ್ಕೆ ಅಡ್ಡಿಯಾಗಿದ್ದ ಚೀನಾ ಅದೇ ನಿಲುವನ್ನು ಗೋವಾ ಬ್ರಿಕ್ಸ್ ಸಮಾವೇಶದಲ್ಲೂ ಮುಂದುವರೆಸಿದ್ದು, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಹೆಸರು ಪ್ರಸ್ತಾಪಕ್ಕೆ ಅಡ್ಡಿಯಾಗಿತ್ತು ಎಂದು ಕೇಂದ್ರ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಅಮರ್ ಸಿನ್ಹಾ ಹೇಳಿದ್ದಾರೆ.
ಈ ಉಗ್ರಗಾಮಿ ಸಂಘಟನೆಗಳ ಕುರಿತಂತೆ ಗೋವಾ ಬ್ರಿಕ್ಸ್ ಸಮಾವೇಶದಲ್ಲಿ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಅವರು ಚೀನಾ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 'ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಿಗೆ ಭಾರತವೇ ಪ್ರಮುಖ ಗುರಿಯಾಗಿದ್ದು, ಬೇರೆ ರಾಷ್ಟ್ರಗಳಿಗೆ ಇದರ ಕಾಳಜಿಯೇ ಇಲ್ಲ ಎಂಬ ಭಾವನೆ ಮೂಡುತ್ತಿದೆ. ಭಾರತದ ಮಟ್ಟಿಗೆ ಇದು ನಿಜಕ್ಕೂ ನಿರಾಶಾದಾಯಕ ನಡೆಯಾಗಿದ್ದು, ಗೋವಾ ಘೋಷಣೆಯಲ್ಲಿ ಪಾಕಿಸ್ತಾನ ಮೂಲದ ಅಂತಾರಾಷ್ಟ್ರೀಯ ಉಗ್ರಗಾಮಿ ಸಂಘಟನೆಗಳಾದ ಜೈಶ್ ಇ ಮೊಹಮದ್, ಲಷ್ಕರ್ ಇ ತೊಯ್ಬಾ ಹಾಗೂ ವಿದೇಶಿ ಉಗ್ರ ಸಂಘಟನೆಗಳಾದ ಇಸಿಸ್ ನ ಹೆಸರು ಉಲ್ಲೇಖವಾಗಬೇಕಿತ್ತು ಮತ್ತು ಭಾರತದಲ್ಲಿ ನಡೆದ ಉರಿ ಉಗ್ರದಾಳಿಗಳಂತಹ ಕೃತ್ಯಗಳ ಉಲ್ಲೇಖವಾಗಬೇಕಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


