ನೋಟು ಹಿಂಪಡೆತ ನಿರ್ಧಾರದ ವಿರುದ್ಧ ಪ್ರತಿಭಟನೆ; ದೆಹಲಿ ಉಪಮುಖ್ಯಮಂತ್ರಿ ವಶಕ್ಕೆ
೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡಿಗೆ ಮಾಡುತ್ತಿದ್ದ ಎಎಪಿ ಪಕ್ಷದ ಮುಖಂಡರಿಗೆ ತಡೆ ಹಾಕಿದ ದೆಹಲಿ ಪೊಲೀಸರು ಮನೀಶ್

Published On :
ನವದೆಹಲಿ: ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡಿಗೆ ಮಾಡುತ್ತಿದ್ದ ಎಎಪಿ ಪಕ್ಷದ ಮುಖಂಡರಿಗೆ ತಡೆ ಹಾಕಿದ ದೆಹಲಿ ಪೊಲೀಸರು ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಧಿಯಾ ಸೇರಿದಂತೆ ೫೦ ಕ್ಕೂ ಹೆಚ್ಚು ಜನ ಎಎಪಿ ಮುಖಂಡರನ್ನು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದ್ದಾರೆ.
ದೆಹಲಿಯ ಹೃದಯಭಾಗದಲ್ಲಿರುವ ಸಂಸತ್ ಬೀದಿ ಪೊಲೀಸ್ ಠಾಣೆಯ ಬಳಿ ಹಲವು ಶಾಸಕರು ಮತ್ತು ಸಚಿವರನ್ನು ಸೇರಿದಂತೆ ೫೨ ರಿಂದ ೫೩ ಎಎಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದಿದ್ದರು ಎಂದು ಆಮ್ ಆದ್ಮಿ ಪಕ್ಷದ ಮುಖಂಡ ದಿಲೀಪ್ ಪಾಂಡೆ ಹೇಳಿದ್ದಾರೆ.
'ನೋಟ್ ಬದಲಾವಣೆ ಅಲ್ಲ ಪ್ರಧಾನಿ ಬದಲಿಸಿ' ಎಂಬ ಘೋಷಣೆಯೊಂದಿಗೆ ಜಂತರ್ ಮಂತರ್ ನಿಂದ ಸಂಸತ್ ಭವನದ ಕಡೆಗೆ ೪೦೦ ರಿಂದ ೫೦೦ ಎಎಪಿ ಮುಖಂಡರು ರ್ಯಾಲಿ ನಡೆಸುವಾಗ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.
ಸಂಸತ್ ಭವನಕ್ಕೂ ಒಂದು ಕಿಲೋಮೀಟರ್ ಮುಂಚೆಯೇ ಪೊಲೀಸರು ತಡೆಗೋಡಿ ನಿರ್ಮಿಸಿ ಪ್ರತಿಭಟನಾಕಾರರನ್ನು ತಡೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಭ್ರಷ್ಟಾಚಾರ ಆರೋಪಗಳ ಬಗ್ಗೆ ಮನೀಶ್ ಸಿಸೋಧಿಯಾ ಭಾಷಣ ಮಾಡಿದ್ದಾರೆ.
ಪ್ರಧಾನಿ ತಮ್ಮ ಗೆಳೆಯರನ್ನು ಸಂತುಷ್ಟಪಡಿಸಲು, ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆದು ಸಾಮಾನ್ಯ ಜನರಿಗೆ ಅಪಾರ ತೊಂದರೆಗಳನ್ನು ಸೃಷ್ಟಿಸಿದ್ದಾರೆ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


