ಪ್ರಧಾನ ಸುದ್ದಿ

ಗುರುವಾರ ಮಧ್ಯರಾತ್ರಿಯಿಂದ ಎಟಿಎಂಗಳಲ್ಲಿ ನೂತನ ನೋಟುಗಳು: ಜೇಟ್ಲಿ

ನೂತನವಾಗಿ ಬಿಡುಗಡೆಯಾಗಿರುವ ೫೦೦ ಮತ್ತು ೨೦೦೦ ರೂ ಮೌಲ್ಯದ ನೋಟುಗಳನ್ನು ಗ್ರಾಹಕರು ಎಟಿಎಂಗಳಿಂದ ಗುರುವಾರ ಮಧ್ಯರಾತ್ರಿಯಿಂದ ಪಡೆಯಬಹುದಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್

ಗುರುವಾರ ಮಧ್ಯರಾತ್ರಿಯಿಂದ ಎಟಿಎಂಗಳಲ್ಲಿ ನೂತನ ನೋಟುಗಳು: ಜೇಟ್ಲಿ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ನೂತನವಾಗಿ ಬಿಡುಗಡೆಯಾಗಿರುವ ೫೦೦ ಮತ್ತು ೨೦೦೦ ರೂ ಮೌಲ್ಯದ ನೋಟುಗಳನ್ನು ಗ್ರಾಹಕರು ಎಟಿಎಂಗಳಿಂದ ಗುರುವಾರ ಮಧ್ಯರಾತ್ರಿಯಿಂದ ಪಡೆಯಬಹುದಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
"ಇಂದು (ಗುರುವಾರ) ಮಧ್ಯರಾತ್ರಿಯಿಂದ ಎಟಿಎಂಗಳು ಕೆಲಸ ಪ್ರಾರಂಭಿಸಲಿವೆ. ಜನರು ನೂತನ ನೋಟುಗಳನ್ನು ಪಡೆಯಬಹುದು" ಎಂದು ಟಿವಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. 
ನವೆಂಬರ್ ೮ ಮಧ್ಯರಾತ್ರಿಯಿಂದ ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವ ನಿರ್ಧಾರವನ್ನು ಕೇಂದ್ರ ಸರ್ಕಾರ ಘೋಷಿಸಿತ್ತು. ಈಗ ಹೊಸ ನೋಟುಗಳನ್ನು ಗುರುವಾರದಿಂದ ಬ್ಯಾಂಕ್ ಗಳು ಮತ್ತು ಅಂಚೆ ಕಚೇರಿಗಳಲ್ಲಿ ಕೂಡ ವಿತರಿಸಲಾಗುತ್ತಿದೆ. 
ಗುರುವಾರ ಬ್ಯಾಂಕ್ ಮತ್ತು ಅಂಚೆ ಕಚೇರಿಗಳ ಮುಂದೆ ಜನ ಉದ್ದುದ್ದ ಸಾಲುಗಟ್ಟಿದ್ದು ಸರ್ವೇ ಸಾಮನ್ಯವಾಗಿತ್ತು. ಈಗ ಮಧ್ಯರಾತ್ರಿಯಿಂದ ಎಟಿಎಂ ನಲ್ಲಿ ಹಣ ಸಿಗುವದರಿಂದ ಪರಿಸ್ಥಿತಿ ತಿಳಿಗೊಂದು ಜನರ ಭೀತಿ ಕಡಿಮೆಯಾಗಲಿದೆ ಎನ್ನಲಾಗಿದೆ. 
ಸದ್ಯದ ಆರ್ಥಿಕ ವ್ಯವಸ್ಥೆಯಲ್ಲಿ ೧೪ ಲಕ್ಷ ಕೋಟಿ ರೂ ದೊಡ್ಡ ಮೌಲ್ಯದ ನೋಟುಗಳಿಂದ ಚಲಾವಣೆಯಲ್ಲಿದೆ ಎಂದು ತಿಳಿಸಿರುವ ಜೇಟ್ಲಿ "ಇದರಲ್ಲಿ ಎಷ್ಟು ಹೊಸ ನೋಟುಗಳಿಂದ ಬದಲಾಗುತ್ತದೆಯೋ ನನಗೆ ಊಹಿಸಲು ಸಾಧ್ಯವಿಲ್ಲ" ಎಂದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.