ಪ್ರಧಾನ ಸುದ್ದಿ

ಸಿದ್ದು ಸರ್ಕಾರಕ್ಕೆ ಮೂರು ವರ್ಷ: ಸಚಿವರ ಕಾರ್ಯವೈಖರಿ ಮತ್ತು ರೇಟಿಂಗ್ಸ್

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ ಮೂರು ವರ್ಷ. ಹಲವು ಎಡರು-ತೊಡರುಗಳ ನಡುವೆಯೂ ಸಿದ್ದರಾಮಯ್ಯ...

ಸಿದ್ದು ಸರ್ಕಾರಕ್ಕೆ ಮೂರು ವರ್ಷ: ಸಚಿವರ ಕಾರ್ಯವೈಖರಿ ಮತ್ತು ರೇಟಿಂಗ್ಸ್
ಮುಖ್ಯಮಂತ್ರಿ ಸಿದ್ದರಾಮಯ್ಯ
Published On :
ಬೆಂಗಳೂರು: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇಂದಿಗೆ ಮೂರು ವರ್ಷ. ಹಲವು ಎಡರು-ತೊಡರುಗಳ ನಡುವೆಯೂ ಸಿದ್ದರಾಮಯ್ಯ ಮುಖ್ಯಮಂತ್ರಿ ಗಾದಿಯಲ್ಲಿ 3 ವರ್ಷ ಪೂರೈಸಿದ್ದಾರೆ. 
ಹಿಂದಿನ ಬಿಜೆಪಿ ಸರ್ಕಾರದ ಗೊಂದಲಗಳಿಂದ ಬೇಸತ್ತ ರಾಜ್ಯದ ಜನ ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ನೀಡಿದ್ದರು. ಹೀಗಾಗಿ ಹಿಂದಿನ ಅವಧಿಯಲ್ಲಿ ಪ್ರತಿಪಕ್ಷದ ನಾಯಕನಾಗಿದ್ದ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಯಾದರು. ಇನ್ನು ಸಾವಿರ ದಿನಗಳು ಪೂರೈಸಿದ ಕಾಂಗ್ರೆಸ್ ಸರ್ಕಾರದ ಮಂತ್ರಿಗಳು ರಾಜ್ಯಕ್ಕೆ ಏನೇನು ಕೊಡುಗೆ ನೀಡಿದ್ದಾರೆ ಹಾಗೂ ಅವರ ಕಾರ್ಯವೈಖರಿ ಬಗ್ಗೆ ಮೌಲ್ಯಮಾಪನ ಮಾಡಲಾಗಿದ್ದು, ಸಚಿವರು ಮುಖ್ಯಮಂತ್ರಿಗಳ ಕಾರ್ಯವೈಖರಿ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ನೀಡಿರುವ ರೇಟಿಂಗ್ ವರದಿ ಹೀಗಿದೆ..
ಮುಖ್ಯಮಂತ್ರಿ ಸಿದ್ದರಾಮಯ್ಯ
ಆರಂಭದಲ್ಲಿ ಬಡವರು, ದಲಿತರು, ಮತ್ತು ಬಿಪಿಎಲ್ ಕಾರ್ಡ್ ದಾರರು ಮತ್ತು ಅಲ್ಪಸಂಖ್ಯಾತರಿಗಾಗಿ ಆಹಾರ ಭದ್ರತೆ ಮತ್ತು ಕಲ್ಯಾಣ ಯೋಜನೆಗಳನ್ನು ಘೋಷಿಸಿದರು. 
ಅಹಿಂದಾ (ಅಲ್ಲಸಂಖ್ಯಾತರು-ಹಿಂದುಳಿದವರು- ದಲಿತರು) ಮಕ್ಕಳ ಶಿಕ್ಷಣಕ್ಕಾಗಿ ಒತ್ತು.
ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಹೆಚ್ವಿಚಿನ ಗೆಲವು ಸಾಧಿಸುವಲ್ಲಿ ವಿಫಲ. 
ವಿವಾದಗಳು: ದುಬಾರಿ ವಾಚ್ ಉಡುಗೊರೆ ಪ್ರಕರಣ, ಲೋಕಾಯುಕ್ತ ದುರ್ಬಲಗೊಳಿಸಿ ಎಸಿಬಿ ರಚನೆ, ಪುತ್ರನ ಲ್ಯಾಬ್ ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಜಾಗ
ಕಾರ್ಯವೈಖರಿ ರೇಟಿಂಗ್: 6/10
2. ಆರ್ ವಿ ದೇಶಪಾಂಡೆ-ವಾಣಿಜ್ಯ, ಕೈಗಾರಿಕಾ ಮತ್ತು ಪ್ರವಾಸೋದ್ಯಮ ಸಚಿವ
ಇನ್ವೆಸ್ಟ್ ಕರ್ನಾಟಕದಲ್ಲಿ ಯಶಸ್ಸು. ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಕಾರ್ಪೋರೇಟರ್ ವಲಯವನ್ನು ತೊಡಗಿಸಿಕೊಳ್ಳುವುದರಲ್ಲಿ ವಿಫಲ
ರೇಟಿಂಗ್: 5.5/10
3 ಜಿ ಪರಮೇಶ್ವರ್ -ಗೃಹಸಚಿವ
ಕೆಪಿಸಿಸಿ ಅಧ್ಯಕ್ಷರಾಗಿ ಹಾಗೂ ಗೃಹಸಚಿವರಾಗಿ ಕಾರ್ಯ ನಿರ್ವಹಣೆ. ಪೊಲೀಸ್ ಇಲಾಖೆಯನ್ನು ಆಧುನಿಕರಿಸಲು ಕ್ರಮ. ಪೊಲೀಸ್‌ "ವಸತಿ ಭಾಗ್ಯ': ವಸತಿ ರಹಿತ ಪೊಲೀಸ್‌ ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸಿಕೊಡಲು ಹೊಸದಾಗಿ "ಪೊಲೀಸ್‌ ವಸತಿ ಭಾಗ್ಯ' ಯೋಜನೆ ಜಾರಿಗೆ ಒತ್ತು
ರೇಟಿಂಗ್- 5.25/10
4.ಕೆ ಜೆ ಜಾರ್ಜ್-ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಚಿವ
ನಗರಾಭಿವೃದ್ಧಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜಾರ್ಜ್, ಮಕ್ಕಳು ಮತ್ತು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಕ್ರಮ 
ರೇಟಿಂಗ್:4.5/10
6. ರಾಮಲಿಂಗಾ ರೆಡ್ಡಿ- ಸಾರಿಗೆ ಸಚಿವ
ಬೆಂಗಳೂರು ಉಸ್ತುವಾರಿ ಸಚಿವರಾಗಿದ್ದ ಸಂದರ್ಭದಲ್ಲಿ ಕಸ ಸಮಸ್ಯೆ ಬಗೆಹರಿಸುವಲ್ಲಿ ವಿಫಲ. ಬಿಎಂಟಿಸಿ ಮತ್ತು ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಮಹಿಳೆಯರ ಸುರಕ್ಷೆಗಾಗಿ ಸಿಸಿಟಿವಿ ಅಳವಡಿಕೆ 
ರೇಟಿಂಗ್: 4.75/10
7.ಎಚ್ ಕೆ ಪಾಟೀಲ್- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ 
ಪಂಚಾಯತ್ ಕಾಯ್ದೆ ಸುಧಾರಣೆ ಮತ್ತು ಜನಸಾಮಾನ್ಯರಿಗೆ ಹೆಚ್ಚಿನ ಅಧಿಕಾರ. ಇಲಾಖೆ ಅಕ್ರಮ ಮತ್ತು ಬರ ಪರಿಸ್ಥಿತಿ ನಿಭಾಯಿಸುವಲ್ಲಿ ವಿಫಲ
ರೇಟಿಂಗ್: 6/10
8.ಟಿ ಬಿ ಜಯಚಂದ್ರ-ಉನ್ನತ ಶಿಕ್ಷಣ ಮತ್ತು ಕಾನೂನು ಮತ್ತು ಸಂಸತ್ ವ್ಯವಹಾರಗಳ ಸಚಿವ
ಸಿದ್ದರಾಮಯ್ಯ ಸರ್ಕಾರದ ವಕ್ತಾರರಂತೆ ಕಾರ್ಯನಿರ್ವಹಣೆ. ಉತ್ತಮ ಸಂಯೋಜಕ. ಮೂಢನಂಬಿಕೆ ನಿಷೇಧ ಕಾಯ್ದೆ ಜಾರಿಗೆ ಒಲವು
ರೇಟಿಂಗ್: 6.5/10
9.ಉಮಾಶ್ರೀ- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ-ಕನ್ನಡ ಮತ್ತು ಸಂಸ್ಕೃತಿ ಸಚಿವೆ
ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆಯಲು ಅಧಿಕಾರ ದುರುಪಯೋಗ ಪಡೆಸಿಕೊಂಡಿದ್ದಾರೆಂಬ ಆರೋಪ ಕೇಳಿ ಬಂದಿತ್ತು. 
ರೇಟಿಂಗ್- 4.5/10
10.ಎಂ ಎಚ್ ಅಂಬರೀಶ್ - ವಸತಿ ಸಚಿವ
ಕಳಪೆ ಕಾರ್ಯಕ್ಷಮತೆ, ಮಂಡ್ಯ ಕಾಂಗ್ರೆಸ್ ನ ಗುಂಪುಗಾರಿಕೆ ಹೋರಾಟದಲ್ಲಿ ಗುರುತಿಸಿಕೊಂಡವರು. ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ ಸಚಿವ 
ರೇಟಿಂಗ್: 3.25/10
11. ಕಿಮ್ಮನೆ ರತ್ನಾಕರ್ - ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ 
ಯಾವುದೇ ವಿವಾದಗಳಿಗೆ ಸಿಲುಕದ ಸಚಿವ. ಆದರೆ ಆಡಳಿತ ನಿರ್ವಹಣೆಯಲ್ಲಿ ಹಿನ್ನಡೆ. ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯಿಂದಾಗಿ ಮುಂದಿನ ಸಚಿವ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ. 
ರೇಟಿಂಗ್: 4.75/10
12.ಡಿ.ಕೆ ಶಿವಕುಮಾರ್ -ಇಂಧನ ಸಚಿವ
ಕಟ್ಟುನಿಟ್ಟಾದ ಕಾರ್ಯವೈಖರಿ. ವಿದ್ಯುತ್ ಬಗ್ಗೆ ನಿಖರವಾದ ಮಾಹಿತಿ ನೀಡುವಲ್ಲಿ ಗೊಂದಲ. ಸೋನಿಯಾ ಗಾಂಧಿ ಅವರ ಆಪ್ತ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳಾಗುವ ಅರ್ಹತೆ ಹೊಂದಿರುವವರು 
ರೇಟಿಂಗ್: 4.5/10
13.ರೋಷನ್ ಬೇಗ್- ಮೂಲಭೂತ ಸೌಕರ್ಯ ಅಭಿವೃದ್ಧಿ, ಕನ್ನಡ ಮತ್ತು ಸಂಸ್ಕೃತಿ ಮತ್ತು ಹಜ್ ಸಚಿವ
ಮೂಲಭೂತ ಸೌಕರ್ಯ ಅಭಿವೃದ್ಧಿಯಲ್ಲಿ ಕಳಪೆ ಕಾರ್ಯಕ್ಷಮತೆ. ಹಜ್ ಭಕ್ತಾದಿಗಳಿಗೆ ಸೌಲಭ್ಯ ಒದಗಿಸುವಲ್ಲಿ ಸುಧಾರಣೆ. ಮುಸ್ಲಿಮರ ಪ್ರಮುಖ ಮುಖಂಡ ಎಂದೆನಿಸಿಕೊಳ್ಳುವ ಪ್ರಯತ್ನ. ಮುಖ್ಯಮಂತ್ರಿಗಳಿಗೆ ಆಪ್ತ
ರೇಟಿಂಗ್: 3.75/10
14. ದಿನೇಶ್ ಗುಂಡೂರಾವ್ - ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ
ಆಧಾರ್ ಬಳಸಿಕೊಂಡು ನಕಲಿ ರೇಷನ್ ಕಾರ್ಡ್ ಗೆ ತಡೆ. ಭೂ ಒತ್ತುವರಿ ಆರೋಪ ಹೊತ್ತಿರುವ ಸಚಿವ. ಕೊಡಗಿನಲ್ಲಿ ಟಿಪ್ಪು ಜಯಂತಿಯಂದು ಉಂಟಾದ ಗಲಭೆ ತಡೆಯುವಲ್ಲಿ ವಿಫಲ
ರೇಟಿಂಗ್: 4.75/10
15.ಕೃಷ್ಣ ಬೈರೇಗೌಡ- ಕೃಷಿ ಸಚಿವ
ಗೋದಾಮಿನ ಮಾದರಿಯಲ್ಲಿ ಮಾರುಕಟ್ಟೆಗೆ ಚಾಲನೆ. ಕೃಷಿ ಭಾಗ್ಯ. ಬರ ಪೀಡಿತ ರೈತರಿಗೆ ಸರಿಯಾಗಿ ಪರಿಹಾರ ನೀಡುತ್ತಿಲ್ಲ ಎಂದು ಸಚಿವ ವಿರುದ್ಧ ಆರೋಪ ಕೇಳಿ ಬಂದಿತ್ತು. ರೇಟಿಂಗ್: 4/10
16. ಯು ಟಿ ಖಾದರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ
ಆರೋಗ್ಯ ಸಂಬಂಧಿಸಿದಂತೆ ಅನೇಕ ಯೋಜನಗಳ ಜಾರಿ. ವೈದ್ಯಕೀಯ ಸೇವೆ ಹೆಚ್ಚಿಸಲು ಪ್ರಯತ್ನ. ಪ್ರತಿಯೊಂದು ಜಿಲ್ಲಾ ಆಸ್ಪತ್ರೆಯಲ್ಲೂ ಐಸಿಯು ಘಟಕ ಸ್ಥಾಪಿಸಲು ವೈದ್ಯಕೀಯ ಸೇವೆ ಸೇವೆ ಒದಗಿಸಲು ಪ್ರಯತ್ನ. ವೈದ್ಯರ ಹುದ್ದೆ ಭರ್ತಿಗೊಳಿಸುವಲ್ಲಿ ವಿಫಲ
17. ಪಿ ಟಿ ಪರಮೇಶ್ವರ್ ನಾಯಕ್-ಕಾನೂನು ಸಚಿವ
ಅಧಿಕಾರಿಗಳ ವರ್ಗಾವಣೆ ವಿಷಯದಲ್ಲಿ ವಿವಾದಕ್ಕೆ ಸಿಲುಕಿದ ಸಚಿವ. ಐಟಿ ಹೊರತಾದ ಕ್ಷೇತ್ರಗಳಲ್ಲೂ ರಾತ್ರಿ ವೇಳೆ ಮಹಿಳೆಯರು ಕೆಲಸ ಮಾಡಲು ಅವಕಾಶ ಕಲ್ಪಿಸಿದ ಸಚಿವ. ಗಾರ್ಮೆಂಟ್ಸ್ ಗಳಲ್ಲಿ ಮಹಿಳೆಯ ಕಾರ್ಯ ವೈಖರಿ ಸುಧಾರಣೆಗೊಳಿಸುವಲ್ಲಿ ವಿಫಲ
ರೇಟಿಂಗ್: 3/10
18  ವಿ ಶ್ರೀನಿವಾಸ ಪ್ರಸಾದ್- ಕಂದಾಯ ಸಚಿವ
ಯಾವುದೇ ಭೂಮಿ ಸ್ವಾಧೀನಪಡಿಸಿಕೊಳ್ಳಲು ಕೃಷಿ ಭೂಮಿ ಹೊರತುಪಡಿಸಿದ ಮೂಲಗಳಿಂದ ಇದ್ದ ವಾರ್ಷಿಕ ಆದಾಯ ಮಿತಿಯನ್ನು ಹೆಚ್ಚಿಸುವ ಕುರಿತ ವಿಧೇಯಕ ಮಂಡನೆ. ರೇಟಿಂಗ್ 4.5/10 
19. ಎಚ್ ಸಿ ಮಹದೇವಪ್ಪ- ಪಿಡಬ್ಯೂಡಿ ಸಚಿವ
ಮುಖ್ಯಮಂತ್ರಿಗಳ ಆಪ್ತ. ಅಕ್ರಮ ಮರಳು ದಂಧೆಯಲ್ಲಿ ತಮ್ಮ ಪುತ್ರ ಭಾಗಿಯಾಗಿರುವ ಆರೋಪ ಸಂಬಂಧ ಕುರುಡತನ ಪ್ರದರ್ಶಿಸುತ್ತಿರುವ ಸಚಿವ. ರಾಜ್ಯ ಹೆದ್ದಾರಿ ಗುಣಮಟ್ಟ ಸುಧಾರಿಸಿದ ಸಚಿವ. ರೇಟಿಂಗ್: 4/10
20 ಮನೋಹರ್ ತಾಹಿಸಿಲ್ದಾರ್ - ಅಬಕಾರಿ ಮತ್ತು ಮುಜಾರಾಯಿ ಇಲಾಖೆ ಸಚಿವ
ಹೊಸ ಮದ್ಯದ ಅಂಗಡಿಗಳಿಗೆ ಲೈಸೆನ್ಸ್ ತಡೆ. 
ರೇಟಿಂಗ್: 4/10
21. ಎಸ್ ಆರ್ ಪಾಟೀಲ್- ವಿಜ್ಞಾನ, ತಂತ್ರಜ್ಞಾನ ಸಚಿವ
ಈ ಸಚಿವ ಸ್ಥಾನಕ್ಕೆ ಎಸ್ ಆರ್ ಪಾಟೀಲ್ ಅರ್ಹರಲ್ಲ ಎಂಬ ಮಾತುಗಳು ಕೇಳಿ ಬಂದಿತ್ತು. ರೇಟಿಂಗ್: 4/10
22. ಕೆ. ಅಭಯಚಂದ್ರ -ರಾಜ್ಯ ಯುವಜನ ಸೇವೆ ಮತ್ತು ಕ್ರೀಡಾ ಸಚಿವ
ಕ್ರೀಡಾ ವಲಯದಲ್ಲಿ ಕಳಪೆ ಕಾರ್ಯಕ್ಷಮತೆ. ಬೆಟ್ಟಿಂಗ್ ಮತ್ತು ಮಕ್ಕಳ ಮೇಲಿನ ಲೈಂಗಿಕ ಚಿತ್ರಗಳ ಸಿಡಿಗಳನ್ನು ಫ್ಲ್ಯಾಟ್ ನಲ್ಲಿ ಹೊಂದಿದ್ದ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲ
ರೇಟಿಂಗ್ 4/10
23. ಎಚ್ ಎಸ್ ಮಹದೇವಪ್ರಸಾದ್- ಸಹಕಾರ, ಸಕ್ಕರೆ ಸಚಿವ
ಸಹಗಾರಿ ಸಂಸ್ಥೆಗಳ ಮೂಲಕ ರೈತ ಸಾಲ ವಿಸ್ತರಣೆ. ಆದರೆ ಕಬ್ಬು ಬೆಳೆಗಾರರಿಗೆ ಬಾಕಿ ಹಣ ಪಾವತಿ ಮಾಡದ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲ 
ರೇಟಿಂಗ್: 4/10
24. ಬಾಬುರಾವ್ ಚಿಂಚಂಸೂರ್- ಜವಳಿ ಮತ್ತು ಅಂತರಿಕ ಸಾರಿಗೆ, ಬಂದರು ಖಾತೆ ಸಚಿವ 
ಬಾಬುರಾವ್ ಚಿಂಚನಸೂರ್ ಅವರ ಮೇಲೆ ಕೋಟ್ಯಂತರ ರುಪಾಯಿ ವಂಚನೆ ಆರೋಪ ಹೊರೆಸಲಾಗಿದೆ. ರೇಟಿಂಗ್: 2.75/10
25. ಎಚ್ ಆಂಜನೇಯ ಸಮಾಜ ಕಲ್ಯಾಣ ಸಚಿವ 
ಟೆಂಡರ್ ನೀಡಲು ಆಂಜನೇಯ ಪತ್ನಿ ಲಂಚ ಪಡೆದ ಆರೋಪ. ಸಾಮೂಹಿಕ ವಿವಾಹದಲ್ಲಿ ಮಗಳ ಮದುವೆ ಮಾಡಿ ಶ್ಲಾಘನೆಗೆ ಒಳಗಾದ ಸಚಿವ
ರೇಟಿಂಗ್: 4.5/10
26. ಡಾ. ಶರಣ್ ಪ್ರಕಾಶ್ ಪಾಟೀಲ್, ವೈದ್ಯಕೀಯ ಶಿಕ್ಷಣ ಸಚಿವ
ಪ್ರತಿಯೊಂದು ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಸ್ಥಾಪಿಸಲು ಚಿಂತನೆ ನಡೆಸಿದ ಸಚಿವ. ಆಸ್ಪತ್ರೆ ಸುಧಾರಣೆಯಲ್ಲಿ ವಿಫಲ. ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲಿ ಸಚಿವ ಆಪ್ತ ಕಾರ್ಯದರ್ಶಿ ಬಂಧನ
ರೇಟಿಂಗ್: 3.5/10
27. ಎ.ಮಂಜು-ಪಶುಸಂಗೋಪನೆ ಸಚಿವ
ಹಾಲು ಬೆಲೆ ಏರಿಕೆ. ಹಕ್ಕಿ ಜ್ವರ ಹರಡುವಿಕೆ ತಡೆಯುವಲ್ಲಿ ಮುಂಜಾಗ್ರತೆ ಕ್ರಮ ಕೈಗೊಂಡ ಸಚಿವ
ರೇಟಿಂಗ್: 4.25/10 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.