ಪ್ರಧಾನ ಸುದ್ದಿ

ಟ್ರಂಪ್ ಗೆಲುವು ಭಾರತಕ್ಕೆ ವ್ಯಾಕುಲವಾಗಲಿದೆ: ಸಲ್ಮಾನ್ ಖುರ್ಷಿದ್

ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದರೆ ಭಾತಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಲಿದೆ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್.

ಟ್ರಂಪ್ ಗೆಲುವು ಭಾರತಕ್ಕೆ ವ್ಯಾಕುಲವಾಗಲಿದೆ: ಸಲ್ಮಾನ್ ಖುರ್ಷಿದ್
ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್
Published On :

ವಾಶಿಂಗ್ಟನ್: ಅಮೆರಿಕಾದ ಮುಂದಿನ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಯ್ಕೆಯಾದರೆ ಭಾತಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಲಿದೆ ಎಂದಿದ್ದಾರೆ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್. ನವೆಂಬರ್ ೮ ರ ಚುನಾವಣೆಯನ್ನು ರಿಯಲ್ ಎಸ್ಟೇಟ್ ವಾಣಿಜ್ಯೋದಮಿ ಟ್ರಂಪ್ ಗೆಲ್ಲಬಹುದೆಂಬ ಜಾಗತಿಕ ಕಳವಳಕ್ಕೆ ಭಾರತದ ಮಾಜಿ ವಿದೇಶಾಂಗ ಸಚಿವ ಧ್ವನಿಗೂಡಿದಿದ್ದಾರೆ.

"ಡೊನಾಲ್ಡ್ ಟ್ರಂಪ್ ನಿಮ್ಮ ಮುಂದಿನ ಅಧ್ಯಕ್ಷರಾದರೆ ಭಾರತಕ್ಕೆ ತೀವ್ರ ತಲೆನೋವಾಗಿ ಪರಿಣಮಿಸಲಿದೆ" ಎಂದು ಖ್ಯಾತ ಜಾರ್ಜ್ ಟೌನ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಜೊತೆಗಿನ ಸಂವಾದದಲ್ಲಿ ಖುರ್ಷಿದ್ ಹೇಳಿದ್ದಾರೆ.

ಒಬಾಮಾ ಬಗೆಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಖುರ್ಷಿದ್ "ಅವರು ಭಾರತದ ಒಳ್ಳೆಯ ಗೆಳೆಯ.... ಭಾರತ ಅವರ ಜೊತೆಗೆ ಒಳ್ಳೆಯ ಸಂಬಂಧ ಹೊಂದಿತ್ತು. ಭಾರತ ಅವರ ಮಾತುಗಳನ್ನು ನಂಬುತ್ತಿತ್ತು. ಅವರ ಮಾರ್ಗವನ್ನು ವೈಟ್ ಹೌಸ್ ಹಿಂಬಾಲಿಸಲಿದೆ ಎಂದು ನಂಬುತ್ತೇನೆ" ಎಂದಿದ್ದಾರೆ.

ಡೊನಾಲ್ಡ್ ಟ್ರಂಪ್ ಮುಸ್ಲಿಂ ಸಮುದಾಯದ ವಿರುದ್ಧ, ವಲಸಿಗರ ವಿರುದ್ಧ ನೀಡುತ್ತಾ ಬಂದಿರುವ ವಿವಾದಾತ್ಮಕ ಹೇಳಿಕೆಗಳಿಂದ ಜಾಗತಿಕವಾಗಿ ಖಂಡನೆಗೆ ಒಳಗಾಗಿದ್ದಾರೆ.

ಭಾರತದಲ್ಲಿ ಇಂದಿಗೂ ಮಾಜಿ ಅಮೇರಿಕಾ ಪ್ರಧಾನಿ ಜಾನ್ ಎಫ್ ಕೆನಡಿ ಜನಪ್ರಿಯರಾಗಿದ್ದು, ಅವರ ನಂತರದ ಜನಪ್ರಿಯತೆ ಒಬಾಮಾ ಅವರದ್ದೇ ಎಂದಿದ್ದಾರೆ ಖುರ್ಷಿದ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.