ಪ್ರಧಾನ ಸುದ್ದಿ

ಕಾಲ್ ಡ್ರಾಪ್ ಪರಿಹಾರ ನಿಬಂಧನೆ ಪುನರ್ ಪರಿಶೀಲಿಸಲು ಟ್ರಾಯ್ ಗೆ ಸುಪ್ರೀಂ ಸೂಚನೆ

ಕಾಲ್ ಡ್ರಾಪ್ ಸಮಸ್ಯೆಗೆ ಟ್ರಾಯ್(ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಸೂಚಿಸಿದ್ದ ಪರಿಹಾರ ನಿಯಮಗಳನ್ನು ಪುನಃ ಪರಿಶೀಲಿಸಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಕಾಲ್ ಡ್ರಾಪ್ ಪರಿಹಾರ ನಿಬಂಧನೆ ಪುನರ್ ಪರಿಶೀಲಿಸಲು ಟ್ರಾಯ್ ಗೆ ಸುಪ್ರೀಂ ಸೂಚನೆ
ಕಾಲ್ ಡ್ರಾಪ್ ಪರಿಹಾರ ನಿಬಂಧನೆ ಪುನರ್ ಪರಿಶೀಲಿಸಲು ಟ್ರಾಯ್ ಗೆ ಸುಪ್ರೀಂ ಸೂಚನೆ
Published On :

ನವದೆಹಲಿ: ಕಾಲ್ ಡ್ರಾಪ್ ಸಮಸ್ಯೆಗೆ ಟ್ರಾಯ್(ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ) ಸೂಚಿಸಿದ್ದ ಪರಿಹಾರ ನಿಯಮಗಳನ್ನು ಪುನಃ ಪರಿಶೀಲಿಸಿಸಬೇಕೆಂದು ಸುಪ್ರೀಂ ಕೋರ್ಟ್ ಹೇಳಿದೆ.

ಟ್ರಾಯ್ ಪರಿಹಾರ ನಿಯಮಗಳನ್ನು ಪ್ರಶ್ನಿಸಿ ಟೆಲಿಕಾಂ ಆಪರೇಟರ್ ಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಪರಿಹಾರ ನಿಯಮಗಳಲ್ಲಿ ತಿದ್ದುಪಡಿಯನ್ನು ಪರಿಗಣಿಸಿ ಈ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ತಿಳಿಸಬೇಕು ಎಂದು ಟ್ರಾಯ್ ಗೆ ಸೂಚನೆ ನೀಡಿದೆ.

ಕಾಲ್ ಡ್ರಾಪ್ ಗೆ ಪರಿಹಾರ ಮೊತ್ತ ಹಾಗೂ ನಿಯಮಗಳನ್ನು ನಿಗದಿಪಡಿಸುವ ವಿಚಾರದಲ್ಲಿ ಟ್ರಾಯ್ ತಾಂತ್ರಿಕ ವಿವರಗಳು ಮತ್ತು ತೊಂದರೆಗಳನ್ನು ಪರಿಗಣಿಸಿಲ್ಲ ಎಂದು ಟೆಲಿಕಾಂ ಆಪರೇಟರ್ ಗಳು ಸುಪ್ರೀಂ ಕೋರ್ಟ್ ನಲ್ಲಿ ವಾದಿಸಿದ್ದವು. ಒಂದೆಡೆ ನಗರಸಭೆ ಅಧಿಕಾರಿಗಳು ಸೆಲ್ ಫೋನ್ ಗಳ ಟವರ್ ಗಳನ್ನು ಮುಚ್ಚುತ್ತಿದ್ದಾರೆ, ಇದರಿಂದಾಗಿ ಕರೆಗಳ ಗುಣಮಟ್ಟ ಕುಸಿಯುತ್ತಿವೆ. ಮತ್ತೊಂದೆಡೆ ಟ್ರಾಯ್ ಕಾಲ್ ಡ್ರಾಪ್ ಗೆ ದಂಡ ವಿಧಿಸುತ್ತಿದೆ. ಪ್ರತಿಯೊಂದು ಸೇವೆಯಲ್ಲಿಯೂ ದೋಷಗಳು ಎದುರಾಗುವುದು ಸಹಜ ಅದ್ದರಿಂದ ಪರಿಹಾರ ನಿಯಮಗಳನ್ನು ಪುನಃ ಪರಿಶೀಲಿಸಬೇಕೆಂಬುದು ಟೆಲಿಕಾಂ ಆಪರೇಟರ್ ಗಳ ವಾದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.