ಪ್ರಧಾನ ಸುದ್ದಿ

೨೩ ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದ ಕತಾರ್

ಪ್ರಧಾನಿಯವರ ಐದು ದೇಶಗಳ ಪ್ರವಾಸದ ಭಾಗವಾಗಿ ನರೇಂದ್ರ ಮೋದಿ ಅವರು ಕತಾರ್ ಗೆ ಭೇಟಿ ನೀಡಿದ ನಂತರ ೨೩ ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಕತಾರ್ ಸದ್ಭಾವನಾ ನಡೆಗೆ

೨೩ ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದ ಕತಾರ್
ಪ್ರಧಾನಿ ಮೋದಿ ಕತಾರ್ ಗೆ ಭೇಟಿ ನೀಡಿದ ಸಂದರ್ಭ
Published On :

ನವದೆಹಲಿ: ಪ್ರಧಾನಿಯವರ ಐದು ದೇಶಗಳ ಪ್ರವಾಸದ ಭಾಗವಾಗಿ ನರೇಂದ್ರ ಮೋದಿ ಅವರು ಕತಾರ್ ಗೆ ಭೇಟಿ ನೀಡಿದ ನಂತರ ೨೩ ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡುವ ಮೂಲಕ ಕತಾರ್ ಸದ್ಭಾವನಾ ನಡೆಗೆ ಮುಂದಾಗಿದೆ.

ದೋಹಾದಲ್ಲಿ ಮೋದಿ ಅವರು ಕತಾರ್ ನ ಎಮೀರ್, ಶೇಕ್ ತಮೀಮ್ ಬಿನ್ ಹಮದ್ ಅಲ್-ತನಿ ಅವರನ್ನು ಭೇಟಿ ಮಾಡಿದ ಒಂದು ದಿನದ ನಂತರ ಸೋಮವಾರ ಖೈದಿಗಳ ಬಿಡುಗಡೆಯಾಗಿದೆ. ರಂಜಾನ್ ಸಮಯದಲ್ಲಿ ಪ್ರತಿ ವರ್ಷ ಕತಾರ್ ಸರ್ಕಾರ ನಡೆಸುವ ಕ್ಷಮೆಯ ಸಂಪ್ರದಾಯದಂತೆ ಈ ಬಿಡುಗಡೆ ನೆರವೇರಿಸಿದೆ.

"ವಿಶೇಷ ತಿಂಗಳು (ರಂಜಾನ್) ಪ್ರಾರಂಭಕ್ಕೆ ವಿಶೇಷ ನಡೆ. ಕತಾರ್ ಸರ್ಕಾರ ೨೩ ಭಾರತೀಯ ಖೈದಿಗಳನ್ನು ಬಿಡುಗಡೆ ಮಾಡಿದ್ದು ಅವರೆಲ್ಲರೂ ಭಾರತಕ್ಕೆ ಹಿಂದಿರುಗಲಿದ್ದಾರೆ" ಎಂದು ಮೋದಿ ಮಂಗಳವಾರ ಟ್ವೀಟ್ ಮಾಡಿದ್ದಾರೆ.

"ಈ ನಡೆಗಾಗಿ ಕತಾರ್ ನ ಎಮೀರ್ ಅವರಿಗೆ ನನ್ನ ಧನ್ಯವಾದ ಹೇಳುತ್ತೇನೆ" ಎಂದು ಅಮೆರಿಕಾದಿಂದ ಮೋದಿ ಬರೆದಿದ್ದಾರೆ.

ಐದು ರಾಷ್ಟ್ರಗಳ ಪ್ರವಾಸದಲ್ಲಿ ಆಪ್ಘಾನಿಸ್ಥಾನ, ಕತಾರ್ ಮತ್ತು ಸ್ವಿಟ್ಸರ್ ಲ್ಯಾಂಡ್ ದೇಶಗಳ ಪ್ರವಾಸ ಮುಗಿಸಿ ಸದ್ಯ ಅಮೆರಿಕಾದಲ್ಲಿರುವ ಮೋದಿ ನಂತರ ಮೆಕ್ಸಿಕೋ ಪ್ರವಾಸ ಕೈಗೊಳ್ಳಲಿದ್ದಾರೆ.

ಈ ಬಿಡುಗಡೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ "ಕತಾರ್ ಗೆ ಧನ್ಯವಾದಗಳು. ಪ್ರಧಾನಿಯವರ ಕೋರಿಕೆ ಮೇರೆ ೨೩ ಖೈದಿಗಳನ್ನು ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು" ಎಂದು ಅವರು ಬರೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.