ಎಎಪಿ ಶಾಸಕನ ಗೃಹಕ್ಕೆ ತೆರಿಗೆ ಅಧಿಕಾರಿಗಳ ದಾಳಿ
ದಕ್ಷಿಣ ದೆಹಲಿಯಲ್ಲಿರುವ ಎಎಪಿ ಶಾಸಕ ಕರ್ತಾರ್ ತನ್ವರ್ ಸಿಂಗ್ ಅವರ ಗೃಹದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ ಎಂದು ಪಕ್ಷದ ಮುಖಂಡ ಹೇಳಿದ್ದಾರೆ.

Published On :
ನವದೆಹಲಿ: ದಕ್ಷಿಣ ದೆಹಲಿಯಲ್ಲಿರುವ ಎಎಪಿ ಶಾಸಕ ಕರ್ತಾರ್ ತನ್ವರ್ ಸಿಂಗ್ ಅವರ ಗೃಹದ ಮೇಲೆ ತೆರಿಗೆ ಇಲಾಖೆ ಅಧಿಕಾರಿಗಳು ಬುಧವಾರ ಬೆಳಗ್ಗೆ ದಾಳಿ ನಡೆಸಿದ್ದಾರೆ ಎಂದು ಪಕ್ಷದ ಮುಖಂಡ ಹೇಳಿದ್ದಾರೆ.
"ಈಗಷ್ಟೇ ತಿಳಿದ ಸುದ್ದಿ: ಚತ್ತಾಪುರ ಶಾಸಕ ಕರ್ತಾರ್ ಸಿಂಗ್ ತನ್ವರ್ ಮನೆಯ ಮೇಲೆ ತೆರಿಗೆ ದಾಳಿ. ಸಿ ಬಿ ಐ, ಭ್ರಷ್ಟಾಚಾರ ವಿರೋಧಿ ದಳ, ದೆಹಲಿ ಪೊಲಿಸ್ ಈಗ ತೆರಿಗೆ ಇಲಾಖೆ ಎಲ್ಲವನ್ನು ಎಎಪಿ ಪಕ್ಷದ ಮೇಲೆ ಮೋದಿ ಅವರು ಚೂ ಬಿಟ್ಟಿದ್ದಾರೆ. ಆಮ್ ಆದ್ಮಿ ಪಕ್ಷ ಇದಕ್ಕೆ ಬಗ್ಗುವುದಿಲ್ಲ" ಎಂದು ದಿಲೀಪ್ ಪಾಂಡೆ ಟ್ವೀಟ್ ಮಾಡಿದ್ದಾರೆ.
"ಈ ಹಿಂದೆ ಅವರ ಪ್ರದರ್ಶನದಿಂದ ಕುಗ್ಗಿರುವ ಮೋದಿ ಅವರು ಈಗ ತಮ್ಮ ದಾಳಿಯಲ್ಲಿ ಸುಧಾರಿಸಿಕೊಳ್ಳುತ್ತಿದ್ದಾರೆ. ಪ್ರಜಾಪ್ರಭುತ್ವದ ನಿಯಮಗಳನ್ನು ಉಳಿಸಲು ಸುಮಾರು ಪ್ರತಿದಿನದ ಒಬ್ಬ ಶಾಸಕನನ್ನು ಗುರಿಯಾಗಿಸಿಕೊಂಡಿದ್ದಾರೆ" ಎಂದು ಅವರು ಮತ್ತೊಂದು ಟ್ವೀಟ್ ನಲ್ಲಿ ಕುಹಕವಾಡಿದ್ದಾರೆ.
ಈ ದಾಳಿಯ ಬಗ್ಗೆ ಟ್ವೀಟ್ ಮಾಡಿದ ಮತ್ತೊಬ್ಬ ಎಎಪಿ ಶಾಸಕ ಸಂಜಯ್ ಸಿಂಗ್, ಮೋದಿ ಸರ್ಕಾರ ದಿನನಿತ್ಯ ಎಎಪಿ ಶಾಸಕರನ್ನು ಗುರಿಯಾಗಿಸಿಕೊಂಡಿದೆ ಎಂದಿದ್ದಾರೆ.
"ಎಎಪಿ ಶಾಸಕ ತನ್ವರ್ ಅವರ ಸಂಖ್ಯೆ ಇಂದು (ಬುಧವಾರ) ಬೆಳಗ್ಗೆ ಬಂದಿದೆ. ಇಂದು ಸಂಜೆ ಯಾರು ಗುರಿಯಾಗುತ್ತಾರೋ ನೋಡೋಣ" ಎಂದು ಸಿಂಗ್ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
"ಎಎಪಿ ಮೇಲೆ ನಡೆಯುತ್ತಿರುವ ನಿರಂತರ ದಾಳಿಯನ್ನು ಅವರು ಸಮರ್ಥಿಸಿಕೊಳ್ಳಬಲ್ಲರೇ? ದೇಶದಲ್ಲಿರುವ ಅಪರಾಧಿಗಳೆಲ್ಲಾ ಎಎಪಿ ಪಕ್ಷದಲ್ಲಿದ್ದಾರೆಯೇ?" ಎಂದು ಸಿಂಗ್ ಪ್ರಶ್ನಿಸಿದ್ದಾರೆ.
ಈಗಾಗಲೇ ಮೋದಿ ಸರ್ಕಾರ ಮತ್ತು ಎಎಪಿ ಸರ್ಕಾರದ ನಡುವೆ ಇರುವ ಗಲಾಟೆಗೆ ತನ್ವರ್ ಮನೆಯ ಮೇಲೆ ನಡೆದ ದಾಳಿ ತುಪ್ಪ ಸುರಿದಂತಾಗಿದೆ.
ಫೆಬ್ರವರಿ 14 ರಂದು ಎಎಪಿ ಸರ್ಕಾರ ಅಧಿಕಾರಕ್ಕೆ ಬಂದಾಗಲಿಂದಲೂ ಇಲ್ಲಿಯವರೆಗೂ ಸುಮಾರು 12 ಕ್ಕೂ ಹೆಚ್ಚು ಎಎಪಿ ಶಾಸಕರನ್ನು ದೆಹಲಿ ಪೊಲೀಸರು ಕೆಲವೊಮ್ಮೆ ಪ್ರಶ್ನೆಗೆ ಗುರಿಪಡಿಸಿದ್ದರೆ ಇನ್ನು ಕೆಲವೊಮ್ಮೆ ಹಲವಾರು ಆರೋಪಗಳ ಮೇಲೆ ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


