ಲಿವ್ ಇನ್ ಪಾರ್ಟನರ್ ಗೆ 32 ಬಾರಿ ಇರಿದ ಪ್ರಿಯತಮ
ಲಿವ್ ಇನ್ ಪಾರ್ಟನರ್ ಗೆ ವ್ಯಕ್ತಿಯೊಬ್ಬ 32 ಬಾರಿ ಇರಿದು ಗಾಯಗೊಳಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ..

ನೋಯ್ಡಾ: ಲಿವ್ ಇನ್ ಪಾರ್ಟನರ್ ಗೆ ವ್ಯಕ್ತಿಯೊಬ್ಬ 32 ಬಾರಿ ಇರಿದು ಗಾಯಗೊಳಿಸಿರುವ ಘಟನೆ ನೋಯ್ಡಾದಲ್ಲಿ ನಡೆದಿದೆ. ತೀವ್ರವಾಗಿ ಗಾಯಗೊಂಡಿರುವ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಯ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಗಾಜಿಯಾಬಾದ್‌ನಲ್ಲಿ ಜಿಮ್ ಶಿಕ್ಷಕ ಆಗಿರುವ ವರುಣ್ ಎಂಬಾತ ಈ ಕೃತ್ಯ ನಡೆದಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ. ವರುಣ್ ನ ಲಿವ್ ಇನ್ ಸಂಗಾತಿ ಮಹಿಳೆಯು ವಿಚ್ಛೇದಿತೆಯಾಗಿದ್ದು , ಆತನಗಿಂತ 5 ವರ್ಷ ದೊಡ್ಡವಳಾಗಿದ್ದಾಳೆ.
ತನ್ನನ್ನು ಮದುವೆಯಾಗುವಂತೆ ಪ್ರತಿದಿನ ವರುಣ್ ಮೇಲೆ ಒತ್ತಡ ಹೇರುತ್ತಿದ್ದಳು. ಇದರಿಂದಾಗಿ ಅವರಿಬ್ಬರ ನಡುವೆ ಜಗಳವಾಗುತ್ತಿತ್ತು. ತೀವ್ರ ಕುಪಿತನಾಗಿದ್ದ ವರುಣ್ ಆಕೆಯನ್ನು ಅಡುಗೆ ಮನೆಯ ಚಾಕುವಿನಿಂದ 32 ಬಾರಿ ಇರಿದಿದ್ದಾನೆ. ಕಿರುಚಿಕೊಳ್ಳುತ್ತಿದ್ದ ಆಕೆಯ ಧ್ವನಿ ಕೇಳಿಸಿಕೊಂಡ ನೆರೆಹೊರೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಹಿಳೆಯನ್ನು ನೋಯ್ಡಾ ಆಸ್ಪತ್ರೆಗೆ ಒಯ್ದಿದ್ದಾರೆ. ಬಳಿಕ ಆಕೆಯ ಸ್ಥಿತಿ ಗಂಭೀರ ಇರುವುದನ್ನು ಗಮನಿಸಿ ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಸಾಗಿಸಿದ್ದಾರೆ.
ಗೋರಕ್ ಪುರ ಮೂಲದ ಮಹಿಳೆ ನೋಯ್ಡಾದ ಸೆಕ್ಟರ್ 73ರಲ್ಲಿನ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದಾಳೆ. ಆಕೆ ಈ ಮೊದಲು ತನ್ನ ಸಹೋದರನೊಂದಿಗೆ ಇಂದಿರಾಪುರದಲ್ಲಿ ಇದ್ದಳು. ಜಿಮ್‌ನಲ್ಲಿ ಆಕೆಗೆ ವರುಣ್‌ನ ಪರಿಚಯವಾಗಿ ಅದು ಸ್ನೇಹಕ್ಕೆ ತಿರುಗಿ ಲಿವ್ ಇನ್ ರಿಲೇಶನ್‌ಗೆ ಕಾರಣವಾಗಿ ಅವರಿಬ್ಬರೂ ನೋಯ್ಡಾ ದಲ್ಲಿನ ಸೆಕ್ಟರ್ 73ರಲ್ಲಿ ಬಾಡಿಗೆ ಮನೆಗೆ ವಾಸ್ತವ್ಯವನ್ನು ಬದಲಾಯಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


