ಮೂರು ದಿನಗಳ ನಂತರ ಅಮರನಾಥ ಯಾತ್ರೆ ಪುನರಾರಂಭ
ಮೂರು ದಿನಗಳ ಹಿಂದೆ ರದ್ದಾಗಿದ್ದ ಅಮರನಾಥ ಯಾತ್ರೆ ಸೋಮವಾರ ಮಧ್ಯಾಹ್ನದಿಂದ ಪುನರಾರಂಭವಾಗಿದ್ದು, ಭಕ್ತಾದಿಗಳು ಜಮ್ಮು ನಗರದಿಂದ ಕಾಶ್ಮೀರ ಕಣಿವೆಯತ್ತ ಹೊರಟಿದ್ದಾರೆ.

Published On :
ಜಮ್ಮು: ಮೂರು ದಿನಗಳ ಹಿಂದೆ ರದ್ದಾಗಿದ್ದ ಅಮರನಾಥ ಯಾತ್ರೆ ಸೋಮವಾರ ಮಧ್ಯಾಹ್ನದಿಂದ ಪುನರಾರಂಭವಾಗಿದ್ದು, ಭಕ್ತಾದಿಗಳು ಜಮ್ಮು ನಗರದಿಂದ ಕಾಶ್ಮೀರ ಕಣಿವೆಯತ್ತ ಹೊರಟಿದ್ದಾರೆ.
"ಜಮ್ಮು ನಗರದ ಭಗವತಿ ನಗರದಿಂದ ಸುಮಾರು ಮಧ್ಯಾಹ್ನ 4:20 ಕ್ಕೆ 40 ಬಸ್ ಗಳಲ್ಲಿ ಅಮರನಾಥ ಯಾತ್ರಾತ್ರಿಗಳು ಹೊರಟಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
"ಈ ಯಾತ್ರಿಗಳ ಪ್ರಯಾಣಕ್ಕೆ ಭದ್ರತಾ ಪಡೆಗಳು ರಕ್ಷಣೆ ಒದಗಿಸುತ್ತಿದ್ದಾರೆ" ಎಂದು ಅವರು ಹೇಳಿದ್ದಾರೆ.
ಕಾಶ್ಮೀರದಲ್ಲಿ ಭುಗಿಲೆದ್ದ ಹಿಂಸಾಚಾರದಿಂದ ಕಳೆದ ಮೂರು ದಿನಗಳಿಂದ ಕಾಶ್ಮೀರ ಯಾತ್ರೆ ರದ್ದುಗೊಂಡಿತ್ತು ಮತ್ತು ಈ ಸಂದರ್ಭದಲ್ಲಿ ಯಾವುದೇ ಭಕ್ತಾದಿ ಪ್ರಯಾಣ ಕೈಗೊಳ್ಳಲು ಅವಕಾಶ ನೀಡಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಯಾತ್ರೆ ಮುಗಿಸಿರುವ ಭಕ್ತಾದಿಗಳು 200 ಬಸ್ ಗಳಲ್ಲಿ ಜಮ್ಮು ನಗರಕ್ಕೆ ಹಿಂದಿರುಗಿದ್ದು, ಅವರುಗಳು ತಮ್ಮ ಪ್ರದೇಶಗಳಿಗೆ ಹಿಂದಿರುಗಲು ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


