ಪ್ರಧಾನ ಸುದ್ದಿ

ವಿವಾದಾತ್ಮಕ ಗುರು ಜಾಕಿರ್ ನಾಯಕ್ ವಿರುದ್ಧ ಸೂಕ್ತ ಕ್ರಮದ ಸುಳಿವು ನೀಡಿದ ವೆಂಕಯ್ಯ ನಾಯ್ಡು

ವಿವಾದಾತ್ಮಕ ಇಸ್ಮಾಮಿಕ್ ಬೋಧಕ ಜಾಕಿರ್ ನಾಯಕ್ ಅವರ ಭಾಷಣಗಳು ಆಕ್ಷೇಪಣಾರ್ಹ ಎಂದಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಎಂ ವೆಂಕಯ್ಯ ನಾಯ್ಡು, ಜಾಕಿರ್ ವಿರುದ್ಧ ಕ್ರಮ

ವಿವಾದಾತ್ಮಕ ಗುರು ಜಾಕಿರ್ ನಾಯಕ್ ವಿರುದ್ಧ ಸೂಕ್ತ ಕ್ರಮದ ಸುಳಿವು ನೀಡಿದ ವೆಂಕಯ್ಯ ನಾಯ್ಡು
ವಿವಾದಾತ್ಮಕ ಇಸ್ಮಾಮಿಕ್ ಬೋಧಕ ಜಾಕಿರ್ ನಾಯಕ್
Published On :
ನವದೆಹಲಿ: ವಿವಾದಾತ್ಮಕ ಇಸ್ಮಾಮಿಕ್ ಬೋಧಕ ಜಾಕಿರ್ ನಾಯಕ್ ಅವರ ಭಾಷಣಗಳು ಆಕ್ಷೇಪಣಾರ್ಹ ಎಂದಿರುವ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಎಂ ವೆಂಕಯ್ಯ ನಾಯ್ಡು, ಜಾಕಿರ್ ವಿರುದ್ಧ ಕ್ರಮ ತೆಗೆದುಕೊಳ್ಳುವ ಸಾಧ್ಯತೆಯ ಸುಳಿವನ್ನು ಗುರುವಾರ ನೀಡಿದ್ದಾರೆ. 
"ಗೃಹ ಇಲಾಖೆ ಎಲ್ಲವನ್ನು ಪರಿಶೀಲಿಸಲಿದೆ" ಎಂದಿರುವ ನಾಯ್ಡು, "ನಾಯಕ್ ಅವರ ಭಾಷಣಗಳು ಆಕ್ಷೇಪಣಾರ್ಹ" ಎಂದಿದ್ದಾರೆ. 
ಜುಲೈ 1 ರಂದು ನಡೆದ ಢಾಕಾ ಭಯೋತ್ಪಾದಕ ದಾಳಿಯ ದಾಳಿಕೋರರು ವಿವಾದಾತ್ಮಕ ಇಸ್ಲಾಮಿಕ್ ಗುರು ಜಾಕಿರ್ ನಾಯಕ್ ಅವರನ್ನು ಅನುಸರಿಸುತ್ತಿದ್ದರು ಎಂಬ ಸುದ್ದಿಯ ಹಿನ್ನಲೆಯಲ್ಲಿ ಅವರು ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಯಾಗಿದ್ದರು. 
ಪೀಸ್ ಟಿವಿ ಯ ಬೋಧಕ ಜಾಕಿರ್ ನಾಯಕ್ "ಎಲ್ಲ ಮುಸ್ಲಿಮರು ಭಯೋತ್ಪಾದಕರಾಗಬೇಕು" ಎಂದು ಕರೆ ನೀಡಿದ್ದರು ಎಂದು ತಿಳಿಸಿ ಢಾಕಾದ ದಾಳಿಕೋರರಲ್ಲಿ ಒಬ್ಬನಾದ ಯುವ ಭಯೋತ್ಪಾದಕ ರೋಹನ್ ಇಮ್ತಿಯಾಜ್ ಫೇಸ್ಬುಕ್ ನಲ್ಲಿ ಸಂದೇಶ ಹಂಚಿಕೊಂಡಿದ್ದ. 
ನೆನ್ನೆಯಷ್ಟೇ, ಇದು ಕಾನೂನಿನ ಪ್ರಶ್ನೆ ಮತ್ತು ಇದಕ್ಕೆ ಸಂಬಂಧಿಸಿದ ಏಜೆನ್ಸಿಗಳು ಸೂಕ್ತ ಕ್ರಮ ತೆಗೆದುಕೊಳ್ಳಲಿವೆ ಎಂದು ಗೃಹ ಖಾತೆಯ ರಾಜ್ಯ ಸಚಿವೆ ಕಿರಣ್ ರಿಜಿಜು ವರದಿಗಾರರಿಗೆ ತಿಳಿಸಿದ್ದರು.
ಇತರ ಧರ್ಮಗಳ ವಿರುದ್ಧ ದ್ವೇಷದ ಬೋಧನೆ ನೀಡುವ ಆರೋಪದ ಮೇಲೆ ಮುಂಬೈ ಮೂಲದ ಇಸ್ಲಾಮಿಕ್ ಸಂಶೋಧನಾ ಪ್ರತಿಷ್ಠಾನದ ಸಂಸ್ಥಾಪಕ ಜಾಕಿರ್ ನಾಯಕ್ ಅವರನ್ನು ಬ್ರಿಟನ್ ಮತ್ತು ಕೆನಡಾ ದೇಶಗಳು ನಿಷೇಧಿಸಿವೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.