ನಾನು ಉತ್ತರಪ್ರದೇಶದ ಸೊಸೆ; ಯಾವುದೇ ಜವಾಬ್ದಾರಿಗೆ ಸಿದ್ಧ: ಶೀಲಾ ದೀಕ್ಷಿತ್
ತಾವು ಉತ್ತರಪ್ರದೇಶದ ಸೊಸೆ ಎಂದು ಮಂಗಳವಾರ ಘೋಷಿಸರುವ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಾಂಗ್ರೆಸ್ ಹೈ ಕಮಾಂಡ್ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ನೀಡುವ

Published On :
ನವದೆಹಲಿ: ತಾವು ಉತ್ತರಪ್ರದೇಶದ ಸೊಸೆ ಎಂದು ಮಂಗಳವಾರ ಘೋಷಿಸರುವ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಕಾಂಗ್ರೆಸ್ ಹೈ ಕಮಾಂಡ್ ರಾಜ್ಯ ವಿಧಾನಸಭಾ ಚುನಾವಣೆಗಳಲ್ಲಿ ನೀಡುವ ಯಾವುದೇ ಜವಾಬ್ದಾರಿಯನ್ನು ನಿರ್ವಹಿಸಲು ಸಿದ್ಧ ಎಂದಿದ್ದಾರೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಶೀಲಾ ದೀಕ್ಷಿತ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ಗಾಂಧಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂಬ ಊಹಾಪೋಹಗಳು ಗಟ್ಟಿಯಾಗಿವೆ. ಹಾಗೆಯೇ ಪ್ರಿಯಾಂಕಾ ಈ ಚುನಾವಣೆಗಳಲ್ಲಿ ಪಕ್ಷದ ಪ್ರಮುಖ ಪ್ರಚಾರಕಿಯ ನೇತೃತ್ವ ವಹಿಸಲಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ.
ಉತ್ತರ ಪ್ರದೇಶದ ಚುನಾವಣಾ ಪ್ರಚಾರದ ನೇತೃತ್ವಕ್ಕೆ ಪ್ರಿಯಾಂಕಾ ಒಳ್ಳೆಯ ಅಭ್ಯರ್ಥಿಯಾಗಲಿದ್ದಾರೆ ಎಂದಿದ್ದಾರೆ ದೀಕ್ಷಿತ್. "ಮುಂದೇನಾಗುವುದು ಎಂದು ಹೇಳಲು ಈಗ ಸಾಧ್ಯ ಇಲ್ಲ. ನಮಗೆ ಯಾವ ಜವಾಬ್ದಾರಿ ವಹಿಸಲಾಗುತ್ತದೆ ನೋಡೋಣ ಮತ್ತು ಹೇಗೆ ಕೆಲಸಗಳನ್ನು ಹಂಚಿಕೊಳ್ಳಲಿದ್ದೇವೆ ಎಂಬುದನ್ನು ಕೂಡ" ಎಂದು ಮೂರು ಬಾರಿ ದೆಹಲಿ ಮುಖ್ಯಮಂತ್ರಿಯಾಗಿದ್ದ ಶೀಲಾ ದೀಕ್ಷಿತ್ ಹೇಳಿದ್ದಾರೆ.
"ಅವರು (ಪ್ರಿಯಾಂಕಾ) ಪ್ರಚಾರಕ್ಕೆ ಬಂದರೆ ಅವರಿಗೆ ಸುಸ್ವಾಗತ. ಅವರಿಗೆ ಉತ್ತರ ಪ್ರದೇಶ ಚೆನ್ನಾಗಿ ಗೊತ್ತು. ಮಾಧ್ಯಮಗಳು ಮತ್ತು ಟಿವಿ ವಾಹಿನಿಗಳು ಕಳೆದ ಎರಡು ದಿನಗಳಿಂದ ಪ್ರಿಯಾಂಕಾ ಬಗ್ಗೆ ಕಾರ್ಯಕ್ರಮಗಳನ್ನು ನಡೆಸುತ್ತಿವೆ. ಅವರು ಸರಿಯಾದ ಅಭ್ಯರ್ಥಿ ಎಂದು ನನಗನ್ನಿಸುತ್ತಿದೆ. ಅವರು ಪಕ್ಷಕ್ಕೆ ದೊಡ್ಡ ಆಸ್ತಿ" ಎಂದು ಕೂಡ ಅವರು ಹೇಳಿದ್ದಾರೆ.
ಉತ್ತರ ಪ್ರದೇಶದಲ್ಲಿ ದೊಡ್ಡ ಪಾತ್ರವನ್ನು ನೀವು ಒಪ್ಪಿಕೊಳ್ಳುತೀರಾ ಎಂಬ ಪ್ರಶ್ನೆಗೆ "ಸಿದ್ಧಳಾಗಿರುವುದು ಅಥವಾ ಸಿದ್ಧಳಾಗಿರದ ಪ್ರಶ್ನೆ ಬರುವುದೇ ಇಲ್ಲ. ಪಕ್ಷ ನಾನು ಏನನ್ನಾದರೂ ಮಾಡಬೇಕು ಎಂದು ಬಯಸಿದರೆ ನಾನು ಮಾಡುತ್ತೇನೆ. ಸದ್ಯಕ್ಕೆ ಇರುವ ಸಮಯ ಕಡಿಮೆ ಎಂದು ನಾನು ಹೇಳಿದ್ದೇನೆ, ಅದಕ್ಕಿಂತಲೂ ಹೆಚ್ಚು ಸಾಧ್ಯವಿಲ್ಲ. ಪಕ್ಷ ಹೇಳುವ ಕೆಲಸ ಮಾಡಲಿದ್ದೇನೆ" ಎಂದು ಶೀಲಾ ದೀಕ್ಷಿತ್ ತಿಳಿಸಿದ್ದಾರೆ.
ಬ್ರಾಹ್ಮಣ ಸಮುದಾಯದ ಮುಖವನ್ನು ಮುಂದೆ ಮಾಡುವುದು ರಾಜ್ಯದಲ್ಲಿ ಪಕ್ಷಕ್ಕೆ ಸಹಕರಿಸಲಿದೆಯೇ ಎಂಬ ಪ್ರಶ್ನೆಗೆ "ನಾನು ಉತ್ತರ ಪ್ರದೇಶದ ಸೊಸೆ. ನಾನು ಉತ್ತರ ಪ್ರದೇಶದವರನ್ನು ಮದುವೆಯಾಗಿದ್ದೇನೆ. ನಾನು ಪಂಜಾಬ್ ನಲ್ಲಿ ಹುಟ್ಟಿ ದೆಹಲಿಯಲ್ಲಿ ಅತಿ ಹೆಚ್ಚು ಸಮಯ ಕಳೆದಿದ್ದೇನೆ. ಇಲ್ಲಿ ವಿದ್ಯಾಭ್ಯಾಸ ಮಾಡಿದ್ದೇನೆ" ಎಂದಿದ್ದಾರೆ.
ನೆಹರು ಕುಟುಂಬಕ್ಕೆ ಬಹಳ ನಿಕಟ ಎನ್ನಲಾದ ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಉತ್ತರ ಪ್ರದೇಶದ ಉಮಾಶಂಕರ್ ದೀಕ್ಷಿತ್ ಅವರನ್ನು ಶೀಲಾ ಮದುವೆಯಾಗಿದ್ದಾರೆ.
"ನಾನು ನನ್ನ ಅತ್ತೆ-ಮಾವನ ಮನೆಗೆ ಹೋಗುತ್ತಿದ್ದೇನೆ. ಈಗ ಹೋದರೆ ಅಧಿಕೃತವಾಗಿ ಅಲ್ಲಿಗೆ ಹೋಗಲಿದ್ದೇನೆ" ಎಂದು ಕೂಡ ಶೀಲಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Assembly electionsವಿಧಾನಸಭಾ ಚುನಾವಣೆUttar pradeshಉತ್ತರಪ್ರದೇಶPriyanka Gandhiಪ್ರಿಯಾಂಕಾ ಗಾಂಧಿಶೀಲಾ ದೀಕ್ಷಿತ್Sheila Dikshi
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


