ಪ್ರಧಾನ ಸುದ್ದಿ

ಕರ್ನಾಟಕದ 1.24 ಕೋಟಿ ಜನರಿಗೆ ಇನ್ನೂ ಆಧಾರ್ ಕಾರ್ಡ್ ಇಲ್ಲ

ಆಧಾರ್ ಕಾರ್ಡ್ ಯೋಜನೆ ಶುರುವಾಗಿ ಆರು ವರ್ಷಗಳು ಕಳೆದಿದ್ದರು ಇಲ್ಲಿಯವರೆಗೂ ಕರ್ನಾಟಕದ ಸುಮಾರು 1.24 ಕೋಟಿ ನಿವಾಸಿಗಳಿಗೆ ಆಧಾರ್ ಕಾರ್ಡ್ ಇಲ್ಲ.

ಕರ್ನಾಟಕದ 1.24 ಕೋಟಿ ಜನರಿಗೆ ಇನ್ನೂ ಆಧಾರ್ ಕಾರ್ಡ್ ಇಲ್ಲ
ಆಧಾರ ಕಾರ್ಡ್
Published On :

ಬೆಂಗಳೂರು: ಆಧಾರ್ ಕಾರ್ಡ್ ಯೋಜನೆ ಶುರುವಾಗಿ ಆರು ವರ್ಷಗಳು ಕಳೆದಿದ್ದರು  ಇಲ್ಲಿಯವರೆಗೂ ಕರ್ನಾಟಕದ ಸುಮಾರು 1.24 ಕೋಟಿ ನಿವಾಸಿಗಳಿಗೆ ಆಧಾರ್ ಕಾರ್ಡ್ ಇಲ್ಲ.

ಗ್ರಾಮೀಣ ಪ್ರದೇಶಗಳಲ್ಲಿ ಆಧಾರ ಕಾರ್ಡ್ ಮಾಡಿಕೊಳ್ಳಲು ಸೂಕ್ತ ಪ್ರೋತ್ಸಾಹ ನೀಡಲಾಗುತ್ತಿದೆ. ಆದರೆ ನಗರ ಪ್ರದೇಶದ ನಿವಾಸಿಗಳು ಆಧಾರ ಕಾರ್ಡ್ ನೋಂದಣಿ ಸಂಖ್ಯೆ ಕಡಿಮೆಯಿದೆ.

30 ಜಿಲ್ಲೆಗಳ ಪೈಕಿ ಕಲಬುರ್ಗಿಯಲ್ಲಿ ಆಧಾರ ಕಾರ್ಡ್ ನೋಂದಣಿ ಸಂಖ್ಯೆ ಕಡಿಮೆ ಇದ್ದು, ಬೆಂಗಳೂರು ನಗರ ಮತ್ತು ರಾಯಚೂರು ನಗರಗಳಲ್ಲಿ ನಿವಾಸಿಗಳು ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಂಡಿಲ್ಲ.

ಭಾರತೀಯ ವಿಶಿಷ್ಟ ಗುರುತು ನೀಡಿಕೆ ಪ್ರಾಧಿಕಾರವು (ಯುಐಡಿಎಐ) ಸಹಾಯಕ ನಿರ್ದೇಶಕಿ ಅಂಜಲಿ ಇಲಿಸ್ ಶಂಕರ್ ಅವರ ಪ್ರಕಾರ ಗ್ರಾಮೀಣ ಭಾಗದ ಜನರು ಆಧಾರ್ ಕಾರ್ಡ್ ನೋಂದಣಿ ಮಾಡಿಕೊಳ್ಳಲು ಉತ್ಸುಕರಾಗಿದ್ದಾರೆ. ಆದರೆ ಬೆಂಗಳೂರು ನಗರದಲ್ಲಿ ಸುಮಾರು 26 ಲಕ್ಷ ಜನರು ಇಂದಿಗೂ ಆಧಾರ್ ಕಾರ್ಡ್ ನೋಂದಣಿ ಮಾಡಿಸಿಕೊಂಡಿಲ್ಲ. ಆಧಾರ್ ಕಾರ್ಡ್ ಮೂಲಕವೇ ಸಬ್ಸಿಡಿ ಹಾಗೂ ಇನ್ನಿತರ ಪ್ರಯೋಜನೆಗಳು ಸಿಗುವುದರಿಂದ ಆಧಾರ್ ಕಾರ್ಡ್ ಮಾಡಿಸಿಕೊಳ್ಳುವ ಅಗತ್ಯವಿದೆ ಎಂದರು.

ರಾಜ್ಯ ಸರಾಸರಿ ಶೇಕಡ 80.93ರಷ್ಟಿದ್ದು, ಕಲಬುರ್ಗಿ ಆಧಾರ್ ಕಾರ್ಡ್ ಉತ್ಪಾದನೆಯಲ್ಲಿ ಶೇ. 74.11 ರಷ್ಟಿದೆ. ಬೆಂಗಳೂರು ನಗರ, ರಾಯಚೂರು ಮತ್ತು ಕೊಪ್ಪಳ ನಂತರದ ಸ್ಥಾನಗಳಲ್ಲಿವೆ.

ಆಧಾರ್ ಕಾರ್ಡ್ ಉತ್ಪಾದನೆಯಲ್ಲಿ ತುಮಕೂರು ಶೇ. 92.72 ಸರಾಸರಿಯಲ್ಲಿ ಎಲ್ಲಾ ಜಿಲ್ಲೆಗಳಿಗೂ ಮುಂದಿದೆ. ನಂತರದ ಸ್ಥಾನದಲ್ಲಿ ಶೇ. 91.9 ರ ಸರಾಸರಿಯಲ್ಲಿ ಮೈಸೂರಿದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.