೧೦೬ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿದ ಲಂಕಾ
ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಮೀನು ಹಿಡಿಯುತ್ತಿದ್ದಕ್ಕೆ ಬಂಧನಗೊಂಡಿದ್ದ ೧೦೬ ಭಾರತೀಯ ಮೀನುಗಾರರರನ್ನು ಬಿಡುಗಡೆ ಮಾಡಲು ಶ್ರೀಲಂಕಾ ಸರ್ಕಾರ ಸೋಮವಾರ

ಕೊಲಂಬೋ: ಶ್ರೀಲಂಕಾದ ಸಮುದ್ರ ಗಡಿಯಲ್ಲಿ ಮೀನು ಹಿಡಿಯುತ್ತಿದ್ದಕ್ಕೆ ಬಂಧನಗೊಂಡಿದ್ದ ೧೦೬ ಭಾರತೀಯ ಮೀನುಗಾರರರನ್ನು ಬಿಡುಗಡೆ ಮಾಡಲು ಶ್ರೀಲಂಕಾ ಸರ್ಕಾರ ಸೋಮವಾರ ಆದೇಶಿಸಿದೆ. ಭಾನುವಾರ ಶ್ರೀಲಂಕಾ ನೌಕಾಪಡೆ ಸೆರೆ ಹಿಡಿದಿದ್ದ ಮೂವರು ಮೀನುಗಾರರು ಕೂಡ ಜೊತೆಗೆ ಬಿಡುಗಡೆಯಾಗಲಿದ್ದಾರೆ.
೫೫ ಮೀನುಗಾರರನ್ನು ಬಿಡುಗಡೆ ಮಾಡಲು ಜಾಫ್ನಾ ಮತ್ತು ಮನ್ನಾರ್ ಮೆಜೆಸ್ಟ್ರೆಟ್ ಕೋರ್ಟ್ ಗಳು ಈಗಾಗಲೇ ಆದೇಶಿಸಿವೆ ಆದರೆ ಇನ್ನುಳಿದ ೫೧ ಮೀನುಗಾರರ ಬಿಡುಗಡೆ ಆದೇಶ ಪ್ರಕ್ರಿಯ ಸೋಮವಾರ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.
ಜಾಫ್ನಾದ ಭಾರತೀಯ ರಾಯಭಾರ ಕಚೇರಿಯ ಪ್ರಕಾರ ಈ ಮೀನುಗಾರರಾನ್ನು ಭಾರತಕ್ಕೆ ಕಳುಹಿಸಲು ಒಂದು ವಾರ ಹಿಡಿಯಲಿದೆ ಎನ್ನಲಾಗಿದೆ.
ಹಲವಾರು ಸಮಯಗಳಲ್ಲಿ ಸೆರೆಹಿಡಿಯಲಾಗಿರುವ ಮೀನುಗಾರರ ಬಿಡುಗಡೆ ಸಾಧ್ಯವಾಗಿದ್ದರೂ ಅವರ ಹಡಗುಗಳನ್ನು ಹಿಂದಿರುಗಿಸಲಾಗಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


