ಬೇರೆ ಯಾರೂ ಇಲ್ಲವೇ?: ದೇವೇಗೌಡ
ಲೋಕಾಯುಕ್ತ ಹುದ್ದೆಗೆ ನ್ಯಾ. ವಿಕ್ರಂಜಿತ್ ಸೆನ್ ಮತ್ತು ನ್ಯಾ. ಎಸ್.ಆರ್. ನಾಯಕ್ ಇಬ್ಬರ ಹೆಸರನ್ನೇ ಪ್ರತಿ ದಿನ ಸರ್ಕಾರ ಎಳೆದಾಡುತ್ತಿದೆ. ದೇಶದಲ್ಲಿ ಅವರಿಬ್ಬರನ್ನು ಹೊರತುಪಡಿಸಿ ಮತ್ಯಾರು ಗೌರವಾನ್ವಿತ..

ಬೆಂಗಳೂರು: ಲೋಕಾಯುಕ್ತ ಹುದ್ದೆಗೆ ನ್ಯಾ. ವಿಕ್ರಂಜಿತ್ ಸೆನ್ ಮತ್ತು ನ್ಯಾ. ಎಸ್.ಆರ್. ನಾಯಕ್ ಇಬ್ಬರ ಹೆಸರನ್ನೇ ಪ್ರತಿ ದಿನ ಸರ್ಕಾರ ಎಳೆದಾಡುತ್ತಿದೆ. ದೇಶದಲ್ಲಿ ಅವರಿಬ್ಬರನ್ನು ಹೊರತುಪಡಿಸಿ ಮತ್ಯಾರು ಗೌರವಾನ್ವಿತ ನ್ಯಾಯಮೂರ್ತಿಗಳು ಸಿಗುವುದಿಲ್ಲವೇ ಎಂದು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಹೇಳಿದ್ದಾರೆ.
"ಸಣ್ಣ ಪುಟ್ಟ ವಿಷಯವನ್ನೇ ದೊಡ್ಡದಾಗಿ ಮಾಡಿ ಅವರು ಲೋಕಾಯುಕ್ತರಾಗಲು ಅರ್ಹತೆ ಇಲ್ಲ ಎನ್ನುವ ರಾಜಕಾರಣಿಗಳ ಬಂಡವಾಳ ಮೊದಲು ತಿಳಿಸಲಿ. ಯಾರು ರಿಯಲ್ ಎಸ್ಟೇಟ್‍ನಲ್ಲಿ ತೊಡಗಿಸಿಕೊಂಡಿದ್ದಾರೆ, ಮಿತಿಮೀರಿ ಆಸ್ತಿ ಮಾಡಿದ್ದಾರೆ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ದೇವೇಗೌಡರು ತಮ್ಮ ಮಾತಿನ ಛಾಟಿ ಬೀಸಿದರು. ನ್ಯಾಯಾಂಗ ವ್ಯವಸ್ಥೆಯಲ್ಲಿ ತುಂಬಾ ಜನ ಗೌರವಾನ್ವಿತ ನ್ಯಾಯಮೂರ್ತಿಗಳು ಸಿಗುತ್ತಾರೆ. ಯಾರನ್ನು ಆಯ್ಕೆ ಮಾಡಿದರೂ ಸರಿಯೇ. ಆದರೆ ಸರ್ಕಾರ ಮತ್ತು ಬಿಜೆಪಿ ಕೇವಲ ವ್ಯಕ್ತಿಯೊಬ್ಬರಿಗೇ ಅಂಟಿಕೊಂಟಿರುವುದು ಸಲ್ಲದು ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


