ಪ್ರಧಾನ ಸುದ್ದಿ

ಬೆಂಗಳೂರು ಬಾಂಬ್ ಸ್ಫೋಟ ಸುಳಿವು ಇನ್ನೂ ಇಲ್ಲ; ಶಂಕಿತನನ್ನು ಗುರುತಿಸಿದವರಿಗೆ 5 ಲಕ್ಷ ಇನಾಮು

ಡಿಸೆಂಬರ್ ೨೮, ೨೦೧೪ ರಲ್ಲಿ ನಡೆದ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ಸುಳಿವು ಪತ್ತೆ ಹಚ್ಚುವಲ್ಲಿ ಪೊಲೀಸರು ಇನ್ನೂ ಯಶಸ್ವಿಯಾಗಿಲ್ಲ.

ಬೆಂಗಳೂರು ಬಾಂಬ್ ಸ್ಫೋಟ ಸುಳಿವು ಇನ್ನೂ ಇಲ್ಲ; ಶಂಕಿತನನ್ನು ಗುರುತಿಸಿದವರಿಗೆ 5 ಲಕ್ಷ ಇನಾಮು
ಬೆಂಗಳೂರು ಬಾಂಬ್ ಸ್ಫೋಟದ ಶಂಕಿತ ವ್ಯಕ್ತಿ
Published On :

ಬೆಂಗಳೂರು: ಡಿಸೆಂಬರ್ ೨೮, ೨೦೧೪ ರಲ್ಲಿ ನಡೆದ ಬೆಂಗಳೂರಿನ ಚರ್ಚ್ ಸ್ಟ್ರೀಟ್ ಬಾಂಬ್ ಸ್ಫೋಟದ ಸುಳಿವು ಪತ್ತೆ ಹಚ್ಚುವಲ್ಲಿ ಪೊಲೀಸರು ಇನ್ನೂ ಯಶಸ್ವಿಯಾಗಿಲ್ಲ. ಈ ಲಘು ಬಾಂಬ್ ಸ್ಫೋಟದಿಂದ ಒಬ್ಬ ಮೃತಪಟ್ಟು ಮೂರು ಜನರಿಗೆ ಗಾಯವಾಗಿತ್ತು. ಬೆಂಗಳೂರಿನ ಪೊಲೀಸರು ಮೊದಲಿಗೆ ತನಿಖೆ ನಡೆಸಿದರಾದರೂ ಇದನ್ನು ಬಗೆ ಹರಿಸುವುದಕ್ಕೆ ವಿಫಲರಾಗಿ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್ ಐ ಎ) ಈ ಪ್ರಕರಣ ವಹಿಸಿಕೊಟ್ಟಿತ್ತು.

ಈಗ ಎನ್ ಐ ಎ, ಸ್ಫೋತಗೊಂಡ ದಿನ ರಾತ್ರಿ ೭ ಘಂಟೆಗೆ ತೆಗೆಯಗಾಗಿರುವ ಸಿಸಿಟಿವಿ ದೃಶ್ಯಾವಳಿಯನ್ನು ಬಿಡುಗಡೆ ಮಾಡಿದ್ದು, ಬಾಂಬ್ ಇಟ್ಟಿದ್ದಾನೆ ಎಂದು ಶಂಕಿಸಲಾಗಿರುವ ವ್ಯಕ್ತಿಯ ಗುರುತು ನೀಡಿದರೆ ಐದು ಲಕ್ಷ ಬಹುಮಾನ ನೀಡುವುದಾಗಿ ತಿಳಿಸಿದೆ.

ಬೇಸ್ ಬಾಲ್ ಟೋಪಿ ಹಾಕಿಕೊಂಡು ಪ್ಲಾಸ್ಟಿಕ್ ಚೀಲ ಹಿಡಿದ ಈ ವ್ಯಕ್ತ್ಯಿ ಬಾಂಬ್ ಇಟ್ಟಿದ್ದಾನೆ ಎಂದು ಶಂಕಿಸಲಾಗಿದೆ. ಈ ವ್ಯಕ್ತಿ ಈ ಸ್ಥಳಕ್ಕೆ ಇದಕ್ಕೂ ಮೊದಲು ಮೂರೂ ಬಾರಿಗೆ ಬಂದಿದ್ದ ಎನ್ನಲಾಗಿದೆ.

ಇದಕ್ಕೂ ಮೊದಲು ತನಿಖಾಧಿಕಾರಿಗಳು ನಿಷೇಧಿತ ಸಂಘಟನೆ ಸಿಮಿ ಈ ಕೃತ್ಯ ನಡೆಸಿರಬಹುದು ಎಂದು ಶಂಕಿಸಿದ್ದರು. ಆದರೆ ಯಾವುದೇ ಖಚಿತ ಸಾಕ್ಷ್ಯಗಳು ಸಿಗದೆ ಈ ಸ್ಫೋಟದ ಹಿಂದಿನ ಕಾರಣ ಏನಿರಬಹುದು ಎಂದು ತನಿಖೆ ನಡೆಸಲು ಸಾಧ್ಯವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.