ಮೇಲ್ಮನೆಯಲ್ಲಿ ಹೊಸಬರ ಅವಧಿ ಇಂದಿನಿಂದ ಆರಂಭ
ಶಾಶ್ವತ ಶಾಸನಸಭೆ ಎಂದೇ ಕರೆಯುವ ವಿಧಾನ ಪರಿಷತ್ತಿನಿಂದ ಪ್ರತಿ ಆರು ವರ್ಷಕ್ಕೊಮ್ಮೆ ಮೂರನೇ ಒಂದರಷ್ಟು ನಿವೃತ್ತರಾಗಬೇಕೆಂಬ ವಾಡಿಕೆಯಂತೆ 25 ಶಾಸಕರ ಸದಸ್ಯತ್ವವು ಮಂಗಳವಾರ ಮುಕ್ತಾಯವಾಗಿದ್ದು, ಅದೇ ಸ್ಥಾನಗಳಿಗೆ...

ಬೆಂಗಳೂರು: ಶಾಶ್ವತ ಶಾಸನಸಭೆ ಎಂದೇ ಕರೆಯುವ ವಿಧಾನ ಪರಿಷತ್ತಿನಿಂದ ಪ್ರತಿ ಆರು ವರ್ಷಕ್ಕೊಮ್ಮೆ ಮೂರನೇ ಒಂದರಷ್ಟು ನಿವೃತ್ತರಾಗಬೇಕೆಂಬ ವಾಡಿಕೆಯಂತೆ 25 ಶಾಸಕರ ಸದಸ್ಯತ್ವವು ಮಂಗಳವಾರ ಮುಕ್ತಾಯವಾಗಿದ್ದು, ಅದೇ ಸ್ಥಾನಗಳಿಗೆ ಸ್ಥಳೀಯ ಸಂಸ್ಥೆಗಳಿಂದ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಆಯ್ಕೆಯಾದ ನೂತನ 25 ಸದಸ್ಯರ ಅವಧಿಯು ಇಂದಿನಿಂದ ಅಧಿಕೃತವಾಗಿ ಆರಂಭವಾಗಲಿದೆ.
ಈ 25 ಮಂದಿಯ ಪೈಕಿ ಕಾಂಗ್ರೆಸ್‍ನ 13, ಬಿಜೆಪಿಯ 6, ಜೆಡಿಎಸ್‍ನ 4 ಹಾಗೂ ಪಕ್ಷೇತರರಾಗಿ ಆಯ್ಕೆಯಾಗಿರುವ ಇಬ್ಬರು ಶಾಸಕರಿಗೆ ಜನವರಿ 6 (ಬುಧವಾರ) ಬೆಳಗ್ಗೆ 9 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಪ್ರಮಾಣ ವಚನ ಬೋಧಿಸುವರು. ಹಾಲಿ ಶಾಸಕರಾಗಿದ್ದ 25 ಮಂದಿಯಲ್ಲಿ 9 ಮಂದಿ ಪುನರಾಯ್ಕೆಯಾಗಿದ್ದು ಎಂದಿನಂತೆ ಸದಸ್ಯತ್ವ ಮುಂದುವರೆಯಲಿದೆ.
ಪ್ರಮಾಣ ವಚನಕ್ಕೆ ಸಿದ್ಧ: ಚುನಾವಣೆಯಲ್ಲಿ ಗೆದ್ದು ಬಂದವರಿಗೆ ಚುನಾವಣೆ ಆಯೋಗ ಪ್ರಮಾಣ ಪತ್ರವನ್ನಷ್ಟೇ ನೀಡಿರುತ್ತದೆ. ಅವರೆಲ್ಲರಿಗೂ ಸಭಾಪತಿ ಪ್ರಮಾಣ ವಚನ ಬೋಧಿಸಿದ ಬಳಿಕವಷ್ಟೇ ಸದಸ್ಯತ್ವ ಸಿಂಧುವಾಗಲಿದೆ. ಬುಧವಾರದಂದು ನೂತನ ಶಾಸಕರಾದ ವಿಜಯ್ ಸಿಂಗ್, ಬಿ.ಜಿ. ಪಾಟೀಲ್, ಬಸವನ-ಗೌಡ ಪಾಟೀಲ ಯತ್ನಾಳ್, ಎಸ್.ಆರ್. ಪಾಟೀಲ, ವಿವೇಕರಾವ್ ವಸಂತರಾವ್ ಪಾಟೀಲ, ಕವಟಗಿಮಠ ಮಹಂತೇಶ ಮಲ್ಲಿಕಾರ್ಜುನ, ಘೋಟ್ನೇಕರ್ ಶ್ರೀಕಾಂತ್ ಲಕ್ಷ್ಣಣ್, ಮಾನೆ ಶ್ರೀನಿವಾಸ, ಪ್ರದೀಶ್ ಶೆಟ್ಟರ್, ಬಸವರಾಜ ಪಾಟೀಲ ಇಟಗಿ, ಕೆ.ಸಿ.ಕೊಂಡಯ್ಯ, ಜಿ.ರಘು ಆಚಾರ್, ಆರ್, ಪ್ರಸನ್ನಕುಮಾರ್, ಕೋಟಾ ಶ್ರೀನಿವಾಸ ಪೂಜಾರಿ, ಕೆ. ಪ್ರತಾಪ-ಚಂದ್ರ ಶೆಟ್ಟಿ, ಎಂ.ಕೆ. ಪ್ರಾಣೇಶ್, ಎಂ.ಎ. ಗೋಪಾಲಸ್ವಾಮಿ, ಕಾಂತರಾಜ್, ಎನ್. ಅಪ್ಪಾಜಿ-ಗೌಡ, ಎಂ. ನಾರಾಯಣಸ್ವಾಮಿ, ಎಸ್.ರವಿ, ಸಿ.ಆರ್ ಮನೋಹರ್, ಎಂ.ಪಿ.ಸುನೀಲ್ ಸುಬ್ರಮಣಿ, ಆರ್. ಧರ್ಮಸೇನಾ, ಸಂದೇಶ್ ನಾಗರಾಜ್ ಪ್ರಮಾಣ ವಚನ ಸ್ವೀಕರಿಸುವರು.
ಇವರಲ್ಲಿ ಕವಟಗಿಮಠ ಮಹಂತೇಶ ಮಲ್ಲಿ-ಕಾರ್ಜುನ, ಘೋಟ್ನೇಕರ್ ಶ್ರೀಕಾಂತ್ ಲಕ್ಷ ್ಮಣ್, ಮಾನೆ ಶ್ರೀನಿವಾಸ, ಜಿ. ರಘು ಆಚಾರ್, ಕೋಟಾ ಶ್ರೀನಿವಾಸ ಪೂಜಾರಿ, ಕೆ.ಪ್ರತಾಪ ಚಂದ್ರ ಶೆಟ್ಟಿ, ಆರ್.ಧರ್ಮೇಸನಾ, ಸಂದೇಶ್ ನಾಗರಾಜ್ ಪುನರಾಯ್ಕೆಯಾಗಿ ಬಂದಿದ್ದಾರೆ. ಮಿಕ್ಕವರೆಲ್ಲ ಹೊಸ ಮುಖಗಳಾಗಿದ್ದಾರೆ. ಎಸ್. ರವಿ ಮಾತ್ರ ಎರಡನೇ ಬಾರಿಗೆ ಸದನ ಪ್ರವೇಶಿಸುತ್ತಿದ್ದಾರೆ. 16 ಮಂದಿ ನಿವೃತ್ತಿ: ಈ ಹಿಂದೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಬಂದು ನಿವೃತ್ತರಾದವರಲ್ಲಿ ಬಸವರಾಜ ಹಾವ್ಗೆಪ್ಪ ಪಾಟೀಲ, ಅಲ್ಲಮಪ್ರಭ ಪಾಟೀಲ, ಜಿ.ಎಸ್. ನ್ಯಾಮೇಗೌಡ, ವೀರಕುಮಾರ್ ಅಪ್ಪಸೋ ಪಾಟೀಲ, ಛಬ್ಬಿ ನಾಗರಾಜ್, ಆಚಾರ್ ಹಾಲಪ್ಪ ಬಸಪ್ಪ, ಮೃತ್ಯುಂಜಯ ಜಿನಗಾ, ಆರ್.ಕೆ. ಸಿದ್ರಾಮಣ್ಣ, ಎ.ವಿ. ಗಾಯತ್ರಿ ಶಾಂತೇಗೌಡ, ಪಟೇಲ್ ಶಿವರಾಂ, ಬಿ. ರಾಮಕೃಷ್ಣ, ಬಿ.ಟಿ. ದಯಾನಂದ, ಇ. ಕೃಷ್ಣಪ್ಪ, ನಾಸೀರ್ ಅಹಮ್ಮದ್, ಟಿ. ಜಾನ್ ಅವರ ಸದಸ್ಯತ್ವ ಅಂತ್ಯಗೊಂಡಿದೆ.
ಸದ್ಯ ವಿಧಾನ ಪರಿಷತ್ತಿನ 75 ಸ್ಥಾನಗಳ ಪೈಕಿ ಕಾಂಗ್ರೆ, 29, ಬಿಜೆಪಿ 29, ಜೆಡಿಎಸ್ 11, ಪಕ್ಷೇತರ 5, ಸಭಾಪತಿ 1 ಇದ್ದಾರೆ. ವಿಧಾನಸಭೆಯಿಂದ ಆಯ್ಕೆಯಾದವರಲ್ಲಿ ಇದೇ ವರ್ಷದ ಜೂನ್ 14ಕ್ಕೆ 7 ಮಂದಿ, ಪವೀಧರರ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರಲ್ಲಿ ಜುಲೈ 4ಕ್ಕೆ ಇಬ್ಬರು, ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ ಬಂದವರಲ್ಲಿ ಜುಲೈ 4ಕ್ಕೆ ಇಬ್ಬರು, ನಾಮನಿರ್ದೇಶನರಾದವರ ಪೈಕಿ ಫೆಬ್ರವರಿ 3ಕ್ಕೆ ಇಬ್ಬರು ನಿವೃತ್ತರಾಗುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


