ಬೆಳಗಾವಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ
ಬಹು ಉದ್ದೇಶಿತ ನೂತನ ಬೆಳೆವಿಮಾ ಯೋಜನೆ ‘ವಿಮಾ ಫಸಲ್’ ಕುರಿತಂತೆ ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ರೈತ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು...

ಬೆಳಗಾವಿ: ಬಹು ಉದ್ದೇಶಿತ ನೂತನ ಬೆಳೆವಿಮಾ ಯೋಜನೆ ‘ವಿಮಾ ಫಸಲ್’ ಕುರಿತಂತೆ ಬೆಳಗಾವಿಯಲ್ಲಿ ಆಯೋಜಿಸಲಾಗಿರುವ ರೈತ ಜಾಗೃತಿ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಬೆಳಗಾವಿಗೆ ಆಗಮಿಸಿದರು.
ಶನಿವಾರ ಮಧ್ಯಾಹ್ನ ಸುಮಾರು 4.30ರ ಹೊತ್ತಿಗೆ ಬೆಳಗಾವಿಗೆ ಆಗಮಿಸಿದ ನರೇಂದ್ರ ಮೋದಿ ಅವರನ್ನು ತೀವ್ರ ಭದ್ರತೆಯ ನಡುವೆ ವೇದಿಕೆಗೆ ಕರೆತರಲಾಯಿತು. ಈ ವೇಳೆ ಹಲವು ರೈತ ಸಂಘಟನೆಗಳು ಪ್ರಧಾನಿ ಅವರಿಗೆ ಪ್ರತಿಭಟನೆಯ ಮೂಲಕ ಸ್ವಾಗತ ಕೋರಿದವು. ‘ಕಳಸಾ ಬಂಡೂರಿ’ ಹೋರಾಟಕ್ಕೆ ಪ್ರಧಾನಿಯವರಿಂದ ನ್ಯಾಯ ಸಿಗಬೇಕು, ಕಳಸಾ – ಮಹದಾಯಿ ವಿಷಯದಲ್ಲಿ ಪ್ರಧಾನಿ ಮೋದಿ ತಮ್ಮ ನಿಲುವು ಪ್ರಕಟಿಸಬೇಕು ಎಂದು ಆಗ್ರಹಿಸಿದ ನೂರಾರು ರೈತರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಪ್ರಧಾನ ವೇದಿಕೆಯತ್ತ ಆಗಮಿಸುತ್ತಿದ್ದಂತೆಯೇ ಬರುತ್ತಿದ್ದಂತೆಯೇ ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ ರೈತರು ಹಸಿರು ಶಾಲು ಮತ್ತು ಕಪ್ಪುಧ್ವಜ ಹಿಡಿದುಕೊಂಡು ವೇದಿಕೆಯತ್ತ ನುಗ್ಗಲು ಯತ್ನಿಸಿದರು. ಅವರನ್ನು ತಡೆದ ಪೊಲೀಸರು ಒಬ್ಬೊಬ್ಬರನ್ನಾಗಿ ವಶಕ್ಕೆ ತೆಗೆದುಕೊಂಡು ಎಪಿಎಂಸಿ ಮಾರುಕಟ್ಟೆಯತ್ತ ಸಾಗಿಸಿದರು. ಇದೇ ವೇಳೆಗೆ ಕಳಸಾಬಂಡೂರಿ ನ್ಯಾಯಕ್ಕಾಗಿ ನೂರಾರು ರೈತರು ಧಾರವಾಡದಲ್ಲೂ ಪ್ರತಿಭಟನೆ ನಡೆಸುತ್ತಿದ್ದು ಟೈರುಗಳಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


