ಪ್ರಧಾನ ಸುದ್ದಿ

ಟಾಟಾ ಏಸ್ ಮೇಲೆ ಪಲ್ಟಿ ಹೊಡೆದ ಲಾರಿ: 12 ಮಂದಿ ದುರ್ಮರಣ

ನಗರದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಭೀಕರ ಅಪಘಾತ ಸಂಭವಿಸಿವಿದ್ದು, ಟಾಟಾ ಏಸ್ ಮೇಲೆ ಲಾರಿ ಪಲ್ಟಿ ಹೊಡೆದ ಪರಿಣಾಮ 12 ಮಂದಿ ದುರ್ಮರಣ ಹೊಂದಿರುವ ಘಟನೆ ಶುಕ್ರವಾರ ನಡೆದಿದೆ...

ಟಾಟಾ ಏಸ್ ಮೇಲೆ ಪಲ್ಟಿ ಹೊಡೆದ ಲಾರಿ: 12 ಮಂದಿ ದುರ್ಮರಣ
ಟಾಟಾ ಏಸ್ ಮೇಲೆ ಪಲ್ಟಿ ಹೊಡೆದ ಲಾರಿ: 12 ಮಂದಿ ದುರ್ಮರಣ (ಸಾಂದರ್ಭಿಕ ಚಿತ್ರ)
Published On :
ಬೆಂಗಳೂರು: ನಗರದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಭೀಕರ ಅಪಘಾತ ಸಂಭವಿಸಿವಿದ್ದು, ಟಾಟಾ ಏಸ್ ಮೇಲೆ ಲಾರಿ ಪಲ್ಟಿ ಹೊಡೆದ ಪರಿಣಾಮ 12 ಮಂದಿ ದುರ್ಮರಣ ಹೊಂದಿರುವ ಘಟನೆ ಶುಕ್ರವಾರ ನಡೆದಿದೆ. 
12 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಟಾಟಾ ಏಸ್ ವಾಹನ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಚಿತ್ರದುರ್ಗದಿಂದ ಹೊಸಪೇಟೆಗೆ ಹೋಗುತ್ತಿತ್ತು. ಈ ವೇಳೆ ಕಬ್ಬಿಣ ತುಂಬಿದ ಲಾರಿಯೊಂದು ಟಾಟಾ ಏಸ್ ಗೆ ಡಿಕ್ಕಿ ಹೊಡೆದಿದೆ. ನಂತರ ಟಾಟಾ ಏಸ್ ಮೇಲೆ ಪಲ್ಟಿ ಹೊಡೆದ ಪರಿಣಾಮ ವಾಹನದಲ್ಲಿದ್ದ 12 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 
ಮೃತರೆಲ್ಲರೂ ಚಿತ್ರದುರ್ಗದ ಕ್ಯಾಸಾಪುರ, ಕೊಡಗಹಳ್ಳಿ ಗ್ರಾಮದವರು ಎಂದು ಹೇಳಲಾಗುತ್ತಿದ್ದು, ಮೃತರನ್ನು ಗಂಗಮ್ಮ (60), ಸುದೀಪ್ (17), ಮಂಜುನಾಥ್ (40), ತಿಪ್ಪೇಸ್ವಾಮಿ (45), ಕೊಲ್ಲಪ್ಪ (68), ಮಂಜಣ್ಣ (61), ಚೇತಮ್ (11), ದುಗ್ಗಪ್ಪ (51), ನಾಗಣ್ಣ (45), ಗಂಗಣ್ಣ (43), ಚಾಲಕ ಕುಮಾರ್ (35), ಮಂಜಣ್ಣ (16) ಎಂದು ಗುರ್ತಿಸಲಾಗಿದೆ. ಡಿಕ್ಕಿ ಹೊಡೆದ ಲಾರಿ ಚಾಲಕ ರಾಹುಲ್ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಡಿಕ್ಕಿ ಹೊಡೆದ ವಾಹನದ ಸಂಖ್ಯೆ ಯುಪಿ 81, ಎಎಫ್ 5451 ಎಂದು ಹೇಳಲಾಗುತ್ತಿದ್ದು, ಟಾಟಾ ಏಸ್ ವಾಹನದ ಸಂಖ್ಯೆ ಕೆಎ 16, ಬಿ 9171 ಎಂದು ತಿಳಿದುಬಂದಿದೆ. ಸ್ಥಳಕ್ಕಾಗಮಿಸಿರುವ ಪೊಲೀಸರು ಲಾರಿ ಕೆಳಗೆ ಸಿಲುಕಿದ ಮೃತ ದೇಹಗಳನ್ನು ಹೊರತೆಗೆದಿದ್ದು, ಎಸ್ ಪಿ ಎಂ.ಎನ್.ಅನುಚೇತ್ ಅವರು ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣ ಇದೀಗ ತುರವನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.