ಪ್ರಧಾನ ಸುದ್ದಿ

ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ; ಸಿ ಪಿ ಎಂ ಕಾರ್ಯಕರ್ತನ ಬಂಧನ

ಪಿ ವಿ ಸುಜಿತ್(೨೭) ಎಂದು ಗುರುತಿಸಲಾಗಿರುವ ಆರ್ ಎಸ್ ಎಸ್ ಕಾರ್ಯಕರ್ತನನ್ನು ಪಪ್ಪಿನಿಸ್ಸೇರಿಯ ಅವರ ನಿವಾಸದ ಬಳಿ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ.

ಕೇರಳದಲ್ಲಿ ಆರ್ ಎಸ್ ಎಸ್ ಕಾರ್ಯಕರ್ತನ ಕೊಲೆ; ಸಿ ಪಿ ಎಂ ಕಾರ್ಯಕರ್ತನ ಬಂಧನ
ಸಾಂದರ್ಭಿಕ ಚಿತ್ರ
Published On :

ಕಣ್ಣೂರು: ಪಿ ವಿ ಸುಜಿತ್(೨೭) ಎಂದು ಗುರುತಿಸಲಾಗಿರುವ ಆರ್ ಎಸ್ ಎಸ್ ಕಾರ್ಯಕರ್ತನನ್ನು ಪಪ್ಪಿನಿಸ್ಸೇರಿಯ ಅವರ ನಿವಾಸದ ಬಳಿ ಸೋಮವಾರ ರಾತ್ರಿ ಕೊಲೆ ಮಾಡಲಾಗಿದೆ. ಕೊಲೆಗಡುಕರಿಂದ ಮಗನನ್ನು ರಕ್ಷಿಸಲು ಮುಂದಾದ ಪೋಷಕರಿಗೂ ಈ ದಾಳಿಯಲ್ಲಿ ತೀವ್ರ ಗಾಯಗಳಾಗಿವೆ.

ಸೋಮವಾರ ರಾತ್ರಿ ಸುಮಾರು ೧೧:೩೦ ಕ್ಕೆ ಈ ಘಟನೆ ನಡೆದಿದ್ದು, ಆಯುಧಗಳನ್ನು ಹಿಡಿದ ಒಂದು ಗುಂಪು, ವಾಲಪಟ್ಟಣಮ್ ಪೊಲೀಸ್ ಠಾಣೆಯ ಸುಪರ್ದಿಯಲ್ಲಿರುವ ಪಪ್ಪಿನಿಸ್ಸೇರಿಯ ಅರೋಲಿ ಬಳಿ ಇರುವ ಸಂತ್ರಸ್ತನ ಮನೆಗೆ ನುಗ್ಗಿ ದಾಳಿ ನಡೆಸಿದೆ. ಸಂತ್ರಸ್ತನಿಗೆ ಇರಿದ ಗಾಯಗಳಾಗಿದ್ದು ಕೂಡಲೇ ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದ್ದರೂ ಅವರು ಅಸು ನೀಗಿದ್ದಾರೆ. ಈ ಕೊಲೆಯ ಹಿಂದೆ ಸಿ ಪಿ ಎಂ ಪಕ್ಷದ ಕೈವಾಡವಿದೆ ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಮುಖಂಡರು ದೂರಿದ್ದಾರೆ.

ಈ ದಾಳಿಯ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು ಶಂಕಿತ ಸಿ ಪಿ ಎಂ ಕಾರ್ಯಕರ್ತನೋಬ್ಬನನ್ನು ಬಂಧಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.