ಪ್ರಧಾನ ಸುದ್ದಿ

ಮತ್ತೆ ಮೂರು ಚಿರತೆಗಳು ಪ್ರತ್ಯಕ್ಷ; ಸ್ಥಳೀಯರಲ್ಲಿ ತೀವ್ರ ಆಂತಕ

ವಿಬ್ ಗಯಾರ್ ಶಾಲೆಯಲ್ಲಿ ಆತಂಕ ಸೃಷ್ಟಿಸಿ ಅರಣ್ಯಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದ ಚಿರತೆ ದಾಳಿ ಪ್ರಕರಣ ಮಾಸುವ ಮುನ್ನವೇ ಮತ್ತೆ ಮೂರು ಚಿರತೆಗಳು ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿವೆ...

ಮತ್ತೆ ಮೂರು ಚಿರತೆಗಳು ಪ್ರತ್ಯಕ್ಷ; ಸ್ಥಳೀಯರಲ್ಲಿ ತೀವ್ರ ಆಂತಕ
ಮತ್ತೆ ಚಿರತೆ ಪ್ರತ್ಯಕ್ಷ (ಸಾಂದರ್ಭಿಕ ಚಿತ್ರ)
Published On :

ಬೆಂಗಳೂರು: ವಿಬ್ ಗಯಾರ್ ಶಾಲೆಯಲ್ಲಿ ಆತಂಕ ಸೃಷ್ಟಿಸಿ ಅರಣ್ಯಸಿಬ್ಬಂದಿ ಕೈಗೆ ಸಿಕ್ಕಿಬಿದ್ದಿದ್ದ ಚಿರತೆ ದಾಳಿ ಪ್ರಕರಣ ಮಾಸುವ ಮುನ್ನವೇ ಮತ್ತೆ ಮೂರು ಚಿರತೆಗಳು ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿವೆ.

ಮತ್ತದೆ ವಿಬ್ ಗಯಾರ್ ಶಾಲೆಯ ಹಿ೦ಭಾಗದ ನೀಲಗಿರಿ ತೋಪಿನಲ್ಲಿ ಮ೦ಗಳವಾರ ರಾತ್ರಿ 9 ಗಂಟೆ ಸುಮಾರಿನಲ್ಲಿ 2 ಚಿರತೆಗಳು ಕಾಣಿಸಿಕೊ೦ಡಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಅಲ್ಲದೆ ಸಮೀಪದ ಕೀತ೯ನಾ ಗಾಡೇ೯ನಿಯಾ ಅಪಾಟ್‍೯ಮೆ೦ಟ್‍ಗೆ ನುಗ್ಗಲು ಚಿರತೆಗಳು ಯತ್ನಿಸಿದ್ದು, ಇದರಿ೦ದ ಭಯ-ಭೀತಿಗೊ೦ಡ ಅಲ್ಲಿನ ನಿವಾಸಿಗಳು ಪಟಾಕಿ ಸಿಡಿಸಿದ್ದಾರೆ. ಪಟಾಕಿಗಳು ಸ್ಫೋಟಗೊಳ್ಳುತ್ತಿದ್ದಂತೆಯೇ ಭಯದಿಂದ ಚಿರತೆಗಳು ಓಡಿಹೋಗಿವೆ.

ಬಳಿಕ ಈ ಸುದ್ದಿಯನ್ನು ಸ್ಥಳೀಯ ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ. ಬಳಿಕ ಅರಣ್ಯ ಸ೦ರಕ್ಷಣಾಧಿಕಾರಿ ದೀಪಿಕಾ ಸ್ಥಳಕ್ಕೆ ಭೇಟಿ ನೀಡಿ ವಿಬ್‍ಗಯಾರ್ ಶಾಲೆ ಆವರಣದಲ್ಲಿ ಹುಡುಕಾಟ ನಡೆಸಿದ್ದು, ಶಾಲೆಯ ಸುತ್ತಮುತ್ತ ಚಿರತೆ ಬ೦ದಿರುವುದು ಖಚಿತವಾಗಿದೆ. ಹಾಗಾಗಿ ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬ೦ದಿಗಳು ಸ್ಥಳದಲ್ಲಿಯೇ ಮೊಕ್ಕಾ೦ ಹೂಡಿದ್ದಾರೆ. ಜನರಿಗೆ ತೊ೦ದರೆಯಾಗದ೦ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎ೦ದು ಆಗ್ನೇಯ ವಿಭಾಗ ಡಿಸಿಪಿ ಡಾ.ಬೋರಲಿ೦ಗಯ್ಯ ಅವರು ತಿಳಿಸಿದ್ದಾರೆ.

ವರ್ತೂರು ಸಮೀಪದ ಶಾಳೆಗಳಿಗೆ ಬುಧವಾರ ರಜೆ ಘೋಷಣೆ
ವರ್ತೂರು ಸಮೀಪ ಮತ್ತೆ ಚಿರತೆಗಳು ಕಾಣಿಸಿಕೊ೦ಡಿರುವ ಹಿನ್ನೆಲೆಯಲ್ಲಿ ವಿದ್ಯಾಥಿ೯ಗಳ ಸುರಕ್ಷತೆ ದೃಷ್ಟಿಯಿ೦ದಾಗಿ ವತೂ೯ರು, ಮಾರತಹಳ್ಳಿ, ಹಿಮ್ಮಡಹಳ್ಳಿ, ದೊಡ್ಡಕಲ್ಲಹಳ್ಳಿಗಳ ಶಾಲೆಗಳಿಗೆ ಶಿಕ್ಷಣ ಇಲಾಖೆ ಬುಧವಾರ ರಜೆ ಘೋಷಣೆ ಮಾಡಿದೆ. ಬುಧವಾರದ ಪರಿಸ್ಥಿತಿ ಅವಲೋಕಿಸಿ ಮು೦ದಿನ ಕ್ರಮ ತೆಗೆದುಕೊಳ್ಳುವುದಾಗಿ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.