ಸಿಯಾಚಿನ್ ಹಿಮಕುಸಿತದಲ್ಲಿ ರಾಜ್ಯದ ಮೂವರು ಯೋಧರು ಸಾವು
ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಕಣಿವೆಯ ಹಿಮಕುಸಿತದಲ್ಲಿ ಕರ್ನಾಟಕ ರಾಜ್ಯದ ಮೂವರು ಯೋಧರು...

Published On :
ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಸಿಯಾಚಿನ್ ಕಣಿವೆಯ ಹಿಮಕುಸಿತದಲ್ಲಿ ಕರ್ನಾಟಕ ರಾಜ್ಯದ ಮೂವರು ಯೋಧರು ಮೃತಪಟ್ಟಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಯಾಚಿನ್ ಕಣಿವೆಯಲ್ಲಿ ಸಂಭವಿಸಿದ ಹಿಮಪಾತದಲ್ಲಿ ಮೃತಪಟ್ಟ 10 ಯೋಧರ ಹೆಸರನ್ನು ಕೇಂದ್ರ ಸರ್ಕಾರ ಪ್ರಕಟಗೊಳಿಸಿದ್ದು, ಅದರಲ್ಲಿ ಕರ್ನಾಟಕದ ಮೂವರು ಯೋಧರು, ತಮಿಳುನಾಡಿದ ನಾಲ್ವರು ಹಾಗೂ ಕೇರಳ-1, ಮಹಾರಾಷ್ಟ್ರ-1, ಆಂಧ್ರಪ್ರದೇಶದಕ್ಕೆ ಸೇರಿದ ಓರ್ವ ಯೋಧ ಮೃತಪಟ್ಟಿದ್ದಾರೆ.
ಕರ್ನಾಟಕದ ಕುಂದಗೋಳ ತಾಲ್ಲೂಕು ಬೆಟದೂರಿನ ಲ್ಯಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ(35), ಎಚ್ ಡಿ ಕೋಟೆ ಹಂಪಾಪುರದ ಯೋಧ ಮಹೇಶ(30) ಹಾಗೂ ಹಾಸನ ಜಿಲ್ಲೆ ತೇಜೂರಿನ ಸುಬೇದಾರ್ ಟಿಟಿ ನಾಗೇಶ್(41) ಮೃತಪಟ್ಟಿರುವ ಯೋಧರು.
ಹನುಮಂತಪ್ಪ ಕೊಪ್ಪ ಕಳೆದ 14 ವರ್ಷಗಳಿಂದ ಭಾರತೀಯ ಸೇನಾಪಡೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದು, ಒಂದು ಹೆಣ್ಣು ಮಗುವಿತ್ತು.
ಎಚ್ ಡಿ ಕೋಟೆ ಮಹೇಶ್ ಎಂಟು ವರ್ಷಗಳಿಂದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರು. ಎರಡು ವಾರಗಳ ಹಿಂದೆಯಷ್ಟೇ ಸಿಯಾಚಿನ್ ತೆರಳುತ್ತಿರುವುದಾಗಿ ತಾಯಿಗೆ ಕರೆ ಮಾಡಿ ತಿಳಿಸಿದ್ದರು.
ಕಳೆದ 20 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಟಿಟಿ ನಾಗೇಶ್ ನಿವೃತ್ತಿ ಹೊಂದುವ ಹಂತದಲ್ಲಿದ್ದರು. ಇವರ ಪತ್ನಿ ಆಶಾ ಹಾಗೂ ಇಬ್ಬರು ಮಕ್ಕಳು ಹಾಸನ ನಗರಕ್ಕೆ ಹೊಂದಿಕೊಂಡ ಪುಟ್ಟಹಳ್ಳಿ ತೇಜೂರಿನಲ್ಲಿ ವಾಸವಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


