ಪ್ರಧಾನ ಸುದ್ದಿ

ನಗದು ರಹಿತ ವೇತನ ಪಾವತಿಗಾಗಿ ಕೇಂದ್ರದ "ಸುಗ್ರೀವಾಜ್ಞೆ"ಗೆ ಕ್ಯಾಬಿನೆಟ್ ಅನುಮೋದನೆ!

ನಗದು ರಹಿತ ವ್ಯವಸ್ಥೆ ಉತ್ತೇಜನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದ್ದು, ದೇಶದ ಎಲ್ಲ ನೌಕರರ ವೇತವನ್ನು ನಗದು ರಹಿತವಾಗಿ ಮಾಡಲು ನಿರ್ಧರಿಸಿದೆ.

ನಗದು ರಹಿತ ವೇತನ ಪಾವತಿಗಾಗಿ ಕೇಂದ್ರದ "ಸುಗ್ರೀವಾಜ್ಞೆ"ಗೆ ಕ್ಯಾಬಿನೆಟ್ ಅನುಮೋದನೆ!
ಸಂಗ್ರಹ ಚಿತ್ರ
Published On :

ನವದೆಹಲಿ: ನಗದು ರಹಿತ ವ್ಯವಸ್ಥೆ ಉತ್ತೇಜನಕ್ಕೆ ಮುಂದಾಗಿರುವ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಣಯ ಕೈಗೊಂಡಿದ್ದು, ದೇಶದ ಎಲ್ಲ ನೌಕರರ ವೇತವನ್ನು ನಗದು ರಹಿತವಾಗಿ ಮಾಡಲು ನಿರ್ಧರಿಸಿದೆ.

ಅದರಂತೆ ನಗದು ರಹಿತ ವೇತನ ಪಾವತಿ ಕುರಿತಂತೆ ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆ ಕೂಡ ಪಡೆದಿದೆ. ದೆಹಲಿಯಲ್ಲಿ ಇಂದು ನಡೆದ ಕೇಂದ್ರ ಸಚಿವ
ಸಂಪುಟಸಭೆಯಲ್ಲಿ ಕೇಂದ್ರ ಸರ್ಕಾರದ ಈ ಮಹತ್ವದ ನಿರ್ಣಯಕ್ಕೆ ಅನುಮೋದನೆ ದೊರೆತಿದ್ದು, ರಾಷ್ಟ್ರಪತಿಗಳ ಅಂಗೀಕಾರಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಒಂದು ವೇಳೆ ಈ ಸುಗ್ರೀವಾಜ್ಞೆಗೆ ರಾಷ್ಟ್ರಪತಿಗಳ  ಅನುಮೋದನೆ ದೊರೆತರೆ ದೇಶದ ಸಂಘಟಿತ ನೌಕರರ ವಲಯಕ್ಕೆ ಮಾತ್ರ ಸೀಮಿತವಾಗಿದ್ದ ನಗದು ರಹಿತ ವೇತನ ವ್ಯವಸ್ಥೆ ಇನ್ನು ಮುಂದೆ ಕೋಟ್ಯಂತರ ಸಂಖ್ಯೆಯಲ್ಲಿ ಅಸಂಘಟಿತ ನೌಕರರಿಗೂ ಅನ್ವಯವಾಗಲಿದೆ.

ಕೇಂದ್ರ ಸರ್ಕಾರ ತನ್ನ ಈ ಸುಗ್ರೀವಾಜ್ಞೆಯನ್ನು 6 ತಿಂಗಳ ಒಳಗಾಗಿ ಸಂಸತ್ತಿನ ಉಭಯ ಕಲಾಪದಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕಿದೆ. ಅದರಂತೆ ಕೇಂದ್ರ ಸರ್ಕಾರ ವೇತನ ಪಾವತಿ ಕಾಯ್ದೆಗೆತಿದ್ದುಪಡಿ ತಂದು ಸಂಸತ್ತಿನ  ಉಭಯ ಕಲಾಪಗಳಲ್ಲಿ ಮಂಡಿಸುವ ಸಾಧ್ಯತೆ ಇದೆ.

ಚೆಕ್, ಇ-ಪೇಮೆಂಟ್ ಮೂಲಕ ನೌಕರರಿಗೆ ವೇತನ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ಈ ನಿರ್ಣಯದಿಂದಾಗಿ ನಗದು ರೂಪದಲ್ಲಿ ವೇತನ ಪಡೆಯುತ್ತಿದ್ದ ಅಸಂಖ್ಯಾತ ಆಸಂಘಟಿತ ಕಾರ್ಮಿಕ ವಲಯದ ಮೇಲೆ  ಪರಿಣಾಮ ಬೀರಲಿದೆ. ಅಸಂಘಟಿತ ವಲಯದ ಕಾರ್ಮಿಕರಲ್ಲಿ ಬಹುತೇಕ ಮಂದಿಗೆ ಬ್ಯಾಂಕ್ ಖಾತೆಗಳಿಲ್ಲ. ಹೀಗಾಗಿ ಇನ್ನು ಮುಂದೆ ಅವರ ವೇತನಕ್ಕಾಗಿಯಾದರೂ ಅನಿವಾರ್ಯವಾಗಿ ಬ್ಯಾಂಕ್ ಖಾತೆಗಳನ್ನು ತೆರೆಯಬೇಕಿದೆ.  ಈಗಾಗಲೇ ದೇಶಾದ್ಯಂತ ಸುಮಾರು 27 ಕೋಟಿ ಸಾಮಾನ್ಯ ಖಾತೆಗಳಿದ್ದು, 23 ಕೋಟಿ ಜನಧನ್ ಖಾತೆಗಳಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.