ಪ್ರಧಾನ ಸುದ್ದಿ

ಮಾಲಿನ್ಯದ ವಿರುದ್ಧ ಸಮರ; ದೆಹಲಿಯಲ್ಲಿ ಬಸ್ ಪ್ರಯಾಣ ದರ ಭಾರಿ ಕಡಿತ

ಸಾರ್ವಜನಿಕ ಪ್ರಯಾಣ ವ್ಯವಸ್ಥೆಯನ್ನು ಉಪಯೋಗಿಸಲು ಜನರಿಗೆ ಉತ್ತೇಜಿಸಿ, ಮಾಲಿನ್ಯದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಬುಧವಾರ ಜನವರಿ ತಿಂಗಳಿಗೆ ಬಸ್ ಪ್ರಯಾಣ ದರದಲ್ಲಿ ಭಾರಿ

ಮಾಲಿನ್ಯದ ವಿರುದ್ಧ ಸಮರ; ದೆಹಲಿಯಲ್ಲಿ ಬಸ್ ಪ್ರಯಾಣ ದರ ಭಾರಿ ಕಡಿತ
ಸಾಂದರ್ಭಿಕ ಚಿತ್ರ
Published On :
ನವದೆಹಲಿ: ಸಾರ್ವಜನಿಕ ಪ್ರಯಾಣ ವ್ಯವಸ್ಥೆಯನ್ನು ಉಪಯೋಗಿಸಲು ಜನರಿಗೆ ಉತ್ತೇಜಿಸಿ, ಮಾಲಿನ್ಯದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ದೆಹಲಿ ಸರ್ಕಾರ ಬುಧವಾರ ಜನವರಿ ತಿಂಗಳಿಗೆ ಬಸ್ ಪ್ರಯಾಣ ದರದಲ್ಲಿ ಭಾರಿ ಕಡಿತಗೊಳಿಸಿ ಆದೇಶಿಸಿದೆ. 
ಹವಾನಿಯಂತ್ರಿತ ಬಸ್ ಗಳಲ್ಲಿ ಈಗ ಗರಿಷ್ಠ ದರ ೧೦ ರೂ ಇದ್ದು, ಹಿಂದಿನ ೨೫ ರೂ ನಿಂದ ೧೫ ರು ಕಡಿತ ಕಂಡಿದೆ. ಇತರ ಬಸ್ ಗಳಲ್ಲಿ ಗರಿಷ್ಠ ದರವನ್ನು ೧೫ ರೂ ನಿಂದ ೫ ರೂಗೆ ಕಡಿತಗೊಳಿಸಲಾಗಿದೆ. 
ದೆಹಲಿ ಸರ್ಕಾರ ಸುಮಾರು ೪೫೦೦ ಬಸ್ ಗಳ ಸೇವೆಯನ್ನು ಒದಗಿಸುತ್ತದೆ. 
"ಚಳಿಗಾಲದ ಸಮಯದಲ್ಲಿ ಮಾಲಿನ್ಯ ತೀವ್ರಗೊಳ್ಳುವುದನ್ನು ತಗ್ಗಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ" ಎಂದು ಸಾರಿಗೆ ಸಚಿವ ಸತ್ಯೇಂದರ್ ಜೈನ್ ಹೇಳಿದ್ದು "ಜನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಲು ಉತ್ತೇಜಿಸುವುದಕ್ಕೆ ದರ ಕಡಿತಗೊಳಿಸಿದ್ದೇವೆ" ಎಂದಿದ್ದಾರೆ. 
ಈ ನಿರ್ಧಾರದಿಂದ ರಸ್ತೆಯ ಮೇಲೆ ಕಾರ್ ಗಳ ಸಂಖ್ಯೆ ಕಡಿಮೆಯಾಗುತ್ತದೆ ಎಂದು ನಂಬಿರುವುದಾಗಿ ಜೈನ್ ಹೇಳಿದ್ದಾರೆ. 
ದೆಹಲಿ ವಿಶ್ವದಲ್ಲೇ ಅತಿ ಹೆಚ್ಚು ಮಾಲಿನ್ಯ ನಗರಿಗಳಲ್ಲಿ ಒಂದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.