ಸಂಸತ್ತಿನ ಹೊರಗೆ ಪ್ರಧಾನಿ ಭ್ರಷ್ಟತೆಯನ್ನು ಬಯಲು ಮಾಡಿ; ರಾಹುಲ್ ಗಾಂಧಿಗೆ ಕೇಜ್ರಿವಾಲ್
ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರದ ದಾಖಲೆಗಳಿದ್ದರೆ, ಅದನ್ನು ಸಂಸತ್ತಿನ ಹೊರಗೆ ಬಯಲುಮಾಡುವಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್

Published On :
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭ್ರಷ್ಟಾಚಾರದ ದಾಖಲೆಗಳಿದ್ದರೆ, ಅದನ್ನು ಸಂಸತ್ತಿನ ಹೊರಗೆ ಬಯಲುಮಾಡುವಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಇಂತಹ 'ಗೆಳೆತನದ ಪಂದ್ಯ'ಗಳನ್ನೂ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಆಡುತ್ತಿರುತ್ತವೆ ಆದರೆ ಯಾವುದನ್ನು ಬಯಲು ಮಾಡುವುದಿಲ್ಲ ಎಂದು ಕೂಡ ಅವರು ಆರೋಪಿಸಿದ್ದಾರೆ.
"ಭ್ರಷ್ಟಾಚಾರದಲ್ಲಿ ಮೋದಿ ಅವರು ಖುದ್ದು ಭಾಗಿಯಾಗಿರುವ ದಾಖಲೆಗಳು ರಾಹುಲ್ ಗಾಂಧಿ ಬಳಿ ಇದ್ದರೆ, ಅವನ್ನು ಸಂಸತ್ತಿನ ಹೊರಗೇಕೆ ಬಯಲು ಮಾಡುತ್ತಿಲ್ಲ?"
"ಗೆಳೆತನದ ಪಂದ್ಯ- ಕಾಂಗ್ರೆಸ್ ವಿರುದ್ಧ ಆಗಸ್ಟ ವೆಸ್ಟ್ ಲ್ಯಾಂಡ್ ಪ್ರಕರಣ ಇರುವುದಾಗಿ ಬಿಜೆಪಿ ಹೇಳುತ್ತದೆ. ಬಿಜೆಪಿ ವಿರುದ್ಧ ಸಹರಾ/ಬಿರ್ಲಾ ಲಂಚದ ಪ್ರಕರಣ ಇರುವುದಾಗಿ ಬಿಜೆಪಿ ಹೇಳುತ್ತದೆ. ಯಾರು ಬಹಿರಂಗಪಡಿಸುವುದಿಲ್ಲ" ಎಂದು ಕೇಜ್ರಿವಾಲ್ ಸರಣಿ ಟ್ವೀಟ್ ಗಳಲ್ಲಿ ಹೇಳಿದ್ದಾರೆ.
ಪ್ರಧಾನಿ ಖುದ್ದು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ದಾಖಲೆಗಳು ನನ್ನ ಬಳಿ ಇವೆ ಆದರೆ ನನಗೆ ಸಂಸತ್ತಿನಲ್ಲಿ ಮಾತನಾಡಲು ಬಿಡುತ್ತಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಕ್ಕೆ ಕೇಜ್ರಿವಾಲ್ ಪ್ರತಿಕ್ರಿಯಿಸಿದ್ದಾರೆ.
ನೋಟು ಹಿಂಪಡೆತ ನಿರ್ಧಾರದ ವಿರುದ್ಧ ಮತ್ತೆ ಬಿಜೆಪಿ ವಿರುದ್ಧ ಹರಿಹಾಯ್ದಿರುವ ಕೇಜ್ರಿವಾಲ್, ವ್ಯಾಪಾರಸ್ಥರು ಬಿಜೆಪಿ ವಿರುದ್ಧ ತಿರುಗಿಬಿದಿದ್ದಾರೆ ಎಂದಿದ್ದು "ಈ ದೇಶದ ವ್ಯಾಪಾರಸ್ಥರು ಹೇಳುತ್ತಿದ್ದಾರೆ, ಬಿಜೆಪಿ ನಮ್ಮಿಂದ ಹಣ ಪಡೆಯುತ್ತದೆ, ಮತ ಪಡೆಯುತ್ತದೆ ಆದರೆ ನಮ್ಮನ್ನೇ ಕಳ್ಳರು ಎನ್ನುತ್ತದೆ, ಆದರೆ ನಿಜವಾದ ಕಳ್ಳರು ಪ್ರಧಾನಿ ಜೊತೆಗೆ ಊಟ ಮಾಡುತ್ತಾರೆ" ಎಂದು ಕೂಡ ಅವರು ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Narendra Modiನರೇಂದ್ರ ಮೋದಿಅರವಿಂದ್ ಕೇಜ್ರಿವಾಲ್Arvind KejriwalRahul Gandhiರಾಹುಲ್ ಗಾಂಧಿcorruptionಭ್ರಷ್ಟಾಚಾರ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


