ಜಯಲಲಿತಾ ನಿಧನ: ಅಘಾತಕ್ಕೊಳಗಾಗಿ 26 ಮಂದಿ ಸಾವು
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಕಾಲಿಕ ಮರಣದಿಂದಾಗಿ ಆಘಾತಕ್ಕೊಳಗಾಗಿ ಈವರೆಗೂ ತಮಿಳುನಾಡಿನಲ್ಲಿ ಸುಮಾರು 26 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಕಾಲಿಕ ಮರಣದಿಂದಾಗಿ ಆಘಾತಕ್ಕೊಳಗಾಗಿ ಈವರೆಗೂ ತಮಿಳುನಾಡಿನಲ್ಲಿ ಸುಮಾರು 26 ಮಂದಿ ಸಾವಿಗೀಡಾಗಿದ್ದಾರೆ ಎಂದು ತಿಳಿದುಬಂದಿದೆ.
ಜಯಲಲಿತಾ ನಿಧನವಾದ ಸೋಮವಾರ ರಾತ್ರಿಯಿಂದ ಈ ವರೆಗೂ ಸುಮಾರು 26 ಮಂದಿ ಸಾವಿಗೀಡಾಗಿದ್ದು, ಹಲವರು ಜಯಾ ಅಗಲಿಕೆ ಭರಿಸಲಾಗದೇ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಪೈಕಿ ಕೃಷ್ಣಗಿರಿ ಜಿಲ್ಲೆಯೊಂದರಲ್ಲೇ ಮೂರು ಮಂದಿ ಆಘಾತಕ್ಕೊಳಗಾಗಿ ಸಾವನ್ನಪ್ಪಿದ್ದು, ಸಾವಿಗೀಡಾದವರನ್ನು ವೀರಮಲೈ ಮೂಲದ ಚಿನ್ನಪಿಳ್ಳೈ, ಚಿನ್ನ ಕರಡಿಯೂರ್ ನ ಮಾಣಿಕ್ಯಂ, ವಿಲಾಂಗಮುಡಿ ಮೂಲದ ಪಾಪತಿಯಮ್ಮಾಳ್ ಎಂದು ಗುರುತಿಸಲಾಗಿದೆ.
ಇದಲ್ಲದೆ ನರಾಳಸಂಧಪಟ್ಟಿಯ ಸೆಲ್ವಬಾಸ್ಕರನ್ ಎಂಬ ಹಿರಿಯ ನಾಗರೀಕರೊಬ್ಬರು ಟಿವಿ ನೋಡುತ್ತಿದ್ದಾಗ ಜಯಾ ನಿಧನ ಸುದ್ದಿ ನೋಡಿ ಆಘಾತಕ್ಕೊಳಗಾಗಿ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಬರ್ಗೂರು, ಪನಕಮುಟ್ಲು, ಕರುಂಗಲಿಪಟ್ಟಿ, ವೆಲ್ಲೂರು, ಉತ್ತಾಂಗರೈ, ಸೇಲಂ ಸೇರಿದಂತೆ ಬಹುತೇಕ ತಮಿಳುನಾಡಿನ ಎಲ್ಲ ಜಿಲ್ಲೆಗಳಿಂದಲೂ ಜಯಾ ಅಭಿಮಾನಿಗಳು ಆಘಾತಕ್ಕೊಳಗಾಗಿ ನಿಧನರಾಗಿರುವ ಮಾಹಿತಿ ತಿಳಿದುಬಂದಿದೆ. ಇನ್ನು ಸೇಲಂನಲ್ಲಿ ಮೊದಲು ಪ್ರಸಾರವಾದ ಜಯಾ ನಿಧನ ಸುಳ್ಳು ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಐಎಡಿಎಂಕೆಯ ಇಬ್ಬರು ಕಾರ್ಯಕರ್ತರು ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಒಟ್ಟಾರೆ ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಜನರ ಪ್ರೀತಿಯ ಅಮ್ಮಾ ನಿಧನದಿಂದಾಗಿ ಆಘಾತಗೊಂಡಿರುವ ಅವರ ಅಭಿಮಾನಿಗಳು ಆತ್ಮಹತ್ಯೆಯಂತಹ ಕೃತ್ಯಕ್ಕೆ ಕೈಹಾಕುತ್ತಿದ್ದು, ಈ ರೀತಿ ಸಾವಿಗೀಡಾಗುತ್ತಿರುವ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಶಂಕೆ ವ್ಯಕ್ತವಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


