ಪ್ರಧಾನ ಸುದ್ದಿ

ನಕಲಿ ೨೦೦೦ ರೂ ನೋಟು ಮುದ್ರಿಸುತ್ತಿದ್ದ 'ಮೋದಿ ಮೆಚ್ಚಿದ್ದ ಎಂಜಿನಿಯರ್' ಬಂಧನ

ಕಳೆದ ವರ್ಷ ಆವಿಷ್ಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಶಂಸೆಗೆ ಪಾತ್ರವಾಗಿದ್ದ ಯುವ ಎಂಜಿನಿಯರ್ ಒಬ್ಬ, ತನ್ನ ಸಹಚರರೊಂದಿಗೆ ಖೋಟಾ ೨೦೦೦ ನೋಟುಗಳನ್ನು ಮುದ್ರಿಸಿ,

ನಕಲಿ ೨೦೦೦ ರೂ ನೋಟು ಮುದ್ರಿಸುತ್ತಿದ್ದ 'ಮೋದಿ ಮೆಚ್ಚಿದ್ದ ಎಂಜಿನಿಯರ್' ಬಂಧನ
ನಕಲಿ ೨೦೦೦ ನೋಟು ಮುದ್ರಿಸುತ್ತಿದ್ದ ವ್ಯಕ್ತಿ ಮೊಹಾಲಿಯಲ್ಲಿ ಬಂಧನ
Published On :
ಮೊಹಾಲಿ: ಕಳೆದ ವರ್ಷ ಆವಿಷ್ಕಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರ ಪ್ರಶಂಸೆಗೆ ಪಾತ್ರವಾಗಿದ್ದ ಯುವ ಎಂಜಿನಿಯರ್ ಒಬ್ಬ, ತನ್ನ ಸಹಚರರೊಂದಿಗೆ ಖೋಟಾ ೨೦೦೦ ನೋಟುಗಳನ್ನು ಮುದ್ರಿಸಿ, ಚಲಾವಣೆ ಮಾಡುವಾಗ ಪಂಜಾಬಿನ ಮೊಹಾಲಿಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು, ಬಂಧನಕ್ಕೆ ಒಳಗಾಗಿದ್ದಾನೆ ಎಂದು ಪೊಲೀಸರು ಶುಕ್ರವಾರ ಹೇಳಿದ್ದಾರೆ. 
ಮೊಹಾಲಿಯ ಪೊಲೀಸರು ಅಭಿನವ್ ವರ್ಮಾ ಮತ್ತು ಅವನ ದಾಯಾದಿ ವಿಶಾಖ ವರ್ಮಾ ಹಾಗು ಲೂಧಿಯಾನ ಮೂಲದ ರಿಯಲ್ ಎಸ್ಟೇಟ್ ಉದ್ಯಮಿ ಸುಮನ್ ನಾಗಪಾಲ್ ನಿಂದ ೪೨ ಲಕ್ಷ ಮೌಲ್ಯದ ೨೦೦೦ ರೂ ಖೋಟಾ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ. 
ಈ ತ್ರಿವಳಿಗಳು ಜನರ ಹಳೆಯ ನಿಷೇಧಿತ ೫೦೦ ಮತ್ತು ೧೦೦೦ ರು ನೋಟುಗಳನ್ನು ೩೦% ಕಮಿಷನ್ ಆಧಾರದ ಮೇಲೆ ಬದಲಾಯಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ. 
ಈ ತ್ರಿವಳಿ ಉಪಯೋಗಿಸುತ್ತಿದ್ದ ನೂತನ ಅದ್ದೂರಿ ಆಡಿ ಎಸ್ ಯು ವಿ ಕಾರ್ ನಿಂದ ಈ ನಕಲಿ ನೋಟುಗಳನ್ನು ವಶಪಡಿಸಿಕೊಂಡಿರುವುದಾಗಿ ಮೊಹಾಲಿ ಪೊಲೀಸ್ ಸೂಪರಿಂಟೆಂಡೆಂಟ್ ಪರ್ಮಿಂದರ್ ಸಿಂಗ್ ಹೇಳಿದ್ದಾರೆ. ಈ ಎಸ್ ಯು ವಿ ಮೇಲೆ ವಿವಿಐಪಿ ವ್ಯಕ್ತಿಗಳು ಬಳಸುವ ಕೆಂಪು ದೀಪವನ್ನು ಕೂಡ ಅಳವಡಿಸಿಕೊಂಡಿದ್ದರು ಎಂದು ಪೊಲೀಸರು ಹೇಳಿದ್ದಾರೆ. 
"ಸೆನ್ಸಾರ್ ಗಳನ್ನು ಉತ್ಪನ್ನ ಮಾಡಿ ಅವುಗಳನ್ನು ಅಂಧರು ಬಳಸುವ ಕೋಲುಗಳಲ್ಲಿ ಅಳವಡಿಸುವ ವ್ಯವಹಾರ ಮಾಡುತ್ತಿದ್ದ ಎಂಜಿನಿಯರಿಂಗ್ ಪದವೀಧರ ಅಭಿನವ್ ಚಂಢೀಘರ್ ನ ತನ್ನ ಕಚೇರಿಯಲ್ಲಿಯೇ ೨೦೦೦ ರೂ ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದ" ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. 
ಅಭಿನವ್ (೨೧) ಮತ್ತು ಎಂಬಿಎ ವಿದ್ಯಾರ್ಥಿ ವಿಶಾಖ (೨೩) ನಕಲಿ ನೋಟುಗಳನ್ನು ಮುದ್ರಿಸುತ್ತಿದ್ದರೆ, ರಿಯಲ್ ಎಸ್ಟೇಟ್ ಉದ್ದಿಮೆದಾರ ಹಳೆ ನೋಟುಗಳನ್ನು ಬದಲಿಸಿಕೊಳ್ಳುವ ಜನರನ್ನು ಕರೆತರುತ್ತಿದ್ದ ಎಂದು ಪೊಲೀಸರು ಹೇಳಿದ್ದು "ವಶಪಡಿಸಿಕೊಂಡಿರುವ ನೋಟುಗಳು ಒಂದೇ ಸರಣಿ ಸಂಖ್ಯೆ ಹೊಂದಿವೆ" ಎಂದಿದ್ದಾರೆ. 
ಅಭಿನವ್ ತನ್ನ ಹೊಸ ಆವಿಷ್ಕಾರದಿಂದ ಕಳೆದ ವರ್ಷ ಮೋದಿ ಅವರ ಮೆಚ್ಚುಗೆಗೆ ಪಾತ್ರನಾಗಿದ್ದಲ್ಲದೆ, ಬೆಂಗಳೂರಿನಲ್ಲಿ ನಡೆದ ಭಾರತೀಯ ವಿಜ್ಞಾನ ಸಮಾವೇಶದಲ್ಲಿಯೂ ಮೋದಿ ಅವನ ಬಗ್ಗೆ ಪ್ರಸ್ತಾಪಿಸಿ ಪ್ರಶಂಸಿಸಿದ್ದರು. 
ಅಭಿನವ್ ಸಿದ್ಧಪಡಿಸಿದ್ದ ಸೆನ್ಸಾರ್ 'ಮೇಕ್ ಇನ್ ಇಂಡಿಯಾ' ಯೋಜನೆಯಲ್ಲಿ ಸಿದ್ಧವಾದ ಆವಿಷ್ಕಾರ ಎಂದು ಬಣ್ಣಿಸಿ ಅದನ್ನು ೧೫ ಕ್ಕೂ ಹೆಚ್ಚು ದೇಶಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.