ಪ್ರಧಾನ ಸುದ್ದಿ

ತಿರುಪತಿ ದೇವಸ್ಥಾನದಿಂದ ಬ್ಯಾಂಕ್ ಗೆ 1,311 ಕೆ.ಜಿ.ಚಿನ್ನ ಠೇವಣಿ

ಚಿನ್ನ ನಗದೀಕರಣ ಯೋಜನೆಯಡಿ ಸಾರ್ವಜನಿಕ ವಲಯದ ಬ್ಯಾಂಕ್ ಗೆ 1,311 ಕೆ.ಜಿ ಚಿನ್ನವನ್ನು ಠೇವಣಿ ಮಾಡಲಾಗಿದೆ ಎಂದು ತಿರುಪತಿ ಬಾಲಾಜಿ...

ತಿರುಪತಿ ದೇವಸ್ಥಾನದಿಂದ ಬ್ಯಾಂಕ್ ಗೆ 1,311 ಕೆ.ಜಿ.ಚಿನ್ನ ಠೇವಣಿ
ತಿರುಪತಿ ಬಾಲಾಜಿ ದೇವಾಲಯ
Published On :
ಚೆನ್ನೈ: ಚಿನ್ನ ನಗದೀಕರಣ ಯೋಜನೆಯಡಿ ಸಾರ್ವಜನಿಕ ವಲಯದ ಬ್ಯಾಂಕ್ ಗೆ 1,311 ಕೆ.ಜಿ ಚಿನ್ನವನ್ನು ಠೇವಣಿ ಮಾಡಲಾಗಿದೆ ಎಂದು ತಿರುಪತಿ ಬಾಲಾಜಿ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಅಲ್ಲದೆ ಮತ್ತಷ್ಟು ಚಿನ್ನ ಠೇವಣಿ ಮಾಡಲು ಉತ್ತಮ ನಿಯಮಗಳು ರೂಪಿಸುವಂತೆ ಕೇಳಿಕೊಂಡಿರುವುದಾಗಿ ಹೇಳಿದೆ.
1,311 ಕೆ.ಜಿ. ಶುದ್ಧ ಚಿನ್ನದ ಗಟ್ಟಿಗಳನ್ನು ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸೋಮವಾರ ಡೆಪೋಸಿಟ್ ಮಾಡಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಪ್ರಕಟಣೆಯಲ್ಲಿ ತಿಳಿಸಿದೆ.
ಅತಿ ಹೆಚ್ಚು ಅಂದರೆ ವಾರ್ಷಿಕ ಶೇ,1,75ರಷ್ಟು ಬಡ್ಡಿ ನೀಡಲು ಮುಂದಾದ ಪಂಜಾಬ್ ನ್ಯಾಷನಲ್ ಬ್ಯಾಂಕ್ ನಲ್ಲಿ ಚಿನ್ನ ನಗದೀಕರಣ ಯೋಜನೆಯಡಿ ಮೂರು ವರ್ಷದ ಅವಧಿಗಾಗಿ ದೇವಸ್ಥಾನ ಚಿನ್ನ ಡೆಪೋಸಿಟ್ ಮಾಡಲಾಗಿದೆ ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಡಿ.ಸಾಂಬಶಿವ ರಾವ್ ಅವರು ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ  20,000 ಟನ್‌ಗಳಷ್ಟು ಚಿನ್ನ ಠೇವಣಿಯಾಗುತ್ತದೆ ಎಂಬ ನಿರೀಕ್ಷೆಯೊಂದಿಗೆ ಚಿನ್ನ ನಗದೀಕರಣ ಯೋಜನೆಗೆ ಚಾಲನೆ ನೀಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.