ಉತ್ತರಪ್ರದೇಶದಲ್ಲಿ 'ಗೂಂಡಾ ಸರ್ಕಾರ' ಕಿತ್ತೊಗೆಯಲು ಮಾಯಾವತಿ ಪಣ
ಉತ್ತರಪ್ರದೇಶದ ಆಡಳಿತ ಸಮಾಜವಾದಿ ಪಕ್ಷದ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಹಿಂದಿರುಗುವುದಾಗಿ ಪಣ ತೊಟ್ಟಿರುವ ಬಿ ಎಸ್ ಪಿ ಅಧ್ಯಕ್ಷೆ ಮಾಜಿ ಮುಖ್ಯಮಂತ್ರಿ ಮಾಯಾವತಿ,

ಲಕನೌ: ಉತ್ತರಪ್ರದೇಶದ ಆಡಳಿತ ಸಮಾಜವಾದಿ ಪಕ್ಷದ ಸರ್ಕಾರವನ್ನು ಕಿತ್ತೊಗೆದು ಅಧಿಕಾರಕ್ಕೆ ಹಿಂದಿರುಗುವುದಾಗಿ ಪಣ ತೊಟ್ಟಿರುವ ಬಿ ಎಸ್ ಪಿ ಅಧ್ಯಕ್ಷೆ ಮಾಜಿ ಮುಖ್ಯಮಂತ್ರಿ ಮಾಯಾವತಿ, "ಭೂಗತ ದೊರೆಗಳ ಮತ್ತು ಗೂಂಡಾ ಸರ್ಕಾರವನ್ನು" ಕೊನೆಗಾಣಿಸಲಿದ್ದೇನೆ ಎಂದಿದ್ದಾರೆ.
ಡಾ| ಭೀಮರಾವ್ ಅಂಬೇಡ್ಕರ್ ಅವರ೧೨೫ನೇ ಜಯಂತಿಯಂದು ಪಕ್ಷದ ಕಾರ್ಯಕರ್ತರ ದೊಡ್ಡ ಸಭೆಯನ್ನುದ್ದೇಶಿಸಿ ಮಾತನಾಡಿದ ನಾಲ್ಕು ಅವಧಿಗಳ ಮಾಜಿ ಮುಖ್ಯಮಂತ್ರಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಮೇಲೂ ಚಾಟಿ ಬೀಸಿದ್ದಾರೆ.
ಎಲ್ಲ ಪಕ್ಷಗಳನ್ನು 'ಅವಕಾಶವಾದಿಗಳು' ಎಂದಿರುವ ಮಾಯಾವತಿ ರಾಜಕೀಯ ಮತ್ತು ಚುನಾವಣೆಯ ಲಾಭಕ್ಕಾಗೆ ಮಾತ್ರ ದಲಿತರನ್ನು ಓಲೈಸುತ್ತಾರೆ ಎಂದು ಆರೋಪಿಸಿದ್ದಾರೆ.
"ಉತ್ತರ ಪ್ರದೇಶದ ದಲಿತರಷ್ಟೇ ಅಲ್ಲ, ಇಡೀ ದೇಶದ ದಲಿತರು ಯಾವುದೇ ಬದ್ಧತೆ ಇಲ್ಲದೆ ರಾಜಕೀಯ ಲಾಭಕ್ಕಾಗಿ ಸಿಹಿ ಮಾತುಗಳನ್ನಾಡುವ ಈ ಪಕ್ಷಗಳ ಬಗ್ಗೆ ಎಚ್ಚರದಿಂದಿರಬೇಕು" ಎಂದು ಕೂಡ ಅವರು ಹೇಳಿದ್ದಾರೆ.
ಮುಂದಿನ ವರ್ಷದ ವಿಧಾನಸಭಾ ಚುನಾವಣೆಗಳಲ್ಲಿ 'ರಾಜಕೀಯ ಅಧಿಕಾರದ ಮಾಸ್ಟರ್'ಗಳಂತೆ ವರ್ತಿಸಿ ದಲಿತ ವಿರೋಧಿ ಸರ್ಕಾರವನ್ನು ಕಿತ್ತೊಗೆಯಲು ಕರೆ ನೀಡಿದ್ದಾರೆ.
ಆನೆಯ ಪ್ರತಿಮೆಗಳನ್ನು ಸ್ಥಾಪಿಸಿದ್ದಕ್ಕೆ ಇತರ ಪಕ್ಷಗಳು ನನ್ನ ವಿರುದ್ಧ ಪಿತೂರಿ ಹೂಡಿದರು ಎಂದು ಹೇಳಿರುವ ಅವರು "ಅವರು ನಮ್ಮ ಪಕ್ಷದ ಪ್ರಚಾರಕ್ಕಾಗಿ ಇವುಗಳನ್ನು ನಿಲ್ಲಿಸಿದ್ದು ಎಂದಿದ್ದರು ಬದಲಾಗಿ ಅವುಗಳನ್ನು ಸ್ಥಾಪಿಸಿದ್ದು ಸ್ವಾಗತ ಚಿಹ್ನೆಯಾಗಿ" ಎಂದಿದ್ದಾರೆ ಮಾಯಾವತಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


