ಪ್ರಧಾನ ಸುದ್ದಿ

ಎಸಿಬಿ ವಿರುದ್ಧ ರಾಜಭವನಕ್ಕೆ ಜೆಡಿಎಸ್‌ ಪಾದಯಾತ್ರೆ: ದೇವೇಗೌಡರ ಭೇಟಿಗೆ ನಿರಾಕರಿಸಿದ ಗವರ್ನರ್

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ತಂದಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ವಿರೋಧಿಸಿ ಜೆಡಿಎಸ್‌ ಸೋಮವಾರ ರಾಜಭವನದವರೆಗೆ...

ಎಸಿಬಿ ವಿರುದ್ಧ ರಾಜಭವನಕ್ಕೆ ಜೆಡಿಎಸ್‌ ಪಾದಯಾತ್ರೆ: ದೇವೇಗೌಡರ ಭೇಟಿಗೆ ನಿರಾಕರಿಸಿದ ಗವರ್ನರ್
ಎಚ್.ಡಿ.ದೇವೇಗೌಡ ನೇತೃತ್ವದಲ್ಲಿ ಪಾದಯಾತ್ರೆ
Published On :
ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿತ್ವಕ್ಕೆ ತಂದಿರುವ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ವಿರೋಧಿಸಿ ಜೆಡಿಎಸ್‌ ಸೋಮವಾರ ರಾಜಭವನದವರೆಗೆ ಪಾದಾಯಾತ್ರೆ ನಡೆಸುವ ಮೂಲಕ ಬೃಹತ್‌ ಪ್ರತಿಭಟನೆ ನಡೆಸಿತು.
ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರ ನೇತ್ರತ್ವದಲ್ಲಿ ಜೆಡಿಎಸ್ ಶಾಸಕರು ಹಾಗೂ ಕಾರ್ಯಕರ್ತರು ಇಂದು ಬೆಳಗ್ಗೆ ಮೌರ್ಯ ವೃತ್ತದಿಂದ ಫ್ರೀಡಂ ಪಾರ್ಕ್ ವರೆಗೆ ರಾಜಭವನ ಚಲೋ ಮೆರವಣಿಗೆ ನಡೆಸಿದರು.
ಬಳಿಕ ಕೆಲವು ಶಾಸಕರೊಂದಿಗೆ ರಾಜಭವನಕ್ಕೆ ಆಗಮಿಸಿದ ದೇವೇಗೌಡರು, ರಾಜ್ಯಪಾಲರ ಭೇಟಿಗಾಗಿ ಸುಮಾರು 45 ನಿಮಿಷಗಳ ಕಾಲ ಕಾದು ಕುಳಿತರು. ಆದರೂ ರಾಜ್ಯಪಾಲರು ಮಾಜಿ ಪ್ರಧಾನಿಯನ್ನು ಭೇಟಿ ಮಾಡಲಿಲ್ಲ. ಹೀಗಾಗಿ ರಾಜಭವನದ ಸಿಬ್ಬಂದಿಗೆ ಎಸಿಬಿ ರದ್ದುಗೊಳಿಸುವಂತೆ ಮನವಿ ನೀಡಿ ವಾಪಸ್ಸಾದರು.
ಎಸಿಬಿ ರಚನೆ ವಿರೋಧಿಸುವ ಬ್ಯಾನರ್‌ಗಳು ಪೋಸ್ಟರ್‌ಗಳ ಹಿಡಿದ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಕೂಡಲೇ ಎಸಿಬಿಯನ್ನು ರದ್ದುಪಡಿಸುವಂತೆ ಆಗ್ರಹಿಸಿದರು.
ಶಾಸಕರಿಗೆ ಪ್ರವೇಶ ನಿರಾಕರಿಸಿದ ಭದ್ರತಾ ಸಿಬ್ಬಂದಿ: ದೇವೇಗೌಡ ಗರಂ
ರಾಜಭವನ ಭೇಟಿ ವೇಳೆ ಮಾಜಿ ಪ್ರಧಾನಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರಿಗೆ ಮಾತ್ರ ಒಳಪ್ರವೇಶಿಸಲು ಅವಕಾಶ ಕಲ್ಪಿಸಲಾಯಿತು ಹೋರತು ಉಳಿದ್ಯ ಯಾವ ಶಾಸಕರಿಗೂ ಅವಕಾಶ ನೀಡಲಿಲ್ಲ. ಇದರಿಂದ ಕೆಂಡಾ ಮಂಡಲರಾದ ದೇವೇಗೌಡರು ರಾಜಭವನದ ಭದ್ರತಾ ಸಿಬಂದಿಗಳ ವಿರುದ್ದ ಕಿಡಿ ಕಾರಿದರು. ಇದು ಕರ್ನಾಟಕ ಗುಜರಾತ್‌ ಅಲ್ಲ. ಶಾಸಕರೇನು ಟೆರರಿಸ್ಟಾ ಎಂದು ಪ್ರಶ್ನಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.