ಮೇರು ಕ್ಯಾಬ್ ನಲ್ಲಿ ದೆಹಲಿ ಮಹಿಳೆಯ ಅಪಹರಣ; ಗ್ಯಾಂಗ್ ರೇಪ್
ಮೂವರು ಮೇರು ಟ್ಯಾಕ್ಸಿ ಕ್ಯಾಬಿನಲ್ಲಿ ದೆಹಲಿಯ ಮಹಿಳೆಯೊಬ್ಬರನ್ನು ಅಪಹರಿಸಿ ಹತ್ತಿರದ ಅಂಗಡಿಗೆ ಕೊಂಡೊಯ್ದು, ಗ್ಯಾಂಗ್ ರೇಪ್ ಮಾಡಿರುವ ಘಟನೆ ನಡೆದಿದೆ ಎಂದು

ನವದೆಹಲಿ: ಮೂವರು ಮೇರು ಟ್ಯಾಕ್ಸಿ ಕ್ಯಾಬಿನಲ್ಲಿ ದೆಹಲಿಯ ಮಹಿಳೆಯೊಬ್ಬರನ್ನು ಅಪಹರಿಸಿ ಹತ್ತಿರದ ಅಂಗಡಿಗೆ ಕೊಂಡೊಯ್ದು, ಗ್ಯಾಂಗ್ ರೇಪ್ ಮಾಡಿರುವ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಮೂವರಲ್ಲಿ ಒಬ್ಬ ಮಹಿಳೆಗೆ ಗೊತ್ತಿದ್ದವನು ಎಂದು ಅವರು ಹೇಳಿದ್ದಾರೆ.
ಕ್ಯಾಬಿನಲ್ಲಿದ್ದ ಮೂವರು ೩೭ ವರ್ಷದ ಮಹಿಳೆಯನ್ನು ಅಪಹರಿಸಿ ಅಂಗಡಿಯೊಂದಕ್ಕೆ ಕೊಂಡೊಯ್ದಿದ್ದಾರೆ. ಅಲ್ಲಿ ಕಾಯುತ್ತಿದ್ದ ಇನ್ನಿಬ್ಬರ ಒಡಗೂಡಿ ಐದೂ ಜನ ಮಹಿಳೆಯರನ್ನು ರೇಪ್ ಮಾಡಿದ್ದಾರೆ.
ಪಂಕ್ಚರ್ ರಿಪೇರಿ ಅಂಗಡಿ ಬಳಿ ತನ್ನನ್ನು ರೇಪ್ ಮಾಡಿದ್ದಾರೆ ಎಂದು ಮಹಿಳೆ ದೂರು ನೀಡಿದ್ದಾಳೆ.
"ಮಹಿಳೆಯ ದೂರಿನ ಮೇರೆಗೆ ಅಪಹರಣ ಮತ್ತು ಗ್ಯಾಂಗ್ ರೇಪ್ ಪ್ರಕರಣ ದಾಖಲಿಸಲಾಗಿದ್ದು, ಎಲ್ಲ ಆಪಾದಿತರನ್ನು ಬಂದಿಸಲಾಗಿದೆ" ಎಂದು ಪೊಲೀಸ್ ಉಪಾಯುಕ್ತ ಪುಶ್ಪೇಂದ್ರ ಕುಮಾರ್ ತಿಳಿಸಿದ್ದಾರೆ.
ದೂರು ನೀಡಿರುವ ಮಹಿಳೆ ತಮ್ಮ ಪತಿಯಿಂದ ಬೇರ್ಪಟ್ಟಿದ್ದು ತನ್ನ ಮೂವರು ಮಕ್ಕಳೊಂದಿಗೆ ಸಾಗರಾಪುರದಲ್ಲಿ ವಾಸಿಸುತ್ತಾರೆ. ಗುರುವಾರ ರಾತ್ರಿ ಸುಮಾರು ೧೦:೩೦ಕ್ಕೆ ಎಳನೀರು ಮತ್ತು ಔಷಧಿಗಳನ್ನು ತರಲು ಮನೆಯಿಂದ ಹೊರಬಿದ್ದಿದ್ದರು. ಮಾರುಕಟ್ಟೆಯತ್ತ ನಡೆಯಬೇಕಾದರೆ ಮೇರು ಕ್ಯಾಬ್ ಒಂದು ಬಳಿ ಬಂದು ನಿಂತಿದೆ, ಪರಿಚಯಸ್ಥ ಚಾಲಕ ಮತ್ತು ಹಿಂದಿನ ಸೀಟಿನಲ್ಲಿ ಕುಳಿತಿದ್ದ ಇಬ್ಬರು ಪುರುಷರು ಮಹಿಳೆಯನ್ನು ಒಳಗೆಳೆದು ಬಾಯಿಗೆ ಬಟ್ಟೆ ಕಟ್ಟಿ ಕಿರುಚಿಕೊಂಡರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ನಂತರ ಪೀರಗರ್ಹಿ ಬಳಿಯ ಅಂಗಡಿಯೊಂದರ ಬಳಿ ಕಾಯುತ್ತಿದ್ದ ಇನ್ನಿಬ್ಬರು ಪುರುಷರನ್ನು ಒಡಗೂಡಿದ ಈ ಮೂವರು, ಒಬ್ಬೊಬ್ಬರಾಗಿ ಮಹಿಳೆಯನ್ನು ರೇಪ್ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಸುಮಾರು ೪:೩೦ಕ್ಕೆ ಮಹಿಳೆಯನ್ನು ಬಿಟ್ಟಿರುವ ಅಪಹಣಕಾರರು, ಪೊಲೀಸರಿಗೆ ಹೇಳಿದರೆ ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನು ಹಾಕಿದ್ದಾರೆ. ಆದರೆ ನಂತರ ಪೊಲೀಸರಿಗೆ ಮಹಿಳೆ ದೂರು ನೀಡಿದ್ದು, ಮಹಿಳೆಗೆ ರೇಪ್ ಆಗಿರುವುದು ವೈದ್ಯಕೀಯ ಪರೀಕ್ಷೆಯಿಂದ ಧೃಢಪಟ್ಟಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


