ಪ್ರಧಾನ ಸುದ್ದಿ

ಭಾರಿ ಮಳೆಗೆ ಕಾಂಪೌಂಡ್ ಕುಸಿದು ಮೂವರು ಸಾವು

ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಂಪಿಗೆಹಳ್ಳಿ ಹೆಗ್ಡೆನಗರ ಸಮೀಪದ ಚೊಕ್ಕನಹಳ್ಳಿಯಲ್ಲಿ ಕಾರ್ಮಿಕರ ತಾತ್ಕಾಲಿಕ ಶೆಡ್‍ಗಳ ಮೇಲೆ ಕಾಂಪೌಂಡ್ ಕುಸಿದು ಮೂವರು ಕಾರ್ಮಿಕರು ಮೃತಪಟ್ಟು 9 ಮಂದಿ ಗಾಯಗೊಂಡಿದ್ದಾರೆ...

ಭಾರಿ ಮಳೆಗೆ ಕಾಂಪೌಂಡ್ ಕುಸಿದು ಮೂವರು ಸಾವು
ಭಾರಿ ಮಳೆಗೆ ಕಾಂಪೌಂಡ್ ಕುಸಿದು ಮೂವರು ಸಾವು
Published On :

ಬೆಂಗಳೂರು: ಭಾನುವಾರ ರಾತ್ರಿ ಸುರಿದ ಭಾರಿ ಮಳೆಗೆ ಸಂಪಿಗೆಹಳ್ಳಿ ಹೆಗ್ಡೆನಗರ ಸಮೀಪದ ಚೊಕ್ಕನಹಳ್ಳಿಯಲ್ಲಿ ಕಾರ್ಮಿಕರ ತಾತ್ಕಾಲಿಕ ಶೆಡ್‍ಗಳ ಮೇಲೆ ಕಾಂಪೌಂಡ್ ಕುಸಿದು ಮೂವರು ಕಾರ್ಮಿಕರು ಮೃತಪಟ್ಟು 9 ಮಂದಿ ಗಾಯಗೊಂಡಿದ್ದಾರೆ.

ಚೊಕ್ಕನಹಳ್ಳಿಯಲ್ಲಿ ನಿರ್ಮಾಣ ಹಂತದ ಅಪಾರ್ಟ್‍ಮೆಂಟ್‍ವೊಂದರ ಬಳಿ ಕಾರ್ಮಿಕರು ವಾಸಕ್ಕೆ ಕಾಂಪೌಂಡ್‍ಗೆ ಹೊಂದಿಕೊಂಡಂತೆ ಶೆಡ್‍ಗಳನ್ನು ನಿರ್ಮಿಸಲಾಗಿದೆ. ರಾತ್ರಿ 7ರ ನಂತರ ಆರಂಭವಾದ ಜೋರು ಮಳೆಯಿಂದ ಶಿಥಿಲಗೊಂಡ ಕಾಂಪೌಂಡ್ ಶೆಡ್‍ಗಳ ಮೇಲೆ ಬಿದ್ದಿದೆ. ಈ ವೇಳೆ ಶೆಡ್‍ನೊಳಗೆ 8ಕ್ಕೂ ಹೆಚ್ಚು ಕಾರ್ಮಿಕರಿದ್ದರು. ಅವರೆಲ್ಲ ರಕ್ಷಣೆಗಾಗಿ ಗೊಗರೆಯುತ್ತಿದ್ದರು. ಕೂಡಲೇ ಸಮೀಪದ ನಿವಾಸಿಗಳು ಶೆಡ್ ನೊಳಗಿದ್ದ ಕೆಲವರನ್ನು ರಕ್ಷಿಸಿ ಅಗ್ನಿಶಾಮಕ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ.

ನಂತರ ತಕ್ಷಣ ಸ್ಥಳಕ್ಕೆ ಹೆಬ್ಬಾಳ ಹಾಗೂ ಹೈಗ್ರೌಂಡ್ಸ್ ಅಗ್ನಿಶಾಮಕ ಠಾಣೆಯಿಂದ ಎರಡು ರಕ್ಷಣಾ ವಾಹನಗಳು ತೆರಳಿ ಒಳಗೆ ಸಿಲುಕಿದವರನ್ನು ರಕ್ಷಿಸಿಸಲು ಮುಂದಾದರು. ಆದರೆ, ಸ್ಥಳದಲ್ಲೇ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು ಸಣ್ಣಪುಟ್ಟ ಗಾಯಗಳಾಗಿದ್ದ 6 ಮಂದಿಯನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಮೃತರ ಹೆಸರು, ವಿಳಾಸ ಸೇರಿದಂತೆ ಇತರ ಮಾಹಿತಿ ಲಭ್ಯವಾಗಿಲ್ಲ ಎಂದು ಸಂಪಿಗೆಹಳ್ಳಿ ಪೊಲೀಸರು ಹೇಳಿದ್ದಾರೆ. ರಾತ್ರಿ ಸುರಿದ ಗುಡುಗು ಸಹಿತ ಧಾರಾಕಾರ ಮಳೆಯಿಂದ ಜನ ತತ್ತರಿಸಿ ಹೋಗಿದ್ದಾರೆ. ಮೂರು ತಾಸಿಗೂ ಹೆಚ್ಚು ಕಾಲ ಎಡಬಿಡದೆ ಸುರಿದ ಮಳೆ ನೀರು ಹಲವೆಡೆ ಮನೆಗಳಿಗೆ ನುಗ್ಗಿದ್ದರಿಂದ ನಿವಾಸಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಸ್ತೆಗಳು ನೀರಿನಿಂದ ತುಂಬಿದ್ದರಿಂದ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದ್ದು ಮಾತ್ರವಲ್ಲದೆ, ವಿದ್ಯುತ್ ಕಂಬಗಳು ಹಾಗೂ ಮರಗಳು ನೆಲಕ್ಕುರುಳಿವೆ.

ದಿಣ್ಣೂರು, ಆರ್.ಆರ್.ನಗರದ ಬೆಮೆಲ್ ನಗರ, ಕೆ.ಆರ್.ಪುರದ ವಿಜಿನಾಪುರ, ಹೆಬ್ಬಾಳ, ಕೆಂಪಾಪುರ, ಉದಯಶಂಕರ್ ನಗರ ಸೇರಿದಂತೆ ಹಲವು ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದ್ದರೆ, ಟಿನ್ ಫ್ಯಾಕ್ಟರಿ, ಎಚ್‍ಆರ್‍ಬಿಆರ್ ಬಡಾವಣೆ, ಉದಯನಗರ ಮತ್ತಿತರೆ ಕಡೆ ಮರಗಳು ಬಿದ್ದಿವೆ. ಅರಮನೆ ರಸ್ತೆ, ಶಿವಾನಂದ ಅಂಡರ್‍ಪಾಸ್, ಯಲಹಂಕ ರೈಲ್ವೆ ಕೆಳಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದವು.

ಕಮ್ಮನಹಳ್ಳಿಯ ಪ್ರದೇಶದಲ್ಲಿ ಮರದ ಕೊಂಬೆ ಬಿದ್ದು ಕೆಲವೊತ್ತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಲ್ಲದೆ ವಿವೇಕಾನಂದನಗರದಲ್ಲೂ ಸಹ ಮಳೆ ನೀರು ಹೆಚ್ಚಾಗಿ ಚರಂಡಿ ತುಂಬಿ ಹರಿಯಿತು. ಇದರಿಂದ ಸ್ಥಳೀಯ ಜನರು ತ್ರಾಸ ಅನುಭವಿಸುವಂತಾಯಿತು. ಈ ಸಂಬಂಧ ಬಿಬಿಎಂಪಿ ಕಂಟ್ರೋಲ್ ರೂಂಗೆ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಸಿಬ್ಬಂದಿ ಕೂಡಲೇ ಸನ್ನದಟಛಿಗೊಂಡು ಸಂತ್ರಸ್ತ ಪ್ರದೇಶಕ್ಕೆ ತೆರಳಿ ಪರಿಹಾರ ಕಾರ್ಯ ಕೈಗೊಂಡರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.