ಹೋರಾಟಕ್ಕೆ ನಟ ಸುದೀಪ್ ಬೆಂಬಲ
ಕಳಸಾಬಂಡೂರಿ ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಗುರುವಾರ ಚಲನಚಿತ್ರ ನಟ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರಲ್ಲಿ ಇನ್ನಷ್ಟು ಕೆಚ್ಚು ತುಂಬಿತು...

ಹುಬ್ಬಳ್ಳಿ: ಕಳಸಾಬಂಡೂರಿ ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಗುರುವಾರ ಚಲನಚಿತ್ರ ನಟ ಕಿಚ್ಚ ಸುದೀಪ್ ಬೆಂಬಲ ವ್ಯಕ್ತಪಡಿಸಿದ್ದು, ಪ್ರತಿಭಟನಾಕಾರರಲ್ಲಿ ಇನ್ನಷ್ಟು ಕೆಚ್ಚು ತುಂಬಿತು.
ಬೆಂಗಳೂರಿನಿಂದ ನೇರವಾಗಿ ಗದಗ ಜಿಲ್ಲೆ ನರಗುಂದದಕ್ಕೆ ಆಗಮಿಸಿದ್ದ ಸುದೀಪ್, ರೈತರನ್ನು ಹುರಿದುಂಬಿಸಿದರು. ಮಹದಾಯಿ ನೀರು ಕಾವೇರಿಯಷ್ಟೆ ಪ್ರಮುಖವಾಗಿದ್ದು, ಈ ನೀರಿನ ಹಕ್ಕು ಪಡೆಯಲು ರೈತರೊಂದಿಗೆ ತಾವು ಯಾವುದೇ ಹೋರಾಟಕ್ಕೆ ಸಿದ್ಧ ಎಂದು ಘೋಷಿಸಿದಾಗ ನೆರೆದಿದ್ದ ಅಪಾರ ಸಂಖ್ಯೆಯ ಯುವ ರೈತರ ಕೇಕೆ ಮುಗಿಲು ಮುಟ್ಟಿತು. ನಟ ಸುದೀಪ್ ಹೋರಾಟದ ವೇದಿಕೆಗೆ ಆಗಮಿಸಲಿದ್ದಾರೆ ಎನ್ನುವ ಸುದ್ದಿ ಅರಿತು ಹಳ್ಳಿ ಪಟ್ಟಣಗಳಿಂದ ಚಕ್ಕಡಿ, ಟ್ರ್ಯಾಕ್ಟರ್‍ಗಳಲ್ಲಿ ಅಪಾರ ಸಂಖ್ಯೆಯ ರೈತರು ನರಗುಂದಕ್ಕೆ ಆಗಮಿಸಿದ್ದರು. ಹೋರಾಟ ನಿರತ ರೈತರಲ್ಲಿ ಸುದೀಪ್ ಬೆಂಬಲ ಸಂಚಲನ ಮೂಡಿಸಿತು. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಮುಳ್ಳೂರ ಗ್ರಾಮದ ರೈತರು ನರಗುಂದ ದಲ್ಲಿ ಗುರುವಾರ ಹುಬ್ಬಳ್ಳಿಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಿದರು.
ಅಲ್ಲಿನ ಕೋರ್ಟ್ ವೃತ್ತದಲ್ಲಿ ಹೆದ್ದಾರಿ ತಡೆದು ಒಣಗಿದ ಗೋವಿನ ಜೋಳ ಪ್ರದರ್ಶನ ಮಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರೈತ ಸೇನಾ ಸಂಘಟನೆ ನಡೆಸುತ್ತಿರುವ ಹೋರಾಟದಲ್ಲಿ ಭಾಗವಹಿಸಿದರು. ನವಲಗುಂದದಲ್ಲೂ ಬಂದ್ ಮುಂದುವರೆದಿತ್ತು. ಗದಗ ಮತ್ತಿತರೆಡೆ ಪ್ರತಿಭಟನಾ ಮೆರವಣಿಗೆಗೂ ನಡೆದವು.
ಸಂಸದರ ಮನೆ ಎದುರು ಭಜನೆ
ತಮ್ಮನ್ನು ಅವಮಾನಿಸಿದ್ದಾರೆಂದು ಆರೋಪಿಸಿ ಧಾರ ವಾಡ ಜಿಲ್ಲೆಯ ಸಾವಿರಾರು ಬಿಜೆಪಿ ಸಂಸದ ಪ್ರಹ್ಲಾದ್ ಜೋಶಿ ಅವರ ಹುಬ್ಬಳ್ಳಿ ಮನೆಯ ಎದುರು ಸಾಮೂಹಿಕ ಭಜನೆ ನಡೆಸಿ ಕ್ಷಮೆಗೆ ಆಗ್ರಹಿಸಿದರು. ಕ್ಷಮೆ ಕೋರುವಂತೆ ಗಡುವು ನೀಡಿದ್ದ ರೈತರು ಆ ಗಡುವಿನ ಒಳಗಾಗಿ ಸಂಸದ ಜೋಷಿ ಕ್ಷಮೆ ಕೋರದಿರುವ ಹಿನ್ನೆಲೆಯಲ್ಲಿ ಇಂದು ಭಜನೆ ಆರಂಭಿಸಿದ್ದಾರೆ. ರೈತರು ಅಪಾರ ಸಂಖ್ಯೆಯಲ್ಲಿ ಆಗಮಿಸುವ ಸುದ್ದಿ ತಿಳಿದ ಪೊಲೀಸರು ಜೋಷಿ ಮನೆಗೆ ಭದ್ರ ಕಾವಲು ಹಾಕಿದ್ದರು ಮತ್ತು ರೈತರನ್ನು ಆಣತಿ ದೂರದಲ್ಲೇ ತಡೆದು ನಿಲ್ಲಿಸಿದರು. ಆದರೆ, ಪಟ್ಟುಬಿಡದ ರೈತರು ಕ್ಷಮೆ ಯಾಚಿಸುವವರೆಗೆ ಜೋಶಿ ಸವರ ಮನೆ ಎದುರು ಭಜನೆ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಧಾರವಾಡ, ಹುಬ್ಬಳ್ಳಿ, ಕುಂದಗೋಳದಲ್ಲಿ ಗುರುವಾರವೂ ಪ್ರತಿಭಟನೆ ಮುಂದುವರೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


