ಪ್ರಧಾನ ಸುದ್ದಿ

ಭಾರತ ಸರ್ಕಾರದ ನಿಜವಾದ ಬಾಸ್ ಮೋಹನ್ ಭಾಗವತ್: ಮನೀಶ್ ತಿವಾರಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ನ ಅಧ್ಯಕ್ಷ ಮೋಹನ್ ಭಾಗವತ್ ಭಾರತೀಯ ಸರ್ಕಾರದ ನಿಜವಾದ ಬಾಸ್ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ

ಭಾರತ ಸರ್ಕಾರದ ನಿಜವಾದ ಬಾಸ್ ಮೋಹನ್ ಭಾಗವತ್: ಮನೀಶ್ ತಿವಾರಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ನ ಅಧ್ಯಕ್ಷ ಮೋಹನ್ ಭಾಗವತ್
Published On :

ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ನ ಅಧ್ಯಕ್ಷ ಮೋಹನ್ ಭಾಗವತ್ ಭಾರತೀಯ ಸರ್ಕಾರದ ನಿಜವಾದ ಬಾಸ್ ಎಂದು ಕಾಂಗ್ರೆಸ್ ಮುಖಂಡ ಮನೀಶ್ ತಿವಾರಿ ಗುರುವಾರ ಹೇಳಿದ್ದಾರೆ.

"ನರೇಂದ್ರ ಮೋದಿ ಭಾರತದ ಪ್ರಧಾನ ಮಂತ್ರಿ ಆಗಿರಬಹುದು, ಆರೆ ನಿಜವಾದ ಬಾಸ್ ಮೋಹನ್ ಭಾವತ್" ಎಂದಿದ್ದಾರೆ ತಿವಾರಿ.

ಆರ್ ಎಸ್ ಎಸ್ ಮತ್ತು ಬಿಜೆಪಿ ಸಭೆಯ ಬಗೆ ವಾಗ್ದಾಳಿ ನಡೆಸಿದ ತಿವಾರಿ ಬಿಜೆಪಿ ಮುಂದಾಳತ್ವದ ಎನ್ ಡಿ ಎ ಸರ್ಕಾರ ಆರ್ ಎಸ್ ಎಸ್ ಕೈಯಲ್ಲಿನ ಗೊಂಬೆಯಂತೆ ಎಂದಿದ್ದಾರೆ.

"ಈ ಸರ್ಕಾರ ಎರಡು ದಾರಗಳ ಮೇಲೆ ಕುಣಿಯುತ್ತಿರುವ ಗೊಂಬೆಯಂತೆ. ಒಂದು ಸಾಮಜಿಕ-ಸಾಂಸ್ಕೃತಿಕ-ಶೈಕ್ಷಣಿಕ ದಾರವನ್ನು ಆರ್ ಎಸ್ ಎಸ್ ನಿಯಂತ್ರಿಸುತ್ತಿದ್ದರೆ, ಮತ್ತೊಂದು ಆರ್ಥಿಕ ದಾರವನ್ನು ಕೆಲವು ಸಿರಿವಂತ ಉದ್ದಿಮೆದಾರರು ನಿಯಂತ್ರಿಸುತ್ತಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

ಮೂರು ದಿನದ ಆರ್ ಎಸ್ ಎಸ್ ಮತ್ತು ಬಿಜೆಪಿ ಸಮನ್ವಯ ಸಭೆ ನವದೆಹಲಿಯಲ್ಲಿ ನಡೆದಿದ್ದು ಎರಡೂ ಸಂಘಟನೆಗಳ ಹಿರಿಯ ಮುಖಂಡರು ಭಾಗವಹಿಸಿದ್ದಾರೆ.

ನೆನ್ನೆ ಬುಧವಾರ ಸಭೆಯ ಮೊದಲ ದಿನವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.