ಭಾರತ ಪ್ರಮುಖ ಮಿತ್ರ ದೇಶ: ಆಸ್ಟ್ರೇಲಿಯಾ ಭದ್ರತಾ ಸಚಿವ
ಭಾರತ ಪ್ರಮುಖ ಮಿತ್ರ ದೇಶ ಮತ್ತು ಆಸ್ಟ್ರೇಲಿಯಾ ಭಾರತದ ಜೊತೆ ಮಿಲಿಟರಿ ಸಂಬಂಧಗಳನ್ನು ವೃದ್ಧಿಸುವುದರೆಡೆಗೆ ಆಸಕ್ತಿ ಹೊಂದಿದೆ ಎಂದು ಆಸ್ಟ್ರೇಲಿಯಾ ಭದ್ರತಾ

ನವದೆಹಲಿ: ಭಾರತ ಪ್ರಮುಖ ಮಿತ್ರ ದೇಶ ಮತ್ತು ಆಸ್ಟ್ರೇಲಿಯಾ ಭಾರತದ ಜೊತೆ ಮಿಲಿಟರಿ ಸಂಬಂಧಗಳನ್ನು ವೃದ್ಧಿಸುವುದರೆಡೆಗೆ ಆಸಕ್ತಿ ಹೊಂದಿದೆ ಎಂದು ಆಸ್ಟ್ರೇಲಿಯಾ ಭದ್ರತಾ ಸಚಿವ ಕೆವಿನ್ ಆಂಡ್ರ್ಯೂಸ್ ಬುಧವಾರ ತಿಳಿಸಿದ್ದಾರೆ.
ಭದ್ರತಾ ಅಧ್ಯಯನ ಮತ್ತು ಪರಿಶೀಲನೆ ಸಂಸ್ಥೆಯಲ್ಲಿ ನಡೆದ ಸಮಾವೇಶದಲ್ಲಿ ಭಾಗವಹಿಸಿದ್ದ ಅವರು, ಸೌಥ್ ಚೈನಾ ಸಮುದ್ರದಲ್ಲಿ ಚೈನಾದ ಚಟುವಟಿಕೆಗಳು ಆತಂಕಕಾರಿಯಾಗೇನೂ ಇಲ್ಲ ಆದರೆ ಚೈನಾ ತನ್ನ ಹಿತಾಸಕ್ತಿಗಳನ್ನು ಸ್ಪಷ್ಟಪಡಿಸಬೇಕು ಎಂದಿದ್ದಾರೆ.
"ಭಾರತ ಪ್ರಮುಖ ಮಿತ್ರ ದೇಶ.... ಭಾರತೀಯ ಮಹಾಸಾಗರ ಪ್ರದೇಶದಲ್ಲಿ ಸ್ಥಿರತೆ ಒದಗಿಸುವುದರಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿರುವುದನ್ನು ಆಸ್ಟ್ರೇಲಿಯಾ ಗುರುತಿಸಿದೆ" ಎಂದು ಅವರು ತಿಳಿಸಿದ್ದಾರೆ.
ಆಂಡ್ರ್ಯೂಸ್ ಆಸ್ಟ್ರೇಲಿಯಾದಲ್ಲಿ ಮಿಲಿಟರಿ ತಾಲೀಮು ನಡೆಸಲು ಭಾರತೀಯ ವಾಯುಪಡೆಗ ಆಹ್ವಾನ ನೀಡಿದ್ದಾರೆ.
ಭಾರತಕ್ಕೆ ಮೂರು ದಿವಸದ ಪ್ರವಾಸದಲ್ಲಿರುವ ಆಂಡ್ರ್ಯೂಸ್, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ಮನೋಹರ್ ಪರ್ರಿಕರ್ ಅವರನ್ನು ಭೇಟಿಯಾಗಲಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


