ಗೀತಾ ತಮ್ಮ ಮಗಳೆಂದ ಉತ್ತರಪ್ರದೇಶದ ಪೋಷಕರು
ದಶಕದ ಹಿಂದೆ ಕುಟುಂಬದಿಂದ ಬೇರ್ಪಟ್ಟು ಪಾಕಿಸ್ತಾನದಲ್ಲಿ ಜೀವಿಸುತ್ತಿದ್ದ ಗೀತಾ ಈಗ ಭಾರತಕ್ಕೆ ಹಿಂದಿರುಗಿದ್ದು, ಈ ಪ್ರಕರಣಕ್ಕೆ ಈಗೊಂದು ಹೊಸ ತಿರುವು ಸಿಕ್ಕಿದೆ. ಉತ್ತರಪ್ರದೇಶದ ಕುಟುಂಬವೊಂದು

ಲಕನೌ: ದಶಕದ ಹಿಂದೆ ಕುಟುಂಬದಿಂದ ಬೇರ್ಪಟ್ಟು ಪಾಕಿಸ್ತಾನದಲ್ಲಿ ಜೀವಿಸುತ್ತಿದ್ದ ಗೀತಾ ಈಗ ಭಾರತಕ್ಕೆ ಹಿಂದಿರುಗಿದ್ದು, ಈ ಪ್ರಕರಣಕ್ಕೆ ಈಗೊಂದು ಹೊಸ ತಿರುವು ಸಿಕ್ಕಿದೆ. ಉತ್ತರಪ್ರದೇಶದ ಕುಟುಂಬವೊಂದು ಮೂಕಿ ಮತ್ತು ಕಿವುಡು ತೊಂದರೆಯಿರುವ ಈ ಬಾಲಕಿಯನ್ನು ತಮ್ಮ ಕುಟುಂಬದ ಸದಸ್ಯೆ ಎಂದು ಹೇಳಿದ್ದಾರೆ.
ಮಹೇಶ್ಗಂಜ್ ನಿವಾಸಿಗಳಾದ ರಾಮರಾಜ್ ಗೌತಮ್ ಮತ್ತು ಅವರ ಪತ್ನಿ ಅನಾರಾ ದೇವಿ ಅಲಹಾಬಾದ್ ನ ವಿಭಾಗೀಯ ಕಮಿಷನರ್ ರಜನ್ ಶುಕ್ಲಾ ಅವರನ್ನು ಭೇಟಿ ಮಾಡಿ ತಮ್ಮ ಮಗಳನ್ನು ಹಿಂದೆ ಪಡೆಯಲು ಎಲ್ಲ ಪರೀಕ್ಷೆಗೂ ಸಿದ್ಧ ಇರುವುದಾಗಿ ತಿಳಿಸಿದ್ದಾರೆ.
ಸುಮಾರು ೧೧ ವರ್ಷದ ಬಾಲಕಿಯಾಗಿರುವಾಗ ಗೀತಾ ಆಕಸ್ಮಿಕವಾಗಿ ಪಾಕಿಸ್ತಾನ ತಲುಪಿದ್ದಳು. ಲಾಹೋರಿನಲ್ಲಿ ಈ ಬಾಲಕಿಯನ್ನು ಕಂಡಿದ್ದ ಪಾಕಿಸ್ತಾನ ರೇಂಜರ್ಸ್ ಎಧಿ ಫೌಂಡೇಶನ್ ಗೆ ಒಪ್ಪಿಸಿದ್ದರು. ಈ ಸಾಮಾಜಿಕ ಕಾರ್ಯಕರ್ತ ಸಂಸ್ಥೆ ಬಾಲಕಿಯನ್ನು ೧೦ ವರ್ಷದವರೆಗೆ ನೋಡಿಕೊಂಡಿತ್ತು.
ಭಾರತ ಸರ್ಕಾರದ ಸಹಾಯದಿಂದ ಸೋಮವಾರ ಭಾರತಕ್ಕೆ ಹಿಂದಿರುಗಿದ ಗೀತಾಳಿಗೆ ಭವ್ಯ ಸ್ವಾಗತ ಸಿಕ್ಕಿತ್ತು. ಬಿಹಾರದ ಮಹತೋಸ್ ಕುಟುಂಬ ಗೀತಾ ತಮ್ಮ ಮಗಳೆಂದು ತಿಳಿಸಿದ್ದರು, ಆದರೆ ಬಾಲಕಿಗೆ ಈ ಪೋಷಕರನ್ನು ಗುರುತಿಸಲು ಸಾಧ್ಯವಾಗಿಲ್ಲ.
ಈಗ ಡಿ ಎನ್ ಎ ಪರೀಕ್ಷೆಯಿಂದಲೇ ಗೀತಾಳ ಪೋಷಕರನ್ನು ಪತ್ತೆ ಹಚ್ಚಬಹುದಾಗಿದ್ದು, ಈ ಪರೀಕ್ಷೆಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


