ಪ್ರಧಾನ ಸುದ್ದಿ

ದುರ್ಗಾ ಪೂಜೆಗೆ ಸಮಸ್ತ ಜನತೆಗೆ ಹಾರೈಸಿದ ರಾಷ್ಟ್ರಪತಿ

ದುರ್ಗಾ ಪೂಜೆಯ ಸಲುವಾಗಿ ದೇಶದ ಜನತೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.

ದುರ್ಗಾ ಪೂಜೆಗೆ ಸಮಸ್ತ ಜನತೆಗೆ ಹಾರೈಸಿದ ರಾಷ್ಟ್ರಪತಿ
ದುರ್ಗಾ ಮಾತೆ
Published On :

ನವದೆಹಲಿ: ದುರ್ಗಾ ಪೂಜೆಯ ಸಲುವಾಗಿ ದೇಶದ ಜನತೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.

"ದುರ್ಗಾ ಪೂಜೆಯ ಈ ಸಂತಸದ ಸಂದರ್ಭದಲ್ಲಿ ದೇಶದಲ್ಲಿರುವ ಮತ್ತು ವಿದೇಶದಲ್ಲಿರುವ ಎಲ್ಲ ಭಾರತೀಯರಿಗೂ ನನ್ನ ಶುಭ ಹಾರೈಕೆಗಳು" ಎಂದು ಮುಖರ್ಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಅಸತ್ಯದ ಮೇಲೆ ಸತ್ಯದ ಗೆಲುವು, ಕೆಟ್ಟದರ ಮೇಲೆ ಒಳ್ಳೆಯದು, ಕತ್ತಲನ್ನು ತೊಳೆಯುವ ಬೆಳಕು ಹಾಗೂ ಅಜ್ಞಾನದ ಮೇಲೆ ಜ್ಞಾನದ ಗೆಲುವನ್ನು ದುರ್ಗಾ ಪೂಜೆ ಪ್ರತಿನಿಧಿಸುತ್ತದೆ" ಎಂದು ಅವರು ತಿಳಿಸಿದ್ದಾರೆ.

"ದೇವಿ ದುರ್ಗಾ ನಮ್ಮೆಲ್ಲರನ್ನೂ ನ್ಯಾಯದ, ಸತ್ಯದ ಮತ್ತು ಜ್ಞಾನದ ಮಾರ್ಗದಲ್ಲಿ ನಡೆಸಲಿ. ಈ ದೇವಿ ನಮ್ಮಲ್ಲಿ ಭ್ರಾತೃತ್ವ ಮತ್ತು ಎಲ್ಲರಿಗೂ ಪ್ರೀತಿ ತೋರುವ ಭಾವನೆಯನ್ನು ಕರುಣಿಸಲಿ" ಎಂದು ಕೂಡ ಆವರು ಹೇಳಿದ್ದಾರೆ.

"ನಮ್ಮ ಸಮಾಜದ ಮಾನವೀಯ ಮೌಲ್ಯಗಳ ತಳಹದಿಯನ್ನು ಈ ಹಬ್ಬ ಬಲಪಡಿಸಲಿ ಮತ್ತು ನಮ್ಮನ್ನು ಒಡೆಯುವ, ನಾಶ ಮಾಡುವ ಸಂಗತಿಗಳಿಂದ ದೂರವಿರಿಸಲಿ" ಎಂದು ಕೂಡ ಹಾರೈಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.