ರಾಜಕಾರಣ ಸೇರುವ ಇರಾದೆಯಿಲ್ಲ: ಅಜಯ್ ದೇವಗನ್
ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಬಿಜೆಪಿ ಮುಖಂಡ ಸುನಿಲ್ ಕುಮಾರ್ ಅವರ ಪ್ರಚಾರ ಸಭೆಯಲ್ಲಿ ಕಳೆದ ವಾರ ಪಾಲ್ಗೊಂಡ ಬಾಲಿವುಡ್ ನಟ ಅಜಯ್ ದೇವಗನ್

ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯ ಬಿಜೆಪಿ ಮುಖಂಡ ಸುನಿಲ್ ಕುಮಾರ್ ಅವರ ಪ್ರಚಾರ ಸಭೆಯಲ್ಲಿ ಕಳೆದ ವಾರ ಪಾಲ್ಗೊಂಡ ಬಾಲಿವುಡ್ ನಟ ಅಜಯ್ ದೇವಗನ್ ಅವರು ರಾಜಕಾರಣ ಸೇರುವ ಯಾವುದೇ ಇರಾದೆ ಇಲ್ಲ ಎಂದು ತಿಳಿಸಿದ್ದಾರೆ.
ರಾಜಕೀಯಕ್ಕೆ ಸೇರುವಿರೇ ಎಂಬ ಪ್ರಶ್ನೆಗೆ "ಸಾಧ್ಯವೇ ಇಲ್ಲ. ನಾನು ಇದನ್ನು ಮೊದಲೇ ಹೇಳಿದ್ದೇನೆ. ನನಗೆ ರಾಜಕೀಯ ಸೇರುವ ಯಾವುದೇ ಇರಾದೆ ಇಲ್ಲ" ಎಂದಿದ್ದಾರೆ.
ಪ್ರಕಾಶ್ ಝಾ ಅವರ 'ಗಂಗಾಜಲ್' ಮತ್ತು 'ಆರಕ್ಷಣ್' ಸಿನೆಮಾಗಳ ನಟನೆಯಿಂದ ಬಿಹಾರದಲ್ಲಿ ಬಹಳ ಪ್ರಖ್ಯಾತವಾಗಿರುವ ನಟ ಬಿಹಾರದ ಕೆಲವು ಪ್ರಚಾರ ಸಭೆಗಳನ್ನು ತಪ್ಪಿಸಿಕೊಂಡಿದ್ದಾರೆ. ಕಾರಣ ಬೃಹತ್ ಸಂಖ್ಯೆಯಲ್ಲಿ ಜನ ನೆರೆದಿದ್ದರಿಂದ ಹೆಲಿಕ್ಯಾಪ್ಟರ್ ಇಳಿಸದೆ ಆಗದಿದ್ದುದು.
ಇದರಿಂದ ಬಿಹಾರ್ಶರೀಫ್ ಮತ್ತು ನಲಂದಾ ಜನರಲ್ಲಿ ಟ್ವಿಟ್ಟರ್ ಮೂಲಕ ಕ್ಷಮೆ ಕೋರಿದ್ದು "ಬಿಹಾರ್ಶರೀಫ್ ಮತ್ತು ನಲಂದಾ ರ್ಯಾಲಿಗಳಿಗೆ ಬರಲಾಗದಿದ್ದಕ್ಕೆ ಕ್ಷಮೆ ಕೋರುತ್ತೇನೆ. ಜನಸ್ತೋಮ ಹೆಚ್ಚಿದ್ದರಿಂದ ಅಧಿಕಾರಿಗಳು ನನಗೆ ಪರವಾನಗಿ ನೀಡಲಿಲ್ಲ" ಎಂದು ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


