ಪ್ರಧಾನ ಸುದ್ದಿ

ನಟನೆ ಸಾಕು, ಶಿಸ್ತು ಕ್ರಮ ಜರುಗಿಸಿ: ಮೋದಿಗೆ ಕಾಂಗ್ರೆಸ್ ಆಗ್ರಹ

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಾಣ ಮರೆವು ಎಂದು ದೂರಿರುವ ಕಾಂಗ್ರೆಸ್, ದಾದ್ರಿ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಇರುವುದಕ್ಕೆ ಕೇಂದ್ರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್...

ನಟನೆ ಸಾಕು, ಶಿಸ್ತು ಕ್ರಮ ಜರುಗಿಸಿ: ಮೋದಿಗೆ ಕಾಂಗ್ರೆಸ್ ಆಗ್ರಹ
ಕಾಂಗ್ರೆಸ್ ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ
Published On :

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜಾಣ ಮರೆವು ಎಂದು ದೂರಿರುವ ಕಾಂಗ್ರೆಸ್, ದಾದ್ರಿ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದೆ ಇರುವುದಕ್ಕೆ ಕೇಂದ್ರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್, ಬರೀ ನಟನೆಯಲ್ಲ... ಶಿಸ್ತು ಕ್ರಮದ ಅಗತ್ಯ ಇದೆ ಎಂದು ಹೇಳಿದೆ.

"ನರೇಂದ್ರ ಮೋದಿ ಅವರಿಗೆ ಜಾಣ ಮರೆವು. ಅವರು ಇಡೀ ದೇಶದ ಪ್ರಧಾನಿ ಮತ್ತು ದೇಶದ ೧೨೫ ಕೋಟಿ ಜನತೆಯನ್ನು ರಕ್ಷಿಸುವುದು ಅವರ ಕರ್ತವ್ಯ ಎಂದು ಅವರು ಮರೆತಿದ್ದಾರೆ" ಎಂದು ಕಾಂಗ್ರೆಸ್ ನ ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಹೇಳಿದ್ದಾರೆ.

ದಾದ್ರಿ ಪ್ರಕರಣದ ನಂತರ ಪ್ರಧಾನಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೊಂದಿಗೆ ಮಾತುಕತೆ ನಡೆಸಿದ್ದಾರೆಯೇ ಎಂದು ಕೂಡ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

"ಮಹೇಶ್ ಶರ್ಮಾ ವಿರುದ್ಧ ಯಾವ ಕ್ರಮ ಜರುಗಿಸಿದ್ದಾರೆ ಎಂದು ಪ್ರಧಾನಿ ದೇಶಕ್ಕೆ ತಿಳಿಸಬಲ್ಲರೇ? ಮತ್ತೊಬ್ಬ ಮಂತ್ರಿ ಸಂಜೀವ್ ಬಲ್ಯಾನ್ ವಿರುದ್ಧ ಏನು ಕ್ರಮ ಜರುಗಿಸಿದ್ದಾರೆ ಎಂದು ಹೇಳಬಲ್ಲರೇ? ಬಿಜೆಪಿ ಮುಖಂಡರಾದ ಸಂಗೀತ್ ಸೋಮ್ ಮತ್ತು ಸಾದ್ವಿ ಪ್ರಾಚಿ ವಿರುದ್ಧ ಯಾವ ಕ್ರಮ ಜರುಗಿಸಿದ್ದಾರೆ ಎಂದು ಪ್ರಧಾನಿ ತಿಳಿಸಬಲ್ಲರೇ?" ಎಂದು ಸುರ್ಜೇವಾಲಾ ಪ್ರಶ್ನಿಸಿದ್ದಾರೆ.

ಇದಕ್ಕೂ ಮುಂಚೆ ಮೋದಿ ಅವರು ಸಂದರ್ಶನವೊಂದರಲ್ಲಿ ವಿರೋಧ ಪಕ್ಷಗಳು, ದಾದ್ರಿ ಘಟನೆಯನ್ನು ಬಳಸಿಕೊಂಡು ಹುಸಿ ಜಾತ್ಯಾತೀತತೆ ಮತ್ತು ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ ಎಂದು ದೂರಿದ್ದರು. ಈ ಹಿನ್ನಲೆಯಲ್ಲೇ ಕಾಂಗ್ರೆಸ್ ವಕ್ತಾರ ಪ್ರಧಾನಿಯವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

"ಆದುದರಿಂದ ಪ್ರಧಾನಿ ಸಾಹೇಬ್ರೆ, ನಟನೆಯಷ್ಟೇ ಅಲ್ಲ. ಶಿಸ್ತಿನ ಕ್ರಮ ತೆಗೆದುಕೊಳ್ಳಿ" ಎಂದು ಸುರ್ಜೇವಾಲ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.